ವಿಶ್ವದ ಅತಿ ದೊಡ್ಡ ಆರ್ಥಿಕತೆ ಪಟ್ಟಿಯಲ್ಲಿ ಬ್ರಿಟನ್ ನ್ನು ಭಾರತ ಹಿಂದಿಟ್ಟಿದ್ದು ಹೀಗೆ...

ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಹಿಂದಿಕ್ಕಿರುವ ಭಾರತ 5ನೇ ಸ್ಥಾನಕ್ಕೇರಿದ್ದು, ಬ್ರಿಟನ್ ಆರನೇ ಸ್ಥಾನಕ್ಕೆ ಕುಸಿದಿದೆ.
ಆರ್ಥಿಕತೆ
ಆರ್ಥಿಕತೆ

ನವದೆಹಲಿ: ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಹಿಂದಿಕ್ಕಿರುವ ಭಾರತ 5ನೇ ಸ್ಥಾನಕ್ಕೇರಿದ್ದು, ಬ್ರಿಟನ್ ಆರನೇ ಸ್ಥಾನಕ್ಕೆ ಕುಸಿದಿದೆ.
 
ಹಾಗೆ ನೋಡಿದರೆ, ಭಾರತ ಜನವರಿ-ಮಾರ್ಚ್ ತ್ರೈಮಾಸಿಕದಲ್ಲೇ ಬ್ರಿಟನ್ ಜಿಡಿಪಿಯನ್ನು ಹಿಂದಿಕ್ಕಿತ್ತು. ಆ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 864 ಬಿಲಿಯನ್ ಡಾಲರ್ ಆಗಿದ್ದರೆ, ಬ್ರಿಟನ್ 813 ಬಿಲಿಯನ್ ಡಾಲರ್ ನಷ್ಟು ಜಿಡಿಪಿ ಹೊಂದಿತ್ತು.

ಮಾರ್ಚ್ ತಿಂಗಳಿನಿಂದ ಭಾರತದ ರೂಪಾಯಿ ಹಾಗೂ ಬ್ರಿಟನ್ ಪೌಂಡ್ ಡಾಲರ್ ಎದುರು ದುರ್ಬಲಗೊಂಡಿದ್ದವು. ಈ ನಡುವೆ ಏಪ್ರಿಲ್ ನಲ್ಲಿ ಪ್ರಕಟಗೊಂಡ ಐಎಂಎಫ್ ನ ಜಾಗತಿಕ ಮುನ್ನೋಟದಲ್ಲಿ ಭಾರತದ ಜಿಡಿಪಿ 2021 ರಲ್ಲಿ 3.18 ಟ್ರಿಲಿಯನ್ ಡಾಲರ್ ಇರಲಿದೆ ಎಂದು ಅಂದಾಜಿಸಿದ್ದರೆ, ಬ್ರಿಟನ್ ಜಿಡಿಪಿಯ ಅಂದಾಜು 3.19 ಟ್ರಿಲಿಯನ್ ಡಾಲರ್ ನಷ್ಟಿತ್ತು. ಇದೇ ವರದಿಯಲ್ಲಿ ಐಎಂಎಫ್ 2022 ರಲ್ಲಿ ಭಾರತ ಬ್ರಿಟನ್ ನ ಆರ್ಥಿಕತೆಯನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಿತ್ತು, ಅದರ ಪ್ರಕಾರ, ಭಾರತದ ಆರ್ಥಿಕತೆ 2022 ರ ಅಂತ್ಯಕ್ಕೆ 3.54 ಟ್ರಿಲಿಯನ್ ಡಾಲರ್ ನಷ್ಟಿರಲಿದ್ದರೆ, ಬ್ರಿಟನ್ ನದ್ದು 3.38 ಟ್ರಿಲಿಯನ್ ಡಾಲರ್ ಇರಲಿದೆ.

ರಿಯಲ್ ಹಾಗೂ ನಾಮಿನಲ್ ರೇಟ್ ಎರಡರಲ್ಲೂ ಭಾರತದ ಆರ್ಥಿಕತೆ ಬ್ರಿಟನ್ ನ ಆರ್ಥಿಕತೆಗಿಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ಭಾರತದ ಆರ್ಥಿಕತೆ ಕಳೆದ 10 ವರ್ಷಗಳಲ್ಲಿ ಶೇ.5.71 ರಷ್ಟು ನಾಮಿನಲ್ ರೇಟ್ ಸಿಎಜಿಆರ್ ನಷ್ಟು ಬೆಳವಣಿಗೆ ಸಾಧಿಸಿದ್ದರೆ, ಬ್ರಿಟನ್ ನದ್ದು ಶೇ.1.76 ರಷ್ಟಿದೆ. ಭಾರತ ಬ್ರಿಟನ್ ನಡುವಿನ ಜಿಡಿಪಿ ಬೆಳವಣಿಗೆ ನಡುವಿನ ಅಂತರ ಇದೇ ರೀತಿ ಮುಂದುವರೆಯಲಿದ್ದು. ಒಂದು ವೇಳೆ ಭಾರತದ ಜಿಡಿಪಿ 5 ಟ್ರಿಲಿಯನ್ ಗೆ ಬೆಳವಣಿಗೆಯಾದರೆ ಉಭಯ ದೇಶಗಳ ನಡುವಿನ ಜಿಡಿಪಿ ಬೆಳವಣಿಗೆ ಅಂತರ ಹೆಚ್ಚಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com