ಮೆಟಾ, ಟ್ವಿಟರ್, ಅಮೇಜಾನ್ ನ ಮಾಜಿ ಉದ್ಯೋಗಿಗಳಿಗೆ ನೌಕರಿ ನೀಡಲು ಟಾಟಾ ಸಂಸ್ಥೆ ಮುಂದು!

2016 ರಲ್ಲಿ ಬ್ರಿಟನ್ ನ ಪೋರ್ಟ್ ಪೋರ್ಟ್ ಟಾಲ್ಬೋಟ್ ಸ್ಟೀಲ್ ಪ್ಲಾಂಟ್ ನಲ್ಲಿ 1 ಬಿಲಿಯನ್ ಡಾಲರ್ ನ್ನು ಹೂಡಿಕೆ ಮಾಡುವ ಮೂಲಕ ರತನ್ ಟಾಟಾ ಬ್ರಿಟನ್ ನಲ್ಲಿ ಸಾವಿರಾರು ಮಂದಿಯ ಉದ್ಯೋಗವನ್ನು ರಕ್ಷಿಸಿದ್ದರು. 
ರತನ್ ಟಾಟಾ
ರತನ್ ಟಾಟಾ

ನವದೆಹಲಿ: 2016 ರಲ್ಲಿ ಬ್ರಿಟನ್ ನ ಪೋರ್ಟ್ ಪೋರ್ಟ್ ಟಾಲ್ಬೋಟ್ ಸ್ಟೀಲ್ ಪ್ಲಾಂಟ್ ನಲ್ಲಿ 1 ಬಿಲಿಯನ್ ಡಾಲರ್ ನ್ನು ಹೂಡಿಕೆ ಮಾಡುವ ಮೂಲಕ ರತನ್ ಟಾಟಾ ಬ್ರಿಟನ್ ನಲ್ಲಿ ಸಾವಿರಾರು ಮಂದಿಯ ಉದ್ಯೋಗವನ್ನು ರಕ್ಷಿಸಿದ್ದರು. 

ಈಗ ಟಾಟಾ ಸಮೂಹ ಅಂತಹದ್ದೇ ಒಂದು ನಿರ್ಧಾರವನ್ನು ಪ್ರಕಟಿಸಿದೆ. ಟ್ವಿಟರ್, ಮೆಟಾ, ಅಮೇಜಾನ್ ನಲ್ಲಿ ಉದ್ಯೋಗ ಕಡಿತವಾಗುತ್ತಿದ್ದು ಅಲ್ಲಿನ ಬಹುತೇಕ ನೌಕರರನ್ನು ತನ್ನ ಸಂಸ್ಥೆಗೆ ನೇಮಕ ಮಾಡಿಕೊಳ್ಳುವುದಕ್ಕೆ ಮುಂದಾಗಿದೆ. 

ಬ್ರಿಟನ್ ನಲ್ಲಿ ಟಾಟಾ ಸಮೂಹ ಸಂಸ್ಥೆಗಳ ಭಾಗವಾಗಿರುವ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಫೋರ್ಡ್ ನಿಂದ ಟಾಟಾ ಸಮೂಹ ಖರೀದಿಸಿದ್ದ ಸಂಸ್ಥೆಗಳು ಇಂದು ಟ್ವಿಟರ್, ಮೆಟಾ, ಅಮೇಜಾನ್ ನ ಮಾಜಿ ಉದ್ಯೋಗಿಗಳಿಗೆ ಆಶಾಕಿರಣವಾಗಿ ಹೊರಹೊಮ್ಮಿದೆ. ನಿರ್ದಿಷ್ಟ ಪೋರ್ಟಲ್ ನಲ್ಲಿ ಟ್ವಿಟರ್, ಮೆಟಾ, ಅಮೇಜಾನ್ ನ ಮಾಜಿ ಉದ್ಯೋಗಿಗಳಿಗೆ ಉದ್ಯೋಗ ನೀಡಲು ಮುಂದಾಗಿದೆ.

ಟಾಟಾ ಸಂಸ್ಥೆ ವಿದ್ಯುತ್ ಚಾಲಿತ ವಾಹನಗಳತ್ತ ಹೆಚ್ಚು ಗಮನ ನೀಡುತ್ತಿದ್ದು, ತಾಂತ್ರಿಕ ವಿಭಾದ ವೃತ್ತಿಪರರಿಗೆ 800 ಉದ್ಯೋಗಗಳನ್ನು ನೀಡುವುದಾಗಿ ಹೇಳಿದ್ದು, ಮೆಟಾ, ಅಮೇಜಾನ್ ನಂತಹ ಸಂಸ್ಥೆಗಳಿಂದ ಉದ್ಯೋಗ ಕಳೆದುಕೊಂಡಿರುವವರನ್ನು ಆದ್ಯತೆಯನ್ನಾಗಿ ಪರಿಗಣಿಸಲಿದೆ.
 
ಮೆಟಾದಲ್ಲಿ 11,000 ಮಂದಿ ಉದ್ಯೋಗ ಕಳೆದುಕೊಂಡರೆ, ಅಮೇಜಾನ್ ನಿಂದ 10,000 ಮಂದಿ ಹೊರಬಂದಿದ್ದಾರೆ. ಇನ್ನು ಟ್ವಿಟರ್ ನಲ್ಲಿ ಶೇ.50 ರಷ್ಟು ಉದ್ಯೋಗಿಗಳನ್ನು ತೆಗೆದುಹಾಕಲಾಗಿದೆ. ಇನ್ನೂ ಕೆಲವರು ಎಲಾನ್ ಮಸ್ಕ್ ಅವರ ನಿರ್ಬಂಧಗಳಿಗೆ ಬೇಸತ್ತು ರಾಜೀನಾಮೆ ನೀಡಿದ್ದಾರೆ.
 
ಟಾಟಾ ಸಂಸ್ಥೆಯ ಜಾಗ್ವಾರ್ ಲ್ಯಾಂಡ್ ರೋವರ್ ಟೆಕ್ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವತ್ತ ಗಮನ ಹರಿಸಿದ್ದು, AI, ಕ್ಲೌಡ್ ಸಾಫ್ಟ್‌ವೇರ್, ಡೇಟಾ ಸೈನ್ಸ್ ಮತ್ತು ಮಷಿನ್ ಲರ್ನಿಂಗ್ ವಿಭಾಗಗಳಲ್ಲಿ ನುರಿತ ಪ್ರತಿಭೆಯನ್ನು ಹುಡುಕುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com