ಮತ್ತೆ ತೈಲೋತ್ಪನ್ನಗಳ ದರ ಏರಿಕೆ: ಮುಂಬೈನಲ್ಲಿ 100 ರೂ. ಗಡಿ ದಾಟಿದ ಡೀಸೆಲ್ ಬೆಲೆ, ಇಂದಿನ ದರ ವಿವರ ಇಂತಿದೆ

ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್ ದರದಲ್ಲಿ 29 ರಿಂದ 31 ಪೈಸೆ ಮತ್ತು ಡೀಸೆಲ್ ದರದಲ್ಲಿ 35 ರಿಂದ 37 ಪೈಸೆ ಏರಿಕೆಯಾಗಿದೆ. 
ಪೆಟ್ರೋಲ್ ದರ
ಪೆಟ್ರೋಲ್ ದರ

ಮುಂಬೈ: ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್ ದರದಲ್ಲಿ 29 ರಿಂದ 31 ಪೈಸೆ ಮತ್ತು ಡೀಸೆಲ್ ದರದಲ್ಲಿ 35 ರಿಂದ 37 ಪೈಸೆ ಏರಿಕೆಯಾಗಿದೆ. 

ಆ ಮೂಲಕ ಶನಿವಾರ ಪೆಟ್ರೋಲಿಯಂ ಉತ್ಪನ್ನಗಳು ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 103.84 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 92.48 ರೂಪಾಯಿ ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 109.8 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 100.25 ರೂಪಾಯಿ ಆಗಿದೆ.

ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 104.48 ರೂಪಾಯಿ ಹಾಗೂ ಲೀಟರ್ ಡಿಸೆಲ್ ದರ 95.54 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 101.24 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96.9 ರೂಪಾಯಿಗೆ ಏರಿಕೆ ಆಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 107.41 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 98.11 ರೂಪಾಯಿಗೆ ಏರಿಕೆ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com