ಈ ವರ್ಷ ಚೀನಾದಿಂದ ಆಮದು ಶೇ. 45.51 ರಷ್ಟು ಏರಿಕೆ, 7.02 ಟ್ರಿಲಿಯನ್ ವಹಿವಾಟು!
ಈ ವರ್ಷ ಭಾರತವು ಚೀನಾದಿಂದ ಅತೀ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದು, 2021ಕ್ಕೆ ಹೋಲಿಸಿದರೆ 2022ನೇ ಆರ್ಥಿಕ ವರ್ಷದಲ್ಲಿ ಆಮದು ಪ್ರಮಾಣ ಶೇ. 45.51% ರಷ್ಟು ಏರಿಕೆಯಾಗಿದೆ.
Published: 22nd June 2022 03:15 PM | Last Updated: 24th June 2022 01:21 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಈ ವರ್ಷ ಭಾರತವು ಚೀನಾದಿಂದ ಅತೀ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದು, 2021ಕ್ಕೆ ಹೋಲಿಸಿದರೆ 2022ನೇ ಆರ್ಥಿಕ ವರ್ಷದಲ್ಲಿ ಆಮದು ಪ್ರಮಾಣ ಶೇ. 45.51% ರಷ್ಟು ಏರಿಕೆಯಾಗಿದೆ. ಈ ವರ್ಷ ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳ ಮೌಲ್ಯ 7.02 ಟ್ರಿಲಿಯನ್ ರೂಪಾಯಿಗೆ ಏರಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಕಳೆದ ವರ್ಷ ಭಾರತ ಚೀನಾದಿಂದ 4.82 ಟ್ರಿಲಿಯನ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿತ್ತು.
ಚೀನಾದಿಂದ ಅತಿದೊಡ್ಡ ಆಮದುಗಳಲ್ಲಿ ಖನಿಜ ಇಂಧನಗಳು, ಖನಿಜ ತೈಲಗಳು, ರಾಸಾಯನಿಕಗಳು, ರಸಗೊಬ್ಬರ, ಪ್ಲಾಸ್ಟಿಕ್, ಕಬ್ಬಿಣ ಮತ್ತು ಉಕ್ಕು, ವಿದ್ಯುತ್ ಯಂತ್ರೋಪಕರಣಗಳು ಮತ್ತು ಉಪಕರಣಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿವೆ.
ಚೀನಾದಿಂದ ಆಮದುಗಳ ಗಮನಾರ್ಹ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿ ಪ್ರೊಫೆಸರ್ ಲೇಖಾ ಎಸ್ ಚಕ್ರವರ್ತಿ ಆವರು, “ದ್ವಿಪಕ್ಷೀಯ ರಾಜಕೀಯ ಉದ್ವಿಗ್ನತೆಯ ನಡುವೆಯೂ ಚೀನಾದಿಂದ ಆಮದು ಶೇ. 45 ರಷ್ಟು ಏಕೆ ಹೆಚ್ಚಾಗಿದೆ ಎಂಬುದು ವಿಪರ್ಯಾಸ. ಚೀನಾದ ಮೇಲಿನ ಆಮದು ಅವಲಂಬನೆ ಹೆಚ್ಚಳ ಹಠಾತ್ ಬೆಳವಣಿಗೆಯಲ್ಲ. ಸಾಂಕ್ರಾಮಿಕ ಕಾಲದಲ್ಲಿ ಹೆಚ್ಚು ಆಮದು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ಇದನ್ನು ಓದಿ: 3 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಪೀಠೋಪಕರಣಗಳ ದೈತ್ಯ ‘ಐಕಿಯ’ ಬೆಂಗಳೂರಿನಲ್ಲಿಂದು ಕಾರ್ಯಾರಂಭ!
“ಭಾರತದಲ್ಲಿ, ಕೈಗಾರಿಕಾ ಚೇತರಿಕೆ ಪ್ರಾರಂಭವಾಗಿದೆ. ಚೀನಾದಿಂದ ಆಮದು ಮಾಡಿಕೊಳ್ಳುವುದು ಪ್ರಮುಖ ಕಚ್ಚಾ ವಸ್ತುಗಳು, ಘಟಕಗಳು ಮತ್ತು ಕೈಗಾರಿಕೆಗಳಿಗೆ ಅಗತ್ಯವಿರುವ ಇತರ ಕೈಗಾರಿಕಾ ಸರಕುಗಳು. ಕೈಗಾರಿಕಾ ಚೇತರಿಕೆ ಪ್ರಾರಂಭವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಇದು ಆತಂಕಕ್ಕೆ ಕಾರಣವಲ್ಲ. ಭಾರತದಿಂದ ರಫ್ತು ಕೂಡ ಹೆಚ್ಚಾಗಿದೆ. ನಾವು ಚೀನಾದಿಂದ ಸಿದ್ಧಪಡಿಸಿದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರೆ, ಇದು ಕಳವಳಕ್ಕೆ ಕಾರಣವಾಗಬಹುದು ಎಂದು ಹಿರಿಯ ಅರ್ಥಶಾಸ್ತ್ರಜ್ಞ ಆಕಾಶ್ ಜಿಂದಾಲ್ ಅವರು ಹೇಳಿದ್ದಾರೆ.