ಸರ್ಕಾರಿ ಖಾತೆಗಳಿ ಗ್ರೇ ಟಿಕ್ ಮಾರ್ಕ್, ಕಂಪನಿಗಳಿಗೆ ಗೋಲ್ಡನ್ ಟಿಕ್: ಟ್ವಿಟರ್ ನಿಂದ ಮಹತ್ವದ ಬದಲಾವಣೆ
ನವದೆಹಲಿ: ಪ್ರಮುಖ ಸಾಮಾಜಿಕ ಮಾಧ್ಯಮ ಟ್ವಿಟರ್ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಪ್ರಮುಖವಾಗಿ ಅಧಿಕೃತ ಖಾತೆಗೆ ನೀಡುತ್ತಿದ್ದ ಟಿಕ್ ಮಾರ್ಕ್ ನೀತಿಯಲ್ಲಿ ಬದಲಾವಣೆ ಮಾಡಿದೆ.
ಸರ್ಕಾರಕ್ಕೆ ಸಂಬಂಧಿಸಿದ ಖಾತೆಗಳಿಗೆ ಗ್ರೇ ಟಿಕ್ ವೆರಿಫಿಕೇಶನ್ ಮಾರ್ಕ್ ಮತ್ತು ಖಾಸಗಿ ಕಂಪನಿಗಳಿಗೆ ಗೋಲ್ಡನ್ ಟಿಕ್ ಮಾರ್ಕ್ ಅನ್ನು ನೀಡಲು ಟ್ವಿಟರ್ ಪ್ರಾರಂಭಿಸಿದೆ. ಆದರೆ ಉಳಿದ ಪರಿಶೀಲಿಸಿದ ಖಾತೆಗಳಿಗೆ ನೀಲಿ ಟಿಕ್ ಮಾರ್ಕ್ ಮುಂದುವರೆಯಲಿದೆ.
ಇದನ್ನು ಓದಿ: ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೇಶದಲ್ಲಿ 44 ಸಾವಿರ ಖಾತೆಗಳನ್ನು ನಿಷೇಧಿಸಿದ ಟ್ವಿಟರ್
ಟ್ವಿಟರ್ ಕೇಂದ್ರ ಸರ್ಕಾರದ ಅಧಿಕೃತ ಟ್ವಿಟರ್ ಖಾತೆ ಇದ್ದ ಬ್ಲೂ ಟಿಕ್ ಮಾರ್ಕ್ ಅನ್ನು ಗ್ರೇ ಟಿಕ್ ಗೆ ಬದಲಾಯಿಸಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಖಾತೆಯ ಬ್ಲೂ ಟಿಕ್ ಮಾರ್ಕ್ ಅನ್ನು ಬದಲಾಯಿಸಿದೆ. ಪ್ರಧಾನಿಯವರ ಟ್ವಿಟರ್ ಖಾತೆಗೆ 85.1 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಕಂಪನಿಯು ಡಿಸೆಂಬರ್ 12 ರಂದು ಟ್ವಿಟರ್‌ನಲ್ಲಿ ಕೆಲವು ಬ್ಯುಸಿನೆಸ್ ಖಾತೆಗಳನ್ನು ಗೋಲ್ಡನ್ ಟಿಕ್ ಮಾರ್ಕ್‌ನೊಂದಿಗೆ 'ಅಧಿಕೃತ' ಲೇಬಲ್ ಅನ್ನು ಬದಲಾಯಿಸುವುದಾಗಿ ಘೋಷಿಸಿತ್ತು.
ನಕಲಿ ಖಾತೆಗಳ ಹಾವಳಿ ನಿಯಂತ್ರಿಸಲು ಕಂಪನಿಗಳು, ಸೆಲಿಬ್ರಿಟಿಗಳು, ಸರ್ಕಾರಿ ಮುಖ್ಯಸ್ಥರು, ಪತ್ರಕರ್ತರ ನಿಜವಾದ ಖಾತೆಗಳನ್ನು ಪರಿಶೀಲಿಸಿ ಟ್ವಿಟರ್ ಅವರಿಗೆ ಬ್ಲೂಟಿಕ್, ಗ್ರೇ ಟಿಕ್ ಮತ್ತು ಗೋಲ್ಡನ್ ಟಿಕ್ ನೀಡುತ್ತದೆ. ಈ ಟಿಕ್ ನಿಂದಾಗಿ ನೈಜ ಖಾತೆ ಹಾಗೂ ನಕಲಿ ಖಾತೆ ನಡುವೆ ವ್ಯತ್ಯಾಸ ಗುರುತಿಸಲು ಸಹಾಯವಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ