100 ಉದಯೋನ್ಮುಖ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಕಾಶ್ ಅಂಬಾನಿ

ಭಾರತ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಇಬ್ಬರು ಪುತ್ರರಲ್ಲಿ ಹಿರಿಯರಾದ ಆಕಾಶ್ ಅಂಬಾನಿ ಅವರು ಟೈಮ್ ಮ್ಯಾಗಜೀನ್‌ನ ಜಗತ್ತಿನ ಟಾಪ್ 100 ಉದಯೋನ್ಮುಖ ಉದ್ಯಮಿಗಳಲ್ಲಿ ಸ್ಥಾನ ಪಡೆದಿದ್ದಾರೆ.
ಆಕಾಶ್ ಅಂಬಾನಿ
ಆಕಾಶ್ ಅಂಬಾನಿ

ನವದೆಹಲಿ: ಭಾರತ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಇಬ್ಬರು ಪುತ್ರರಲ್ಲಿ ಹಿರಿಯರಾದ ಆಕಾಶ್ ಅಂಬಾನಿ ಅವರು ಟೈಮ್ ಮ್ಯಾಗಜೀನ್‌ನ ಜಗತ್ತಿನ ಟಾಪ್ 100 ಉದಯೋನ್ಮುಖ ಉದ್ಯಮಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಪ್ರತಿ ವರ್ಷ ಟೈಮ್ ನಿಯತಕಾಲಿಕವು ಟೈಮ್ 100 ನೆಕ್ಸ್ಟ್ ಪಟ್ಟಿಯನ್ನು ಪ್ರಕಟಿಸುತ್ತದೆ. ಇದು ವಿಶ್ವದಾದ್ಯಂತ 100 ಉದಯೋನ್ಮುಖ ಉದ್ಯಮಿಗಳನ್ನು ಗುರುತಿಸುತ್ತದೆ.

ಈ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಆಕಾಶ್ ಅಂಬಾನಿ ಎಂದು ವರದಿಯಾಗಿದೆ. ರಿಲಯನ್ಸ್ ಜಿಯೋ ಅಧ್ಯಕ್ಷರಾಗಿರುವ ಆಕಾಶ್ ಅಂಬಾನಿ ಅವರು, ವ್ಯಾಪಾರವನ್ನು ಹೆಚ್ಚಿಸಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಗೂಗಲ್ ಮತ್ತು ಫೇಸ್‌ಬುಕ್‌ನೊಂದಿಗೆ ಶತಕೋಟಿ ಡಾಲರ್ ಹೂಡಿಕೆ ಒಪ್ಪಂದಗಳನ್ನು ಪೂರ್ಣಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಟೈಮ್ ನಿಯತಕಾಲಿಕೆ ಹೇಳಿದೆ.

"ಆಕಾಶ್ ಅಂಬಾನಿ ಅವರು 426 ಮಿಲಿಯನ್ ಚಂದಾದಾರರನ್ನು ಹೊಂದಿರುವ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ಜಿಯೋದ ಅಧ್ಯಕ್ಷರಾಗಿ ಕಳೆದ ಜೂನ್‌ನಲ್ಲಿ ಅಧಿಕಾರ ವಹಿಸಿಕೊಂಡರು. ಕೇವಲ 22ನೇ ವಯಸ್ಸಿನಲ್ಲಿ ಅವರು ಜಿಯೋ ಮಂಡಳಿಯಲ್ಲಿ ಸ್ಥಾನ ಪಡೆದರು, ಇದು ಗಮನಾರ್ಹ ಸಾಧನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com