ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೇಶದಲ್ಲಿ 5ಜಿ ಸೇವೆಗಳ ಆರಂಭಕ್ಕೆ ತರಂಗಗುಚ್ಚ ಹಂಚಿಕೆ ಕುರಿತ ಪತ್ರ ಬಿಡುಗಡೆ: ಕೇಂದ್ರ ಐಟಿ ಖಾತೆ ಸಚಿವ ಅಶ್ವಿನ್ ವೈಷ್ಣವ್

ಟೆಲಿಕಾಂ ಸೇವಾ ಕಂಪನಿಗಳಿಗೆ ದೂರಸಂಪರ್ಕ ಇಲಾಖೆ ತರಂಗಗುಚ್ಚ ಹಂಚಿಕೆ ಮಾಡಿಕೊಡುವುದರೊಂದಿಗೆ ದೇಶದಲ್ಲಿ 5ಜಿ ಸೇವೆಗಳ ಆರಂಭಕ್ಕೆ ಹಾದಿ ಸುಗಮವಾಗಿದೆ. ತರಂಗಗುಚ್ಚ (5G spectrum) ಹಂಚಿಕೆ ಕುರಿತ ಪತ್ರಗಳನ್ನು ಕಂಪನಿಗಳಿಗೆ ಹೊರಡಿಸಲಾಗಿದೆ ಎಂದು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.

ನವದೆಹಲಿ: ಟೆಲಿಕಾಂ ಸೇವಾ ಕಂಪನಿಗಳಿಗೆ ದೂರಸಂಪರ್ಕ ಇಲಾಖೆ ತರಂಗಗುಚ್ಚ ಹಂಚಿಕೆ ಮಾಡಿಕೊಡುವುದರೊಂದಿಗೆ ದೇಶದಲ್ಲಿ 5ಜಿ ಸೇವೆಗಳ ಆರಂಭಕ್ಕೆ ಹಾದಿ ಸುಗಮವಾಗಿದೆ. ತರಂಗಗುಚ್ಚ (5G spectrum) ಹಂಚಿಕೆ ಕುರಿತ ಪತ್ರಗಳನ್ನು ಕಂಪನಿಗಳಿಗೆ ಹೊರಡಿಸಲಾಗಿದೆ ಎಂದು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.

5ಜಿ ಸೇವೆಗಳ ಆರಂಭಕ್ಕೆ ಸಿದ್ಧರಾಗುವಂತೆ ದೂರಸಂಪರ್ಕ ಸೇವಾ ಕಂಪನಿಗಳಿಗೆ ಸಚಿವರು ಮನವಿ ಮಾಡಿದ್ದಾರೆ. ತರಂಗಗುಚ್ಚ ಹರಾಜು ಕುರಿತ ಎಲ್ಲ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುತ್ತಿರುವುದಕ್ಕೆ ದೂರಸಂಪರ್ಕ ಇಲಾಖೆಯನ್ನು ಭಾರ್ತಿ ಎಂಟರ್ ಪ್ರೈಸೆಸ್ ಮುಖ್ಯಸ್ಥ ಸುನೀಲ್ ಮಿಟ್ಟಲ್ ಪ್ರಶಂಸಿಸಿದ್ದಾರೆ. ಕಂಪನಿಗೆ ನಿಗದಿತ ತರಂಗಾಂತರ ಬ್ಯಾಂಡ್‌ಗಳು ಹಂಚಿಕೆಯಾದ ಕೆಲವೇ ತಾಸಿನಲ್ಲಿ ಏರ್‌ಟೆಲ್ 8 ಸಾವಿರದ 312 ಕೋಟಿ ರೂಪಾಯಿಯನ್ನು ಪಾವತಿಸಿದೆ.

ದೂರಸಂಪರ್ಕ ಸೇವಾ ಕಂಪನಿಗಳು ಈಗಾಗಲೇ ದೂರಸಂಪರ್ಕ ಸಾಧನಗಳನ್ನು ಖರೀದಿಸಲು ಬೇಡಿಕೆ ಪ್ರಸ್ತಾವ ಇಟ್ಟಿವೆ. ಬಹುಶಃ ಮುಂದಿನ ತಿಂಗಳೊಳಗೆ 5ಜಿ ಸೇವೆಗಳನ್ನು ಒದಗಿಸಲು ಸರ್ಕಾರ ಮತ್ತು ದೂರಸಂಪರ್ಕ ಸೇವಾ ಕಂಪನಿಗಳು ಪ್ರಯತ್ನಿಸುತ್ತಿವೆ. 7 ದಿನಗಳ ಹರಾಜಿನಲ್ಲಿ 51 ಸಾವಿರದ 232 ಮೆಗಾಹರ್ಟ್ಸ್ ತರಂಗಾಂತರ ಮಾರಾಟ ಮಾಡುವುದರಿಂದ ಕೇಂದ್ರಕ್ಕೆ 1 ಲಕ್ಷದ 50 ಸಾವಿರದ 173  ಕೋಟಿ ರೂಪಾಯಿ ಸಂದಾಯವಾಗಿದೆ. 

ಪ್ರಮುಖ ಕಂಪನಿಯಾದ ಜಿಯೋ ಅತಿ ದೊಡ್ಡ ಬಿಡ್‌ದಾರ ಕಂಪನಿಯಾಗಿದ್ದು, 88 ಸಾವಿರದ 78 ಕೋಟಿ ರೂಪಾಯಿ ಮೊತ್ತದ ತರಂಗಾಂತರವನ್ನು ಖರೀದಿಸಿದೆ. ಮೊದಲ ಬಾರಿಯ ಬಿಡ್‌ದಾರ ಕಂಪನಿಯಾದ ಅದಾನಿ ಡೇಟಾ ನೆಟ್‌ವರ್ಕ್ಸ್ 212 ಕೋಟಿ ರೂಪಾಯಿ ತರಂಗಾಂತರವನ್ನು ಖರೀದಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com