2021ನೇ ಸಾಲಿನಲ್ಲಿ ಇಪಿಎಫ್ ಬಡ್ಡಿ ದರ ಶೇ. 8.5 ನಿಗದಿ

2020-21ನೇ ಸಾಲಿನ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿ(ಇಪಿಎಫ್)ಗೆ ಶೇಕಡಾ 8.5 ಬಡ್ಡಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಶನಿವಾರ ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 2020-21ನೇ ಸಾಲಿನ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿ(ಇಪಿಎಫ್)ಗೆ ಶೇಕಡಾ 8.5 ಬಡ್ಡಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಶನಿವಾರ ಮೂಲಗಳು ತಿಳಿಸಿವೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ(EPFO) ಐದು ಕೋಟಿಗೂ ಹೆಚ್ಚು ಮಂದಿಗೆ ಇದು ದೀಪಾವಳಿಯ ಉಡುಗೊರೆಯಾಗಿದೆ.

ಭವಿಷ್ಯ ನಿಧಿ ಸಂಘಟನೆಯ(ಇಪಿಎಫ್‌ಒ) ಉನ್ನತ ನಿರ್ಧಾರ ಕೈಗೊಳ್ಳುವ ಕೇಂದ್ರೀಯ ಟ್ರಸ್ಟಿಗಳ ಬೋರ್ಡ್ ಸಭೆಯಲ್ಲಿ 2020-21ರ ಹಣಕಾಸು ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿ ಮೇಲೆ ಶೇ. 8.5 ರಷ್ಟು ಬಡ್ಡಿದರವನ್ನು ನಿಗದಿಪಡಿಸಲು ನಿರ್ಧರಿಸಲಾಗಿತ್ತು.

"2020-21ರ ಇಪಿಎಫ್ ಮೇಲಿನ ಶೇ. 8.5 ರ ಬಡ್ಡಿ ದರಕ್ಕೆ ಕೇಂದ್ರ ಹಣಕಾಸು ಸಚಿವಾಲಯವು ಅನುಮೋದಿಸಿದೆ ಮತ್ತು ಈಗ ಅದನ್ನು ಐದು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ಜಮೆ ಮಾಡಲಾಗುವುದು" ಎಂದು ಮೂಲಗಳು ತಿಳಿಸಿವೆ.

ಕಳೆದ ಮಾರ್ಚ್‌(2019-20)ನಲ್ಲಿ ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏಳು ವರ್ಷಗಳಲ್ಲೇ ಕನಿಷ್ಠ ಶೇ. 8.5ಕ್ಕೆ ಇಳಿಸಲಾಗಿತ್ತು, ಇದು 2018-19ರಲ್ಲಿ ಶೇ 8.65 ರಷ್ಟಿತ್ತು. ಆದರೆ ಈ ವರ್ಷವೂ ಶೇ.8.5 ರಷ್ಟು ಬಡ್ಡಿ ದರ ನಿಗದಿಪಡಿಸುವ ಮೂಲಕ ವೇತನ ವರ್ಗಕ್ಕೆ ರಿಲೀಫ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com