ಮುಂದುವರಿದ ಅನಿಶ್ಚಿತತೆ: ಜೆಟ್ ಏರ್‌ವೇಸ್‌ಗೆ ಗುಡ್ ಬೈ ಹೇಳಿದ ಪೈಲಟ್‌ಗಳು, ಉನ್ನತ ಅಧಿಕಾರಿಗಳು

ಸ್ಥಗಿತಗೊಂಡಿರುವ ಜೆಟ್ ಏರ್‌ವೇಸ್‌ ಮತ್ತೆ ಆರಂಭವಾಗುವ ಬಗ್ಗೆ ಹೆಚ್ಚುತ್ತಿರುವ ಅನಿಶ್ಚಿತತೆಯ ಮಧ್ಯೆ, ಹಲವು ಹಿರಿಯ ಅಧಿಕಾರಿಗಳು, ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳು ವಿಮಾನಯಾನ ಸಂಸ್ಥೆಯನ್ನು ತೊರೆದಿದ್ದಾರೆ ಎಂದು ಮೂಲಗಳು...
ಜೆಟ್ ಏರ್ ವೇಸ್
ಜೆಟ್ ಏರ್ ವೇಸ್

ನವದೆಹಲಿ: ಸ್ಥಗಿತಗೊಂಡಿರುವ ಜೆಟ್ ಏರ್‌ವೇಸ್‌ ಮತ್ತೆ ಆರಂಭವಾಗುವ ಬಗ್ಗೆ ಹೆಚ್ಚುತ್ತಿರುವ ಅನಿಶ್ಚಿತತೆಯ ಮಧ್ಯೆ, ಹಲವು ಹಿರಿಯ ಅಧಿಕಾರಿಗಳು, ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳು ವಿಮಾನಯಾನ ಸಂಸ್ಥೆಯನ್ನು ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಕೆಲವು ಹಿರಿಯ ಅಧಿಕಾರಿಗಳನ್ನು ವೇತನ ರಹಿತ ರಜೆಯ ಮೇಲೆ ಕಳುಹಿಸಲಾಗಿದೆ ಮತ್ತು ಏರ್‌ಲೈನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಕಪೂರ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ವಿಪುಲ ಗುಣತಿಲಕ ಅವರು ವೇತನ ಕಡಿತದೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಜೂನ್ 2021 ರಲ್ಲಿ ದಿವಾಳಿತನ ಪರಿಹಾರ ಪ್ರಕ್ರಿಯೆಯ ಅಡಿಯಲ್ಲಿ ಜಲಾನ್ ಕಲ್ರಾಕ್ ಕನ್ಸಾರ್ಟಿಯಂ ಜೆಟ್ ಏರ್‌ವೇಸ್‌ ಖರೀದಿಗೆ ಯಶಸ್ವಿ ಬಿಡ್‌ದಾರನಾಗಿ ಹೊರಹೊಮ್ಮಿತ್ತು. ಕಾರ್ಯಾಚರಣೆಯನ್ನು ಪ್ರಾರಂಭಿಸಲು ಉದ್ಯಮದ ಅನುಭವಿಗಳನ್ನು ನೇಮಿಸಿಕೊಂಡರೂ, ಏರ್‌ಲೈನ್ ಇನ್ನೂ ಆರಂಭವಾಗದೆ ಉಳಿದಿದೆ.

ಇಂಜಿನಿಯರಿಂಗ್ ಮತ್ತು ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷರು ವಿಮಾನಯಾನ ಸಂಸ್ಥೆಯನ್ನು ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳು ಸಹ ಕಾರ್ಯಾಚರಣೆ ನಡೆಸುತ್ತಿರುವ ಏರ್‌ಲೈನ್‌ಗಳಲ್ಲಿ ಉತ್ತಮ ಅವಕಾಶ ಪಡೆದುಕೊಳ್ಳಲು ವಿಮಾನಯಾನ ಸಂಸ್ಥೆಯನ್ನು ತೊರೆದಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com