ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೇಶದಲ್ಲಿ 44 ಸಾವಿರ ಖಾತೆಗಳನ್ನು ನಿಷೇಧಿಸಿದ ಟ್ವಿಟರ್

ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 25ರ ನಡುವೆ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದ ನಗ್ನತೆಯನ್ನು ಉತ್ತೇಜಿಸುವ 44,611 ಖಾತೆಗಳನ್ನು ಟ್ವಿಟರ್ ನಿಷೇಧಿಸಿದೆ.
ಟ್ವಿಟ್ಟರ್
ಟ್ವಿಟ್ಟರ್

ನವದೆಹಲಿ: ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 25ರ ನಡುವೆ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದ ನಗ್ನತೆಯನ್ನು ಉತ್ತೇಜಿಸುವ 44,611 ಖಾತೆಗಳನ್ನು ಟ್ವಿಟರ್ ನಿಷೇಧಿಸಿದೆ.

ಆಗಸ್ಟ್ 26 ಮತ್ತು ಸೆಪ್ಟೆಂಬರ್ 25 ರ ನಡುವಿನ ಹಿಂದಿನ ಅವಧಿಯಲ್ಲಿ ಕಂಪನಿಯು ಭಾರತದಲ್ಲಿ ಇಂತಹ 52,141 ಖಾತೆಗಳನ್ನು ನಿಷೇಧಿಸಿತ್ತು.

ಎಲಾನ್ ಮಸ್ಕ್ ನೇತೃತ್ವದಲ್ಲಿ ಟ್ವಿಟರ್ ಈ ಕ್ರಮವನ್ನು ಕೈಗೊಂಡಿದ್ದು, ದೇಶದಲ್ಲಿ ತನ್ನ ವೇದಿಕೆಯಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ 4,014 ಖಾತೆಗಳನ್ನು ತೆಗೆದುಹಾಕಿದೆ.

2021ರ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಟ್ವಿಟರ್ ತನ್ನ ಮಾಸಿಕ ವರದಿಯಲ್ಲಿ, ತನ್ನ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳ ಮೂಲಕ ಅದೇ ವೇಳೆಯಲ್ಲಿ ದೇಶದ ಬಳಕೆದಾರರಿಂದ 582 ದೂರುಗಳನ್ನು ಸ್ವೀಕರಿಸಿದೆ ಮತ್ತು ಕೇವಲ 20 ಯುಆರ್‌ಎಲ್‌ಗಳ ಮೇಲೆ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.

ಈ ಹಿಂದೆ ಆಗಸ್ಟ್ 26 ಮತ್ತು ಸೆಪ್ಟೆಂಬರ್ 25ರ ಅವಧಿಯಲ್ಲಿಯೂ ಬಳಕೆದಾರರಿಂದ 157 ದೂರುಗಳನ್ನು ಸ್ವೀಕರಿಸಲಾಗಿತ್ತು ಮತ್ತು 129 ಯುಆರ್‌ಎಲ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಇದು ಹಿಂದಿನ ಅವಧಿಗಿಂತ ಸಂಪೂರ್ಣ ಭಿನ್ನವಾಗಿದೆ.

ಟ್ವಿಟರ್ ಖಾತೆಯನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದ್ದ 61 ದೂರುಗಳಿಗೆ ಪ್ರತಿಕ್ರಿಯೆ ನೀಡಲಾಗಿದೆ . ಇವೆಲ್ಲವನ್ನೂ ಪರಿಹರಿಸಲಾಗಿದೆ ಮತ್ತು ಸೂಕ್ತ ಪ್ರತಿಕ್ರಿಯೆಗಳನ್ನು ಕಳುಹಿಸಲಾಗಿದೆ' ಎಂದು ತನ್ನ ಹೊಸ ವರದಿಯಲ್ಲಿ ಟ್ವಿಟರ್ ಹೇಳಿದೆ.

'ದೂರುಗಳ ಆಧಾರದ ಮೇಲೆ ಟ್ವಿಟರ್ ಖಾತೆಗಳನ್ನು ಪರಿಶೀಲಿಸಿದ ನಂತರ ನಾವು ಈ ಯಾವುದೇ ಖಾತೆಯನ್ನು ರದ್ದುಗೊಳಿಸಿಲ್ಲ. ಎಲ್ಲಾ ಖಾತೆಗಳನ್ನು ಅಮಾನತುಗೊಳಿಸಲಾಗಿದೆ. ಈ ಅವಧಿಯಲ್ಲಿ ನಾವು ಟ್ವಿಟರ್ ಖಾತೆಗಳ ಬಗ್ಗೆ ಸಾಮಾನ್ಯ ಪ್ರಶ್ನೆಗಳಿಗೆ ಸಂಬಂಧಿಸಿದ 12 ವಿನಂತಿಗಳನ್ನು ಸಹ ಸ್ವೀಕರಿಸಿದ್ದೇವೆ' ಎಂದು ಕಂಪನಿ ಹೇಳಿದೆ.

2021ರ ಹೊಸ ಐಟಿ ನಿಯಮದ ಅಡಿಯಲ್ಲಿ, 5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com