ರೈಲ್ವೇ ವಿಶೇಷ ಮೆನು
ವಾಣಿಜ್ಯ
ನವರಾತ್ರಿ ಆಫರ್: ರೈಲು ಪ್ರಯಾಣಿಕರಿಗೆ ವಿಶೇಷ ಮೆನು: ರೈಲ್ವೆ ಸಚಿವಾಲಯ
ನವರಾತ್ರಿಯ ಪ್ರಯುಕ್ತ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾನುವಾರ ವಿಶೇಷ ಆಹಾರ ಮೆನುವನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.
ನವದೆಹಲಿ: ನವರಾತ್ರಿಯ ಪ್ರಯುಕ್ತ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾನುವಾರ ವಿಶೇಷ ಆಹಾರ ಮೆನುವನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.
ಈ ಕುರಿತಂತೆ ರೈಲ್ವೇ ಸಚಿವಾಲಯ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ಈ ವಿಶೇಷ ಮೆನುವನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನೀಡಲಾಗುವುದು ಮತ್ತು ‘ಫುಡ್ ಆನ್ ಟ್ರ್ಯಾಕ್’ ಅಪ್ಲಿಕೇಶನ್‌ನಿಂದ ಆರ್ಡರ್ ಮಾಡಬಹುದು ಎಂದು ಹೇಳಿದೆ.
“ನವರಾತ್ರಿಯ ಮಂಗಳಕರ ಹಬ್ಬದ ಸಂದರ್ಭದಲ್ಲಿ, ಭಾರತೀಯ ರೈಲ್ವೇಯು ವಿಶೇಷ ಮೆನುವನ್ನು ನಿಮಗೆ ಪೂರೈಸುತ್ತಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನೀಡಲಾಗುತ್ತದೆ. ನಿಮ್ಮ ರೈಲು ಪ್ರಯಾಣಕ್ಕಾಗಿ ‘ಫುಡ್ ಆನ್ ಟ್ರ್ಯಾಕ್’ ಅಪ್ಲಿಕೇಶನ್‌ನಿಂದ ನವರಾತ್ರಿ ಭಕ್ಷ್ಯಗಳನ್ನು ಆರ್ಡರ್ ಮಾಡಿ, ಇಕಟರಿಂಗ್ ಗೆ ಭೇಟಿ ನೀಡಿ. irctc.co.in ಅಥವಾ 1323 ಗೆ ಕರೆ ಮಾಡಿ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ