2021ರಲ್ಲೇ 3ನೇ ಬಾರಿಗೆ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ: ವ್ಯಾಗನಾರ್, ಸ್ವಿಫ್ಟ್, ಬಲೆನೊ ಬೆಲೆಯೆಷ್ಟು ಗೊತ್ತಾ?

ಬೆಲೆ ಹೆಚ್ಚಳದ ಪರಿಣಾಮವಾಗಿ ವ್ಯಾಗನಾರ್, ಸ್ವಿಫ್ಟ್, ಬಲೆನೊ ಮತ್ತು ಡಿಜೈರ್‌ನಂತಹ ಜನಪ್ರಿಯ ಕಾರು ಮಾದರಿಗಳನ್ನು ಹೊಂದಿರುವ ಮಾರುತಿ ಸುಜುಕಿ ಸೆಪ್ಟೆಂಬರ್ 6ರಿಂದ ಅನ್ವಯವಾಗುವಂತೆ ಆಯ್ದ ಮಾದರಿಗಳ ಬೆಲೆ ಹೆಚ್ಚಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಬೆಲೆ ಹೆಚ್ಚಳದ ಪರಿಣಾಮವಾಗಿ ವ್ಯಾಗನಾರ್, ಸ್ವಿಫ್ಟ್, ಬಲೆನೊ ಮತ್ತು ಡಿಜೈರ್‌ನಂತಹ ಜನಪ್ರಿಯ ಕಾರು ಮಾದರಿಗಳನ್ನು ಹೊಂದಿರುವ ಮಾರುತಿ ಸುಜುಕಿ ಸೆಪ್ಟೆಂಬರ್ 6ರಿಂದ ಅನ್ವಯವಾಗುವಂತೆ ಆಯ್ದ ಮಾದರಿಗಳ ಬೆಲೆ ಹೆಚ್ಚಿಸಿದೆ.

ಈ ಮಾದರಿಗಳ ಬೆಲೆ ಸರಾಸರಿ ಶೇ.1.9ರಷ್ಟು ಏರಿಕೆಯಾಗಲಿದೆ ಎಂದು ಕಂಪನಿ ತನ್ನ ಬಿಎಸ್ಇ ಫೈಲಿಂಗ್ ನಲ್ಲಿ ತಿಳಿಸಿದೆ. 2021ರ ಆಗಸ್ಟ್ 30ರಂದು ಕಂಪನಿ, ಕಚ್ಚಾ ಬೆಲೆಗಳ ಏರಿಕೆಯಿಂದ ಕಾರುಗಳ ಬೆಲೆ ಏರಿಸುವುದಾಗಿ ಘೋಷಿಸಿತ್ತು. ಅದರಂತೆ, ಸೆ.6ರಿಂದ ಅನ್ವಯವಾಗುವಂತೆ ಆಯ್ದ ಮಾದರಿಗಳಿಗೆ ಬೆಲೆ ಏರಿಕೆ ಮಾಡಿದೆ.

ಮೊದಲು ಕಾರುಗಳ ಬೆಲೆಗಳನ್ನು ಜನವರಿಯಲ್ಲಿ 34,000 ರೂಪಾಯಿ ಹೆಚ್ಚಿಸಲಾಗಿತ್ತು. ನಂತರ ಎಕ್ಸ್-ಶೋರೂಂ ಬೆಲೆಗಳನ್ನು ಏಪ್ರಿಲ್ ನಲ್ಲಿ ಶೇಕಡ 1.6ರಷ್ಟು ಹೆಚ್ಚಿಸಲಾಗಿತ್ತು. ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಉತ್ಪಾದನೆಯನ್ನು ಕೇವಲ 40 ಪ್ರತಿಶತಕ್ಕೆ ಇಳಿಸುವುದಾಗಿ ಅವರು ನಿರ್ಧರಿಸಿದ್ದಾರೆ.

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ಹೆಚ್ಚಿಸಿದ್ದು ಇದಕ್ಕೆ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ, ಕಚ್ಚಾ ವಸ್ತುಗಳು, ಬಿಡಿ ಭಾಗಗಳ ಬೆಲೆ ಹೆಚ್ಚಳದ ಪರಿಣಾಮ ಎಂದು ಹೇಳಿದೆ.

ಕಳೆದ ವರ್ಷದಲ್ಲಿ ವಿವಿಧ ಒಳಹರಿವಿನ ವೆಚ್ಚಗಳ ಹೆಚ್ಚಳದಿಂದಾಗಿ ವಾಹನಗಳ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ಬೆಲೆ ಏರಿಕೆ ಮೂಲಕ ಗ್ರಾಹಕರಿಗೆ ಹೆಚ್ಚುವರಿ ಹೊರೆ ನೀಡುವುದು ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ.

ವ್ಯಾಗನಾರ್‌ನಂತಹ ಹ್ಯಾಚ್‌ಬ್ಯಾಕ್‌ ಹಾಗೂ ಸಿಫ್ಟ್‌ ಡಿಜೈರ್ನಂತಹ ಸೆಡಾನ್‌ಗಳನ್ನು ಬಿಡುಗಡೆಗೊಳಿಸಿದೆ. ಜಾಗತಿಕ ಪ್ರವೃತ್ತಿಗಳು ಮತ್ತು ಹೆಚ್ಚಿನ ಬೇಡಿಕೆಯ ನಂತರ ಉಕ್ಕು, ತಾಮ್ರ ಮತ್ತು ಅಲ್ಯೂಮಿನಿಯಂನಂತಹ ವಿವಿಧ ಪ್ರಾಥಮಿಕ ಕಚ್ಚಾ ವಸ್ತುಗಳ ಬೆಲೆಗಳು ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com