500 ವಿಮಾನ ಖರೀದಿಗೆ ಏರ್ ಇಂಡಿಯಾ ಪ್ಲಾನ್: ಮೊದಲ ಬಾರಿಗೆ ಐತಿಹಾಸಿಕ ಕ್ರಮ

ಸಾಲದ ಶೂಲದ ಬಳಿಕ ಟಾಟಾ ತೆಕ್ಕೆಗೆ ಜಾರಿರುವ ಏರ್ ಇಂಡಿಯಾ ಇತಿಹಾಸದಲ್ಲೇ ಮೊದಲ ಬಾರಿಗೆ ಬರೊಬ್ಬರಿ 500 ವಿಮಾನಗಳ ಖರೀದಿಗೆ ಯೋಜನೆ ರೂಪಿಸಿದೆ ಎಂದು ಹೇಳಲಾಗಿದೆ.
ಏರ್ ಇಂಡಿಯಾ ಮತ್ತು ಟಾಟಾ ಸಂಸ್ಥೆ
ಏರ್ ಇಂಡಿಯಾ ಮತ್ತು ಟಾಟಾ ಸಂಸ್ಥೆ

ನವದೆಹಲಿ: ಸಾಲದ ಶೂಲದ ಬಳಿಕ ಟಾಟಾ ತೆಕ್ಕೆಗೆ ಜಾರಿರುವ ಏರ್ ಇಂಡಿಯಾ ಇತಿಹಾಸದಲ್ಲೇ ಮೊದಲ ಬಾರಿಗೆ ಬರೊಬ್ಬರಿ 500 ವಿಮಾನಗಳ ಖರೀದಿಗೆ ಯೋಜನೆ ರೂಪಿಸಿದೆ ಎಂದು ಹೇಳಲಾಗಿದೆ.

ಶತಕೋಟಿಗೂ ಹೆಚ್ಚನ ಮೌಲ್ಯದ 500 ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ ಮುಂದಾಗಿದ್ದು, ಇದಕ್ಕಾಗಿ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಎನ್ನಲಾಗಿದೆ. 

ಟಾಟಾ ಗ್ರೂಪ್‌ನ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಪುನರುಜ್ಜೀವನಕ್ಕಾಗಿ ಏರ್‌ ಬಸ್ ಮತ್ತು ಬೋಯಿಂಗ್‌ನಿಂದ ಹತ್ತಾರು ಶತಕೋಟಿ ಡಾಲರ್‌ಗಳ ಮೌಲ್ಯದ 500 ಜೆಟ್‌ಲೈನರ್‌ಗಳಿಗೆ ಐತಿಹಾಸಿಕ ಆರ್ಡರ್‌ಗಳನ್ನು ನೀಡಲು ಏರ್ ಇಂಡಿಯಾ ಸಿದ್ಧತೆ ನಡೆಸಿದೆ. ವಿಮಾನಯಾನ ಉದ್ಯಮದ ಮೂಲಗಳ ಪ್ರಕಾರ 400 ಕಿರಿದಾದ-ದೇಹದ ಜೆಟ್‌ಗಳು ಮತ್ತು ಏರ್‌ಬಸ್ A350 ಗಳು ಮತ್ತು ಬೋಯಿಂಗ್ 787 ಮತ್ತು 777 ಗಳು ಸೇರಿದಂತೆ 100 ಅಥವಾ ಅದಕ್ಕಿಂತ ಹೆಚ್ಚು ದೊಡ್ಡ ಪ್ರಯಾಣಿಕ ವಿಮಾನಗಳನ್ನು ಖರೀದಿ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

ಅನಾಮಧೇಯತೆಯ ಷರತ್ತಿನ ಮೇಲೆ ಮಾತನಾಡಿರುವ ಉದ್ಯಮದ ಮತ್ತೋರ್ವ ಪ್ರಮುಖರು, ಮುಂದಿನ ದಿನಗಳಲ್ಲಿ ಈ ಬೃಹತ್ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡಲಾಗುವುದು. ಆದರೆ ಈ ಬಗ್ಗೆ ವಿಮಾನ ತಯಾರಿಕಾ ಸಂಸ್ಥೆಗಳಾದ ಏರ್‌ಬಸ್ ಮತ್ತು ಬೋಯಿಂಗ್ ಸಂಸ್ಥೆಗಳು ಪ್ರತಿಕ್ರಿಯಿಸಲು ನಿರಾಕರಿಸಿವೆ.  ಈ ಬಗ್ಗೆ ಟಾಟಾ ಗ್ರೂಪ್  ಕೂಡ ತಕ್ಷಣ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com