ಹಳೇ SBI ಎಟಿಎಂ ಕಾರ್ಡ್ ಅವಧಿ ಮುಗಿದಿದೆ; ಹೊಸ ಕಾರ್ಡ್ ಮನೆಗೆ ಬಂದಿಲ್ಲ; ಹಾಗಾದಾಗ ಏನು ಮಾಡಬೇಕು?

ಹಳೆ ಎಟಿಎಂ ಕಾರ್ಡ್ ಅವಧಿ ಮುಗಿದರೂ ಹೊಸ ಕಾರ್ಡ್ ಮನೆಗೆ ಬಂದಿಲ್ಲ ಅಂದಾಗ ಏನು ಮಾಡಬೇಕು ಅನ್ನೋದ್ರ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಪೂರ್ಣ ಮಾಹಿತಿ ನೀಡಿದೆ.
ಎಸ್ ಬಿಐ
ಎಸ್ ಬಿಐ

ಬೆಂಗಳೂರು: ಹಳೆ ಎಟಿಎಂ ಕಾರ್ಡ್ ಅವಧಿ ಮುಗಿದರೂ ಹೊಸ ಕಾರ್ಡ್ ಮನೆಗೆ ಬಂದಿಲ್ಲ ಅಂದಾಗ ಏನು ಮಾಡಬೇಕು ಅನ್ನೋದ್ರ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಪೂರ್ಣ ಮಾಹಿತಿ ನೀಡಿದೆ.

ಮನುಷ್ಯ ಪ್ರಗತಿಯ ಉಚ್ಛಾಯ ಮಟ್ಟದಲ್ಲಿ ಸಾಗುತ್ತಿದ್ದಾನೆ. ಯಾವುದೇ ವಸ್ತು ಬೇಕಂದ್ರೂ ಆತ ಮನೆಯಿಂದಲೇ ಆರ್ಡರ್ ಮಾಡುತ್ತಾನೆ. ಅಲ್ಲದೆ, ಮನೆಯ ಬಾಗಿಲಲ್ಲೇ ಸೇವೆಗಳನ್ನು ನೀಡಲು ಮಲ್ಟಿ ನ್ಯಾಷನಲ್ ಕಂಪನಿಗಳು ತುದಿಗಾಲಲ್ಲಿ ನಿಂತಿವೆ. ಈ ಸಂದರ್ಭದಲ್ಲಿ ಬ್ಯಾಂಕುಗಳು ಸಹ ಹಿಂದೆ ಬಿದ್ದಿಲ್ಲ. ಇಂದಿನ ದಿನಗಳಲ್ಲಿ ಬಹುತೇಕ ಬ್ಯಾಂಕ್‌ಗಳು ಗ್ರಾಹಕರಿಗೆ ಸಂಪೂರ್ಣ ಸೌಲಭ್ಯಗಳನ್ನು ನೀಡುತ್ತಿವೆ. ಗ್ರಾಹಕರು ಆನ್ ಲೈನ್ ನಲ್ಲೇ ಮನೆಯಲ್ಲಿಯೇ ಕುಳಿತು ತಮ್ಮ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ.

ನಿಮ್ಮ ಡೆಬಿಟ್ ಕಾರ್ಡ್ ಅವಧಿ ಮುಗಿದಿದ್ದರೆ ಅಥವಾ ಅವಧಿ ಮುಗಿಯುವ ಹಂತದಲ್ಲಿದ್ದರೆ, ಗ್ರಾಹಕರ ನೋಂದಾಯಿತ ಅಡ್ರೆಸ್ ಗೆ 3 ತಿಂಗಳ ಮೊದಲೇ ಕಾರ್ಡನ್ನು ಕಳುಹಿಸುತ್ತದೆ. ಆದ್ರೆ ಎಟಿಎಂ ಕಾರ್ಡ್‌ ಅವಧಿ ಮುಗಿದರೂ ಕಾರ್ಡ್ ಸಿಗದಿದ್ದರೆ ಏನು ಮಾಡಬೇಕು? ಅನ್ನೋದರ ಬಗ್ಗೆ ಎಸ್‌ಬಿಐ ಗ್ರಾಹಕರಿಗೆ ಮಾಹಿತಿ ನೀಡಿದೆ.

ಇತ್ತೀಚೆಗೆ, ಎಸ್‌ಬಿಐ ಗ್ರಾಹಕರೊಬ್ಬರು, “ತಮ್ಮ ಎಟಿಎಂ ಕಾರ್ಡ್ (ಹಳೆಯ ATM ಕಾರ್ಡ್ 10/21 ರಂದು ಅವಧಿ) ಮುಗಿದಿದೆ. ಆದ್ರೆ ಹೊಸ ಕಾರ್ಡ್ ಮನೆಗೆ ಬಂದಿಲ್ಲ. ಏನು ಮಾಡಬೇಕು” ಅಂತಾ ಟ್ವೀಟ್ ಮಾಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಎಸ್‌ಬಿಐ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದೆ. ಡೆಬಿಟ್ ಕಾರ್ಡ್‌ನ ಅವಧಿ ಮುಗಿಯುವ ಮೂರು ತಿಂಗಳ ಮೊದಲು, ಗ್ರಾಹಕರಿಗೆ ಅವರ ನೋಂದಾಯಿತ ವಿಳಾಸಕ್ಕೆ ಹೊಸ ಕಾರ್ಡ್ ಅನ್ನು ಕಳುಹಿಸುತ್ತದೆ. ಆದರೆ ಅದಕ್ಕಾಗಿ ಕಳೆದ 12 ತಿಂಗಳಲ್ಲಿ ಒಮ್ಮೆಯಾದರೂ ಗ್ರಾಹಕರು ಕಾರ್ಡ್ ಬಳಸಿರಬೇಕು ಎಂಬ ಷರತ್ತನ್ನು ಉಲ್ಲೇಖಿಸಿದೆ.

ಬ್ಯಾಂಕಿನ ನಿಯಮಗಳ ಪ್ರಕಾರ, ಕಳೆದ 12 ತಿಂಗಳಲ್ಲಿ ನೀವು ಒಮ್ಮೆಯಾದರೂ ಕಾರ್ಡ್ ಬಳಸದಿದ್ದರೆ, ನಿಮ್ಮ ಮನೆಗೆ ಸ್ವಯಂಚಾಲಿತ ಕಾರ್ಡ್ (ಎಟಿಎಂ) ಬರುವುದಿಲ್ಲ. ಅಲ್ಲದೆ, ಗ್ರಾಹಕರ ಖಾತೆಗೆ ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಆಗಿರಬೇಕು ಅಂತಾ ತಿಳಿಸಿರುವ ಬ್ಯಾಂಕ್, ಈ ಎಲ್ಲ ಅವಶ್ಯಕ ನಿಯಮಗಳನ್ನು ಪಾಲಿಸಿದಾಗ ಮಾತ್ರ ಎಟಿಎಂ ಕಾರ್ಡ್ ಮನೆಗೆ ಬರುತ್ತದೆ ಅಂತಾ ತಿಳಿಸಿದೆ.

ಈ ಎಲ್ಲ ನಿಯಮ ಪಾಲಿಸಿದಾಗಲೂ ಕಾರ್ಡ್ ಮನೆಗೆ ಬರದಿದ್ದರೆ ಏನು ಮಾಡಬೇಕು?

ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರವೂ ನಿಮ್ಮ ಕಾರ್ಡ್ ನಿಮ್ಮ ಮನೆಗೆ ತಲುಪದಿದ್ದರೆ, ಅಂಥ ಗ್ರಾಹಕರು ತಮ್ಮ ಬ್ಯಾಂಕ್ ಶಾಖೆಯಲ್ಲಿ ಎಲ್ಲಾ ಇತರ ವಿಷಯಗಳಿಗೆ ಹಾಗೂ KYC ದಾಖಲೆಗಳೊಂದಿಗೆ ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಅಂತಾ ಎಸ್‌ಬಿಐ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com