ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ಮೊದಲ ಬಾರಿಗೆ ಪ್ರತಿ ಡಾಲರ್ ಬೆಲೆ 79 ರೂ.!
ಭಾರತೀಯ ಷೇರುಮಾರುಕಟ್ಟೆ ವಹಿವಾಟು ಕುಸಿತದ ಬೆನ್ನಲ್ಲೇ ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತೀ ಡಾಲರ್ ಎದುರು ಇದೇ ಮೊದಲ ಬಾರಿಗೆ 79 ರೂಗಳಿಗಿಂತ ಕೆಳಗೆ ಕುಸಿದಿದೆ.
Published: 29th June 2022 04:25 PM | Last Updated: 29th June 2022 04:35 PM | A+A A-

ಸಂಗ್ರಹ ಚಿತ್ರ
ಮುಂಬೈ: ಭಾರತೀಯ ಷೇರುಮಾರುಕಟ್ಟೆ ವಹಿವಾಟು ಕುಸಿತದ ಬೆನ್ನಲ್ಲೇ ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತೀ ಡಾಲರ್ ಎದುರು ಇದೇ ಮೊದಲ ಬಾರಿಗೆ 79 ರೂಗಳಿಗಿಂತ ಕೆಳಗೆ ಕುಸಿದಿದೆ.
ಇದನ್ನೂ ಓದಿ: ಡಾಲರ್ ಎದುರು ಮತ್ತೆ ದಾಖಲೆ ಕುಸಿತ ಕಂಡ ರೂಪಾಯಿ ಮೌಲ್ಯ
ತೈಲ ದರ ಏರಿಕೆ ಮತ್ತು ನಿರಂತರ ಹಣದುಬ್ಬರ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದ್ದು, ಬುಧವಾರ ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 79.04ಕ್ಕೆ ಕುಸಿದಿದೆ. ನಿನ್ನೆ ವಹಿವಾಟು ಅಂತ್ಯಕ್ಕೆ 78.86 ರೂನಷ್ಟಿದ್ದ ರೂಪಾಯಿ ಮೌಲ್ಯ ಇಂದು ಮತ್ತೆ 19 ಪೈಸೆಯಷ್ಟು ಕುಸಿತಕಂಡು 79.04ರೂಗೆ ಕುಸಿದಿದೆ.
ಇದನ್ನೂ ಓದಿ: 3 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಪೀಠೋಪಕರಣಗಳ ದೈತ್ಯ ‘ಐಕಿಯ’ ಬೆಂಗಳೂರಿನಲ್ಲಿಂದು ಕಾರ್ಯಾರಂಭ!
ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೂಪಾಯಿ ಮೌಲ್ಯವನ್ನು ಹೆಚ್ಚಿಸಲು ಮಾರುಕಟ್ಟೆ ಮಧ್ಯಪ್ರವೇಶಿಸಿದೆಯಾದರೂ ರೂಪಾಯಿ ಮೌಲ್ಯ ಕುಸಿತ ಮಾತ್ರ ನಿರಂತರವಾಗಿದೆ. ಪ್ರಸ್ತುತ ಆರ್ ಬಿಐ ಹಸ್ತಕ್ಷೇಪ ವಿಧಾನದಿಂದ ಕರೆನ್ಸಿ ಮೌಲ್ಯ ಕುಸಿತವು ವೇಗವಾಗುತ್ತಿರುವುದರಿಂದ ರೂಪಾಯಿ ಮೇಲಿನ ಒತ್ತಡವನ್ನು ತಗ್ಗಿಸಲು RBI ತನ್ನ ಕಾರ್ಯತಂತ್ರವನ್ನು ಬದಲಾಯಿಸಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ.