ಜಿಎಸ್ ಟಿ ದರ ಬದಲಾವಣೆ, ಜುಲೈ 18 ರಿಂದ ಜಾರಿ

ಆಸ್ಪತ್ರೆಯ ರೂಮ್ ಬಾಡಿಗೆ ದಿನಕ್ಕೆ 5,000 ರೂ.ಗಿಂತ ಹೆಚ್ಚು ಇರುವ ಕೊಠಡಿಗಳ ಬಾಡಿಗೆಗೆ ಜಿಎಸ್‌ಟಿ ವಿಧಿಸುವ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿರುವುದರ ನಡುವೆಯೇ ಕೇಂದ್ರ ಸರ್ಕಾರ ಶೇ. 5 ರಷ್ಟು ಜೆಎಸ್ ಟಿ ವಿಧಿಸಿ ಶುಕ್ರವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆಸ್ಪತ್ರೆಯ ರೂಮ್ ಬಾಡಿಗೆ ದಿನಕ್ಕೆ 5,000 ರೂ.ಗಿಂತ ಹೆಚ್ಚು ಇರುವ ಕೊಠಡಿಗಳ ಬಾಡಿಗೆಗೆ ಜಿಎಸ್‌ಟಿ ವಿಧಿಸುವ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿರುವುದರ ನಡುವೆಯೇ ಕೇಂದ್ರ ಸರ್ಕಾರ ಶೇ. 5 ರಷ್ಟು ಜೆಎಸ್ ಟಿ ವಿಧಿಸಿ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ಜುಲೈ 18ರಿಂದ ಜಾರಿಗೆ ಬರಲಿದೆ.

ಜೂನ್ 28 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 47ನೇ ಜಿಎಸ್ಟಿ ಸಭೆಯಲ್ಲಿ ನಿರ್ಧರಿಸಿದಂತೆ ಆಸ್ಪತ್ರೆಗಳ ಜಿಎಸ್ ಟಿ ದರ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ(ಸಿಬಿಐಸಿ) ತಿಳಿಸಿದೆ.

ಈ ಬದಲಾವಣೆ ಜುಲೈ 18 ರಿಂದ ಅನ್ವಯವಾಗಲಿದೆ. ತೀವ್ರ ನಿಗಾ ಘಟಕಗಳನ್ನು ಹೊರತುಪಡಿಸಿ ರೂ. 5,000 ಕ್ಕಿಂತ ಹೆಚ್ಚು ಬಾಡಿಗೆ ಇರುವ ಆಸ್ಪತ್ರೆಯ ಕೊಠಡಿಗಳ ಮೇಲೆ ಶೇ. 5 ರಷ್ಟು ಜಿಎಸ್‌ಟಿ ವಿಧಿಸಲು ಕೌನ್ಸಿಲ್ ನಿರ್ಧರಿಸಿದೆ ಎಂದು ಸಿಬಿಐಸಿ ಹೇಳಿದೆ.

ಆರೋಗ್ಯ ಕ್ಷೇತ್ರವು ಹೆಚ್ಚಾಗಿ ಜಿಎಸ್‌ಟಿಯಿಂದ ವಿನಾಯಿತಿ ಪಡೆದಿದ್ದರೂ, ಕೊಠಡಿ ಬಾಡಿಗೆಗೆ ತೆರಿಗೆ ವಿಧಿಸುವುದರಿಂದ ಇನ್ನು ಮುಂದೆ ಚಿಕಿತ್ಸಾ ವೆಚ್ಚವೂ ಹೆಚ್ಚಾಗುತ್ತದೆ.

ಜುಲೈ 18 ರಿಂದ ಈ ಸರಕುಗಳು ದುಬಾರಿಯಾಗಲಿವೆ

  • ಟೆಟ್ರಾ ಪ್ಯಾಕ್ ಮೊಸರು, ಲಸ್ಸಿ ಮತ್ತು ಬೆಣ್ಣೆ ಹಾಲಿನ ಬೆಲೆಗಳು ಹೆಚ್ಚಾಗಲಿವೆ.ಜುಲೈ 18 ರಿಂದ ಇವುಗಳ ಮೇಲೆ ಶೇ. 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ, ಇದು ಮೊದಲು ಅನ್ವಯಿಸುತ್ತಿರಲಿಲ್ಲ.
  • ಚೆಕ್‌ಬುಕ್ ವಿತರಿಸಲು ಬ್ಯಾಂಕಗಳು ಈ ಹಿಂದೆ ವಿಧಿಸುತ್ತಿದ್ದ ಸೇವಾ ತೆರಿಗೆ ಇದೀಗ ಶೇ.18 ರಷ್ಟು ಜಿಎಸ್‌ಟಿ ಆಕರ್ಷಿಸಲಿದೆ.
  • ಆಸ್ಪತ್ರೆಗಳಲ್ಲಿ ರೂ 5,000 (ಐಸಿಯು ಅಲ್ಲದ) ಕ್ಕಿಂತ ಹೆಚ್ಚಿನ ಕೊಠಡಿಗಳ ಬಾಡಿಗೆಗೆ ಶೇ.5 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ.
  • ಇವುಗಳ ಹೊರತಾಗಿ, ಇದೀಗ ಅಟ್ಲಾಸ್ ನಕ್ಷೆಯು ಶೇ.12 ರಷ್ಟು ಜಿಎಸ್‌ಟಿ ಆಕರ್ಷಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com