ದಿನವೊಂದಕ್ಕೆ 27 ಕೋಟಿ ದಾನ ಮಾಡಿ, ದೇಶದ ಅತ್ಯುನ್ನತ ಉದಾರಿ ಉದ್ಯಮಿಯಾದ ಅಜಿಂ ಪ್ರೇಂ ಜಿ!

ಸಾಫ್ಟ್ ವೇರ್ ರಫ್ತುದಾರ ವಿಪ್ರೋದ ಅಜಿಂ ಪ್ರೇಂ ಜಿ ದಿನವೊಂದಕ್ಕೆ 27 ಕೋಟಿ ರೂ. ದಾನ ಮಾಡುವುದರೊಂದಿಗೆ  2021ರ ಆರ್ಥಿಕ ವರ್ಷದಲ್ಲಿ ದೇಶದ ಅತ್ಯಂತ ಉದಾರಿ ಉದ್ಯಮಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಭಾರತೀಯ ಉದ್ಯಮಿ ಅಜಿಂ ಪ್ರೇಂ ಜಿ
ಭಾರತೀಯ ಉದ್ಯಮಿ ಅಜಿಂ ಪ್ರೇಂ ಜಿ

ಮುಂಬೈ: ಸಾಫ್ಟ್ ವೇರ್ ರಫ್ತುದಾರ ವಿಪ್ರೋದ ಅಜಿಂ ಪ್ರೇಂ ಜಿ ದಿನವೊಂದಕ್ಕೆ 27 ಕೋಟಿ ರೂ. ದಾನ ಮಾಡುವುದರೊಂದಿಗೆ  2021ರ ಆರ್ಥಿಕ ವರ್ಷದಲ್ಲಿ ದೇಶದ ಅತ್ಯಂತ ಉದಾರಿ ಉದ್ಯಮಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ಎಡೆಲ್ಗೈವ್ ಮತ್ತು ಹುರಾನ್ ಫೌಂಡೇಷನ್ ವರದಿ ಪ್ರಕಾರ ಸಾಂಕ್ರಾಮಿಕದ ವರ್ಷದಲ್ಲಿ ವಿಪ್ರೋ ಕಂಪನಿ ಸಂಸ್ಥಾಪಕರಾದ ಅಜಿಂ ಪ್ರೇಂ ಜಿ, ದೇಣಿಗೆಯನ್ನು ಸುಮಾರು ನಾಲ್ಕನೇ ಒಂದು ಭಾಗದಷ್ಟು ಹೆಚ್ಚಿಸಿದ್ದು, ಈ ವರ್ಷ 9,713 ಕೋಟಿ ದಾನ ಮಾಡಿದ್ದಾರೆ.  ಹೆಚ್ ಸಿಎಲ್ ನ ಶಿವ ನಡಾರ್ ಕಂಪನಿ 1,263 ಕೋಟಿ ಕೊಡುಗೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.

ದೇಶದ ನಂಬರ್ 1 ಶ್ರೀಮಂತ ಮುಖೇಖ್ ಅಂಬಾನಿ, 577 ಕೋಟಿ ದಾನದೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಕುಮಾರ್ ಮಂಗಳಂ ಬಿರ್ಲಾ 377 ಕೋಟಿಯೊಂದಿಗೆ ತದನಂತರದ ಸ್ಥಾನದಲ್ಲಿದ್ದಾರೆ. ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ 183 ಕೋಟಿ ದಾನದೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. 

ಪ್ರಸ್ತುತ, ಶಿಕ್ಷಣ, ಆರೋಗ್ಯದಂತೆ ಅಂಶಕಗಳಿಗೆ ಹೆಚ್ಚಾಗಿ ಹಣವನ್ನು ದೇಣಿಗೆ ನೀಡಲಾಗಿದೆ. ನಿಲೇಕಣಿ ಅವರು ನಿಜವಾಗಿಯೂ ಆಸಕ್ತಿದಾಯಕ ಕೊಡುಗೆಗಳನ್ನು ನೀಡಿದ್ದಾರೆ ಮತ್ತು 10 ವರ್ಷಗಳಲ್ಲಿ, ನಾವು ವಿಶಾಲವಾದ ನಾಗರಿಕ ಸಮಾಜದ ಸಮಸ್ಯೆಗಳ ವೈಶಿಷ್ಟ್ಯವನ್ನು ಪ್ರಾಥಮಿಕ ಕಾರಣಗಳಾಗಿ ಹೊಂದುವುದಾಗಿ ಹುರಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಸಂಶೋಧಕ ಅನಾಸ್ ರೆಹಮಾನ್ ಜುನೈದ್ ಹೇಳಿದ್ದಾರೆ.

ದೇಶದ ಎರಡನೇ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿಪತ್ತು ನಿರ್ವಹಣೆಗಾಗಿ 130 ಕೋಟಿ ದೇಣಿಗೆಯೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.  ಹಿಂದುಜಾ ಪ್ಯಾಮಿಲಾ, ಬಜಾಬ್ ಪ್ಯಾಮಿಲಿ, ಅನಿಲ್ ಅಗರ್ ವಾಲ್ ಮತ್ತು ಬುರ್ಮನ್ ಪ್ಯಾಮಿಲಿ ಟಾಪ್ 10ರ ಸ್ಥಾನದಲ್ಲಿದ್ದಾರೆ. ಎಲ್ ಅಂಡ್ ಟಿ,ಎಂ. ನಾಯಕ್ 112 ಕೋಟಿ ರೂ. ದಾನದೊಂದಿಗೆ 11ನೇ ಸ್ಥಾನದಲ್ಲಿದ್ದಾರೆ. 

ರೋಹಿಣಿ ನಿಲೇಕಣಿ ಸೇರಿದಂತೆ 9 ಮಹಿಳಾ ಉದ್ಯಮಿಗಳು ಕೂಡಾ ಈ ಪಟ್ಟಿಯಲ್ಲಿದ್ದಾರೆ. ಮುಂಬೈ ಮೂಲದ ಉದ್ಯಮಿಗಳು ಶೇ 31 ರಷ್ಟು, ದೆಹಲಿ ಮೂಲದ ಉದ್ಯಮಿಗಳು ಶೇ 17 ಹಾಗೂ ಬೆಂಗಳೂರು ಮೂಲದ ಉದ್ಯಮಿಗಳು ಶೇ. 10 ರಷ್ಟು ದಾನ ನೀಡಿರುವುದಾಗಿ ಹುರಾನ್ ಫೌಂಡೇಷನ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com