4,447 ಕೋಟಿ ರೂ. ಗೆ ಬ್ಲಿಂಕಿಟ್ ಕಂಪನಿ ಜೊಮ್ಯಾಟೋ ಸ್ವಾಧೀನಕ್ಕೆ!

ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿರುವ ತ್ವರಿತ ದಿನಸಿ ಡೆಲಿವರಿ ಸೇವಾ ಆ್ಯಪ್ ಬ್ಲಿಂಕಿಟ್ ಅನ್ನು ಖ್ಯಾತ ಆಹಾರ ವಿತರಣಾ ಸೇವಾ ಆ್ಯಪ್ ಜೊಮ್ಯಾಟೋ ಸ್ವಾಧೀನ ಪಡಿಸಿಕೊಳ್ಳಲಿದೆ.
ಬ್ಲಿಂಕಿಟ್-ಜೊಮ್ಯಾಟೋ
ಬ್ಲಿಂಕಿಟ್-ಜೊಮ್ಯಾಟೋ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿರುವ ತ್ವರಿತ ದಿನಸಿ ಡೆಲಿವರಿ ಸೇವಾ ಆ್ಯಪ್ ಬ್ಲಿಂಕಿಟ್ ಅನ್ನು ಖ್ಯಾತ ಆಹಾರ ವಿತರಣಾ ಸೇವಾ ಆ್ಯಪ್ ಜೊಮ್ಯಾಟೋ ಸ್ವಾಧೀನ ಪಡಿಸಿಕೊಳ್ಳಲಿದೆ.

ಹೌದು.. ತನ್ನ ಪ್ರತಿಸ್ಪರ್ಧಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ (Swiggy Instamart)ಗೆ ಸವಾಲೆಸೆಯಲು ಸಿದ್ದವಾಗಿರುವ ಜೊಮ್ಯಾಟೋ (Zomato) ಶೀಘ್ರವೇ, ತ್ವರಿತ ದಿನಸಿ ಡೆಲಿವರಿ ನೀಡುವ ಗುರುಗ್ರಾಮ ಮೂಲದ ಬ್ಲಿಂಕಿಟ್‌ (Blinkit) ಅನ್ನು 4,447 ಕೋಟಿ ರೂ.ಗೆ ಸ್ವಾಧೀನ ಪಡಿಸಿಕೊಳ್ಳಲಿದೆ. 

ಆಹಾರ ವಿತರಣಾ ಕಂಪನಿ ಜೊಮಾಟೊ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯು ತ್ವರಿತ ವಾಣಿಜ್ಯ ವಿತರಣಾ ಸೇವಾ ಕಂಪನಿ ಬ್ಲಿಂಕಿಟ್ ಅನ್ನು ರೂ 4,447 ಕೋಟಿಗೆ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪವನ್ನು ಶುಕ್ರವಾರ ಅನುಮೋದಿಸಿದೆ. ಇದು ಎಲ್ಲಾ ಷೇರುಗಳನ್ನೊಳಗೊಂಡ ಒಪ್ಪಂದವಾಗಿರುತ್ತದೆ ಎನ್ನಲಾಗಿದೆ.

ಸ್ಟಾಕ್ ಎಕ್ಸ್‌ಚೇಂಜ್‌ಗೆ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ, ಜೊಮಾಟೊ ತನ್ನ ಮಂಡಳಿಯು ಬ್ಲಿಂಕ್ ಕಾಮರ್ಸ್ ಪ್ರೈವೇಟ್ ಲಿಮಿಟೆಡ್‌ನ 33,018 ಈಕ್ವಿಟಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅನುಮೋದಿಸಿದೆ ಎಂದು ಹೇಳಿದೆ. ಇದನ್ನು ಹಿಂದೆ ಗ್ರೋಫರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಪ್ರತಿ ಇಕ್ವಿಟಿ ಷೇರಿನ ಬೆಲೆ 13,46,986.01 ರೂ.ಗಳಂತೆ ಕಂಪನಿಯ ಈಕ್ವಿಟಿ ಷೇರುಗಳ ವಿತರಣೆ ಮತ್ತು ಹಂಚಿಕೆಯ ಮೂಲಕ 62,85,30,012 ರೂ ವರೆಗೆ ಸಂಪೂರ್ಣ ಪಾವತಿಸಿ ಖರೀದಿಸಿದೆ.

ಕಳೆದ ವರ್ಷ, ಜೊಮಾಟೊ ಗ್ರೋಫರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ 150 ಮಿಲಿಯನ್ ಡಾಲರ್ ಸಾಲವನ್ನು ವಿಸ್ತರಿಸಿತ್ತು, ಅದನ್ನು ಈಗ ಬ್ಲಿಂಕ್ ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿದೆ. ಜೊಮಾಟೊ ಲಿಮಿಟೆಡ್‌ನ ಷೇರಿನ ಬೆಲೆ ಶೇ.1.15ರಷ್ಟು ಏರಿಕೆಯಾಗಿ 70.35 ರೂ.ಗೆ ತಲುಪಿದೆ. ವಹಿವಾಟಿನ ಮುಕ್ತಾಯದ ನಂತರ ಕಂಪನಿಯು ಈ ಘೋಷಣೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com