ಟಾಟಾ ಒಡೆತನದ ಏರ್ ಇಂಡಿಯಾದೊಂದಿಗೆ ವಿಸ್ತಾರಾ ವಿಲೀನ: ಸಿಂಗಾಪುರ್ ಏರ್‌ಲೈನ್ಸ್

ಟಾಟಾ ಸಮೂಹ ಒಡೆತನದ ಏರ್ ಇಂಡಿಯಾದೊಂದಿಗೆ ವಿಸ್ತಾರಾ ಏರ್ ಲೈನ್ಸ್ ಅನ್ನು ವಿಲೀನಗೊಳಿಸಲಾಗುವುದು ಎಂದು ಸಿಂಗಾಪುರ್ ಏರ್‌ಲೈನ್ಸ್ ಮಂಗಳವಾರ ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಟಾಟಾ ಸಮೂಹ ಒಡೆತನದ ಏರ್ ಇಂಡಿಯಾದೊಂದಿಗೆ ವಿಸ್ತಾರಾ ಏರ್ ಲೈನ್ಸ್ ಅನ್ನು ವಿಲೀನಗೊಳಿಸಲಾಗುವುದು ಎಂದು ಸಿಂಗಾಪುರ್ ಏರ್‌ಲೈನ್ಸ್ ಮಂಗಳವಾರ ಘೋಷಿಸಿದೆ.

ಟಾಟಾ ಸಮೂಹವು ವಿಸ್ತಾರಾದಲ್ಲಿ ಶೇ. 51 ರಷ್ಟು ಪಾಲನ್ನು ಹೊಂದಿದೆ ಮತ್ತು ಉಳಿದ ಶೇಕಡಾ 49 ರಷ್ಟು ಷೇರುಗಳು ಸಿಂಗಾಪುರ್ ಏರ್‌ಲೈನ್ಸ್(ಎಸ್‌ಐಎ) ನಲ್ಲಿದೆ.

"ವಿಸ್ತಾರಾ ಏರ್ ಲೈನ್ಸ್ ಅನ್ನು ಏರ್ ಇಂಡಿಯಾ ಜೊತೆ ವಿಲೀನಗೊಳಿಸುತ್ತಿದ್ದು, ಇದು ಎಲ್ಲಾ ಪ್ರಮುಖ ಮಾರುಕಟ್ಟೆ ವಿಭಾಗಗಳಲ್ಲಿ ಗಮನಾರ್ಹ ಉಪಸ್ಥಿತಿಯೊಂದಿಗೆ ವಿಸ್ತರಿಸಿದ ಏರ್ ಇಂಡಿಯಾ ಗ್ರೂಪ್ ನಲ್ಲಿ ಎಸ್ಐಎ ಶೇಕಡಾ 25.1 ಪಾಲನ್ನು ನೀಡುತ್ತದೆ. ಎಸ್ಐ ಮತ್ತು ಟಾಟಾ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟು ಮಾರ್ಚ್ 2024 ರೊಳಗೆ ವಿಲೀನವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ" ಎಂದು ಎಸ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com