ಅಕ್ಟೋಬರ್ 1 ರಿಂದ ಹೊಸ ಇ-ಬಿಲ್ಲಿಂಗ್ ವ್ಯವಸ್ಥೆ: 10 ಕೋಟಿ ರೂ. ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಅನುಕೂಲ

ಅಕ್ಟೋಬರ್ 1 ರಿಂದ ಹೊಸ ಇ-ಬಿಲ್ಲಿಂಗ್ ವ್ಯವಸ್ಥೆ ಜಾರಿಗೆ ಬರಲಿದ್ದು, ಇದರಿಂದ 10 ಕೋಟಿ ರೂಪಾಯಿಗಳ ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಈ ಮೊದಲು ಒಟ್ಟು ವಹಿವಾಟು ಕನಿಷ್ಠ 20 ಕೋಟಿ ರೂಪಾಯಿ ಇದ್ದವರಿಗೆ ಈ ಲಾಭ ದೊರಕುತ್ತಿತ್ತು. ಆದರೆ ಈಗ ಸಣ್ಣ ಪ್ರಮಾಣದ ವ್ಯವಹಾರ ಮಾಡುವವರು ಕೂಡ ಲಾಭ ಪಡೆಯಬಹುದಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಅಕ್ಟೋಬರ್ 1 ರಿಂದ ಹೊಸ ಇ-ಬಿಲ್ಲಿಂಗ್ ವ್ಯವಸ್ಥೆ ಜಾರಿಗೆ ಬರಲಿದ್ದು, ಇದರಿಂದ 10 ಕೋಟಿ ರೂಪಾಯಿಗಳ ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಈ ಮೊದಲು ಒಟ್ಟು ವಹಿವಾಟು ಕನಿಷ್ಠ 20 ಕೋಟಿ ರೂಪಾಯಿ ಇದ್ದವರಿಗೆ ಈ ಲಾಭ ದೊರಕುತ್ತಿತ್ತು. ಆದರೆ ಈಗ ಸಣ್ಣ ಪ್ರಮಾಣದ ವ್ಯವಹಾರ ಮಾಡುವವರು ಕೂಡ ಲಾಭ ಪಡೆಯಬಹುದಾಗಿದೆ. 

ಈ ಕ್ರಮವು ಹೆಚ್ಚಿನ ಉದ್ಯಮ, ವ್ಯವಹಾರದಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಸಹಾಯ ಮಾಡುತ್ತದೆ ಎಂದು ವಾಣಿಜ್ಯ ತೆರಿಗೆ ಆಯುಕ್ತೆ ಸಿ ಶಿಖಾ ಹೇಳಿದ್ದಾರೆ. ವಹಿವಾಟು ಪ್ರಕ್ರಿಯೆಯು ಹೆಚ್ಚು ಪಾರದರ್ಶಕವಾಗಿರುವುದರಿಂದ ಉತ್ತಮ ಸಂಗ್ರಹಣೆಗೆ ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ GST ಸಮಿತಿಯ ಅಧ್ಯಕ್ಷ ಬಿ ಟಿ ಮನೋಹರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ಇ-ಇನ್‌ವಾಯ್ಸಿಂಗ್ ಸರಿಯಾದ ದಿಕ್ಕಿನಲ್ಲಿ ನಡೆಯಲು ಇಂದು ಒಂದು ಹೆಜ್ಜೆಯಾಗಿದೆ. ಇದು ನಕಲಿ ಇನ್ವಾಯ್ಸಿಂಗ್ ಮತ್ತು ತೆರಿಗೆಗಳ ವಂಚನೆಗೆ ಕಡಿವಾಣ ಹಾಕುತ್ತದೆ. ಇನ್ಪುಟ್ ತೆರಿಗೆ ಕ್ರೆಡಿಟ್ ನ ತಡೆರಹಿತ ಹರಿವಿಗೆ ಒತ್ತು ನೀಡುತ್ತದೆ ಎಂದರು. 

ಎರಡು ವರ್ಷಗಳ ಹಿಂದೆ 10 ಕೋಟಿ ರೂಪಾಯಿ ವಹಿವಾಟು ಅರ್ಹತೆ 500 ಕೋಟಿ ರೂಪಾಯಿಗಳಷ್ಟಿದ್ದವು. ಅದನ್ನು 100 ಕೋಟಿ ರೂಪಾಯಿಗೆ ಇಳಿಸಲಾಯಿತು. ನಂತರ 50 ಕೋಟಿ ರೂಪಾಯಿಗೆ ಮತ್ತು ನಂತರ 20 ಕೋಟಿ ರೂಪಾಯಿಗೆ ಹಂತ ಹಂತವಾಗಿ ತರಲಾಯಿತು ಎಂದು ಮನೋಹರ್ ಹೇಳಿದರು.

ಈ ಇ-ಇನ್‌ವಾಯ್ಸಿಂಗ್ B2B ವಹಿವಾಟುಗಳಿಗಾಗಿ ಮತ್ತು ತಪ್ಪಿಸಿಕೊಳ್ಳುವಿಕೆಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಸೆಪ್ಟೆಂಬರ್ ತಿಂಗಳಿಗೆ ಸಂಗ್ರಹಿಸಲಾದ ಒಟ್ಟು GST ಯ ಮೊತ್ತವು ಸಹಾಯ ಮಾಡುವುದಿಲ್ಲ, ಆದರೆ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ಅನುಸರಣೆ ಮತ್ತು ಸಂಗ್ರಹವನ್ನು ತರುತ್ತದೆ ಎಂದು ಮೂಲಗಳು ವಿವರಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com