ದಾಖಲೆಯ 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ 5ಜಿ ಸ್ಪೆಕ್ಟ್ರಮ್ ಮಾರಾಟ; ಜಿಯೋ ಟಾಪ್ ಬಿಡ್ಡರ್

ಸೋಮವಾರ ಕೊನೆಗೊಂಡ ಏಳು ದಿನಗಳ ಮಹಾ ಹರಾಜಿನಲ್ಲಿ 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ 5ಜಿ ಟೆಲಿಕಾಂ ಸ್ಪೆಕ್ಟ್ರಮ್ ಮಾರಾಟವಾಗಿದೆ. ಇದರಲ್ಲಿ ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಟಾಪ್ ಬಿಡ್ಡರ್ ಆಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸೋಮವಾರ ಕೊನೆಗೊಂಡ ಏಳು ದಿನಗಳ ಮಹಾ ಹರಾಜಿನಲ್ಲಿ 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ 5ಜಿ ಟೆಲಿಕಾಂ ಸ್ಪೆಕ್ಟ್ರಮ್ ಮಾರಾಟವಾಗಿದೆ. ಇದರಲ್ಲಿ ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಟಾಪ್ ಬಿಡ್ಡರ್ ಆಗಿ ಹೊರಹೊಮ್ಮಿದೆ.

ಜುಲೈ 26ರಂದು ಪ್ರಾರಂಭವಾಗಿದ್ದ ಭಾರತದ 5ಜಿ ಸ್ಪೆಕ್ಟ್ರಂ ಹರಾಜು ಇಂದು ಮುಕ್ತಾಯಗೊಂಡಿದ್ದು, ಒಟ್ಟು 1,50,173 ಕೋಟಿ ರೂಪಾಯಿ ಮೌಲ್ಯದ ಬಿಡ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋಗೆ ಪ್ರತಿಸ್ಪರ್ಧಿಗಳಾಗಿ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಹಾಗೂ ಗೌತಮ್ ಅದಾನಿಯವರ ಅದಾನಿ ಎಂಟರ್‌ಪ್ರೈಸಸ್ 5ಜಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

ಇತ್ತೀಚಿನ ಹರಾಜಿನಲ್ಲಿ ₹ 88,078 ಕೋಟಿಗೆ ಮಾರಾಟವಾದ ಎಲ್ಲಾ ಏರ್‌ವೇವ್‌ಗಳ ಅರ್ಧದಷ್ಟು ಭಾಗವನ್ನು ಜಿಯೋ ಪಡೆದುಕೊಂಡಿದೆ. ಗೌತಮ್ ಅದಾನಿ ಗ್ರೂಪ್ ಖಾಸಗಿ ಟೆಲಿಕಾಂ ನೆಟ್ವರ್ಕ್ ಅನ್ನು ಸ್ಥಾಪಿಸಲು 26 Mhz ಸ್ಪೆಕ್ಟ್ರಮ್ ಅನ್ನು ಖರೀದಿಸಿದೆ. ಟೆಲಿಕಾಂ ದೈತ್ಯ ಸುನಿಲ್ ಭಾರ್ತಿ ಮಿತ್ತಲ್ ಅವರ  ಭಾರ್ತಿ ಏರ್ ಟೆಲ್ 43,084 ಕೋಟಿ ಬಿಡ್ ಮಾಡಿದ್ದು ವೊಡಾಫೋನ್ ಐಡಿಯಾ ಲಿಮಿಟೆಡ್ 18,799 ಕೋಟಿಗೆ ಸ್ಪೆಕ್ಟ್ರಂ ಖರೀದಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com