ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದುಂತೆ ಲಸಿಕೆ ತಯಾರಿಕೆ ಪುನರಾರಂಭಿಸಿದ ಸೀರಮ್ ಇನ್‌ಸ್ಟಿಟ್ಯೂಟ್

ದೇಶದಲ್ಲಿ ಮತ್ತೆ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಮಧ್ಯೆ, ಕೋವಿಡ್ -19 ಲಸಿಕೆ ಕೋವಿಶೀಲ್ಡ್ ತಯಾರಿಕೆಯನ್ನು ಪುನರಾರಂಭಿಸಿರುವುದಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಸಿಇಒ ಅದಾರ್ ಪೂನಾವಾಲ...
ಅದಾರ್ ಪೂನಾವಾಲ
ಅದಾರ್ ಪೂನಾವಾಲ

ಮುಂಬೈ: ದೇಶದಲ್ಲಿ ಮತ್ತೆ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಮಧ್ಯೆ, ಕೋವಿಡ್ -19 ಲಸಿಕೆ ಕೋವಿಶೀಲ್ಡ್ ತಯಾರಿಕೆಯನ್ನು ಪುನರಾರಂಭಿಸಿರುವುದಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಸಿಇಒ ಅದಾರ್ ಪೂನಾವಾಲ ಅವರು ಬುಧವಾರ ಹೇಳಿದ್ದಾರೆ.

ಕಂಪನಿಯು ಈಗಾಗಲೇ ಆರು ಮಿಲಿಯನ್ ಬೂಸ್ಟರ್ ಡೋಸ್ ಕೋವೊವಾಕ್ಸ್ ಲಸಿಕೆಯನ್ನು ಹೊಂದಿದೆ ಮತ್ತು ವಯಸ್ಕರು ಬೂಸ್ಟರ್ ಡೋಸ್ ಲಸಿತ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಕೋವಿಡ್ -19 ಲಸಿಕೆಗಳ ಕೊರತೆಯ ವರದಿಗಳಿಗೆ ಪ್ರತಿಕ್ರಿಯಿಸಿದ ಪೂನಾವಾಲ ಅವರು, ಕೋವಿಡ್ ಲಸಿಕೆ ತಯಾರಿಸಲು ತಯಾರಕರು ಸಿದ್ಧರಾಗಿದ್ದಾರೆ. ಆದರೆ ಯಾವುದೇ ಬೇಡಿಕೆ ಇಲ್ಲ ಎಂದರು.

"ಕೇವಲ ಮುನ್ನೆಚ್ಚರಿಕೆಯಾಗಿ ಲಸಿಕೆ ತಯಾರಿಕೆಯನ್ನು ನಾವು ಪುನರಾರಂಭಿಸಿರುವುದ್ದೇವೆ. ಜನ ಬಯಸಿದಲ್ಲಿ ಕೋವಿಶೀಲ್ಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು" ಎಂದು ಪೂನಾವಾಲ ಅವರು ಪಿಟಿಐಗೆ ತಿಳಿಸಿದ್ದಾರೆ.

ಸೀರಮ್ ಇನ್‌ಸ್ಟಿಟ್ಯೂಟ್ ಡಿಸೆಂಬರ್ 2021 ರಲ್ಲಿ ಕೋವಿಶೀಲ್ಡ್ ಉತ್ಪಾದನೆಯನ್ನು ನಿಲ್ಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com