ಚಂದಾದಾರರನ್ನು ಹೆಚ್ಚಿಸಿಕೊಂಡ ಜಿಯೋ, ಏರ್‌ಟೆಲ್; ಬಳಕೆದಾರರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾ

ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2022 ರ ಅಕ್ಟೋಬರ್‌ನಲ್ಲಿ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ 1.41 ಮಿಲಿಯನ್ ಮತ್ತು 0.8 ಮಿಲಿಯನ್ ಮೊಬೈಲ್ ಬಳಕೆದಾರರನ್ನು ಹೆಚ್ಚಿಸಿಕೊಂಡಿವೆ.
ಏರ್‌ಟೆಲ್- ಜಿಯೋ - ವೊಡಾಫೋನ್
ಏರ್‌ಟೆಲ್- ಜಿಯೋ - ವೊಡಾಫೋನ್

ನವದೆಹಲಿ: ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2022 ರ ಅಕ್ಟೋಬರ್‌ನಲ್ಲಿ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ 1.41 ಮಿಲಿಯನ್ ಮತ್ತು 0.8 ಮಿಲಿಯನ್ ಮೊಬೈಲ್ ಬಳಕೆದಾರರನ್ನು ಹೆಚ್ಚಿಸಿಕೊಂಡಿವೆ.

ಆದರೆ, ಭಾರತದ ಮೂರನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾದ ವೊಡಾಫೋನ್ ಐಡಿಯಾ, ತನ್ನ ಚಂದಾದಾರರನ್ನು ಕಳೆದುಕೊಳ್ಳುವುದನ್ನು ಮುಂದುವರಿಸಿದೆ. 2022ರ ಅಕ್ಟೋಬರ್‌ ತಿಂಗಳಲ್ಲಿ 3.5 ಮಿಲಿಯನ್ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡಿದೆ. ವೊಡಾಫೋನ್‌ನ ಒಟ್ಟು ಬಳಕೆದಾರರ ಸಂಖ್ಯೆ 245.62 ಮಿಲಿಯನ್ ಆಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಕಂಪನಿ 4 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡಿದೆ.

ವೈರ್‌ಲೆಸ್ ವಿಭಾಗದಲ್ಲಿ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳ ಮಾರುಕಟ್ಟೆ ಪಾಲು ಕ್ರಮವಾಗಿ ಶೇ 36.85, ಶೇ 31.92 ಮತ್ತು ಶೇ 21.48 ಆಗಿದೆ.

ರಿಲಯನ್ಸ್ ಜಿಯೋ ಅಕ್ಟೋಬರ್‌ನಲ್ಲಿ ಲ್ಯಾಂಡ್‌ಲೈನ್ ವಿಭಾಗದಲ್ಲಿ ತನ್ನ ಮಾರುಕಟ್ಟೆಯನ್ನು ನಾಯಕತ್ವ ಸಾಧಿಸಿದ್ದು, 0.24 ಮಿಲಿಯನ್ ವೈರ್‌ಲೈನ್ ಚಂದಾದಾರರನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಒಟ್ಟು ಬಳಕೆದಾರರ ಸಂಖ್ಯೆ 7.89 ಮಿಲಿಯನ್‌ಗೆ ಏರಿಕೆಯಾಗಿದೆ. ಭಾರ್ತಿ ಏರ್‌ಟೆಲ್ 0.1 ಮಿಲಿಯನ್ ಬಳಕೆದಾರರು ಸೇರಿಕೊಂಡರೆ, ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್‌) 5,895 ವೈರ್‌ಲೈನ್ ಬಳಕೆದಾರರನ್ನು ಕಳೆದುಕೊಂಡಿದೆ.

ವೈರ್‌ಲೈನ್ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ, ರಿಲಯನ್ಸ್ ಜಿಯೋ ಶೇ 29.45 ನೊಂದಿಗೆ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ನಂತರ ಬಿಎಸ್ಎನ್ಎಲ್ ಶೇ 26.45 ಮತ್ತು ಭಾರ್ತಿ ಏರ್‌ಟೆಲ್ ಶೇ 24.27 ರೊಂದಿಗೆ ಮೂರನೇ ಸ್ಥಾನದಲ್ಲಿದೆ. 2022ರ ಅಕ್ಟೋಬರ್‌ನಲ್ಲಿ, ಎಂಎನ್‌ಪಿಗಾಗಿ (ಮೊಬೈಲ್ ನಂಬರ್ ಪೋರ್ಟೆಬಿಲಿಟಿ) ಒಟ್ಟು 11.81 ಮಿಲಿಯನ್ ಮನವಿಗಳನ್ನು ಸ್ವೀಕರಿಸಲಾಗಿದೆ. ಒಟ್ಟು ಮನವಿಗಳಲ್ಲಿ, ವಲಯ-I ರಿಂದ 6.97 ಮಿಲಿಯನ್ ಮನವಿಗಳನ್ನು ಸ್ವೀಕರಿಸಲಾಗಿದೆ ಮತ್ತು ವಲಯ II ರಿಂದ 4.83 ಮಿಲಿಯನ್ ಮನವಿಗಳನ್ನು ಸ್ವೀಕರಿಸಲಾಗಿದೆ.

ಎಂಎನ್‌ಪಿ ಅನುಷ್ಠಾನದ ನಂತರ ಸಂಚಿತ ಎಂಎನ್‌ಪಿ ಮನವಿಗಳು 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 748.11 ಮಿಲಿಯನ್‌ನಿಂದ 2022ರ ಅಕ್ಟೋಬರ್ ಅಂತ್ಯಕ್ಕೆ 759.92 ಮಿಲಿಯನ್‌ಗೆ ಏರಿದೆ ಎಂದು ಟ್ರಾಯ್ ಮಾಹಿತಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com