ಭಾರತದಲ್ಲಿ ಮತ್ತೆ ಸಮುದಾಯದತ್ತ ಕೋವಿಡ್ ಪ್ರವೇಶ; ಮುಂದಿನ 10-12 ದಿನಗಳವರೆಗೆ ಪ್ರಕರಣಗಳ ಹೆಚ್ಚಳ ಸಾಧ್ಯತೆ

ಭಾರತದಲ್ಲಿ ಕೋವಿಡ್ ಸಮುದಾಯದತ್ತ ಸಾಗುತ್ತಿದೆ. ಆದ್ದರಿಂದ, ಮುಂದಿನ 10-12 ದಿನಗಳವರೆಗೆ ಪ್ರಕರಣಗಳು ಹೆಚ್ಚಾಗಬಹುದು. ನಂತರವೇ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ನವದೆಹಲಿ: ಭಾರತದಲ್ಲಿ ಕೋವಿಡ್ ಸಮುದಾಯದತ್ತ ಸಾಗುತ್ತಿದೆ. ಆದ್ದರಿಂದ, ಮುಂದಿನ 10-12 ದಿನಗಳವರೆಗೆ ಪ್ರಕರಣಗಳು ಹೆಚ್ಚಾಗಬಹುದು. ನಂತರವೇ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಗಿದೆ ಮತ್ತು ಇದೇ ಸ್ಥಿತಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಕೊರೊನಾವೈರಸ್‌ನ ರೂಪಾಂತರವಾದ ಓಮಿಕ್ರಾನ್‌ನ (Omicron) ಉಪತಳಿ XBB.1.16 ನಿಂದ ದೇಶದಾದ್ಯಂತ ಕೋವಿಡ್ ಪ್ರಕರಣಗಳ ಏರಿಕೆಯಾಗುತ್ತಿದೆ ಎಂದು ಅವರು ಹೇಳಿದರು.

ಓಮಿಕ್ರಾನ್ ಮತ್ತು ಅದರ ಉಪ ತಳಿಗಳು ಪ್ರಬಲವಾದ ರೂಪಾಂತರವಾಗಿ ಮುಂದುವರಿದರೂ, ಗುರುತಿಸಲ್ಪಟ್ಟ ಮತ್ತು ಹೆಸರಿಸಲಾದ ಇತರ ರೂಪಾಂತರಗಳು ವೈರಸ್ ಹರಡುವಿಕೆ ಸೇರಿದಂತೆ ಅದು ಉಂಟುಮಾಡುವ ಅನಾರೋಗ್ಯದ ತೀವ್ರತೆ, ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುವುದಿಲ್ಲ. ಈ ಇತರ ರೂಪಾಂತರಗಳನ್ನು ಒಮಿಕ್ರಾನ್ ರೂಪಾಂತರಕ್ಕೆ ಹೋಲಿಸಿದರೆ, ಅವು ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಬೆದರಿಕೆಯನ್ನು ಉಂಟುಮಾಡುವುದಿಲ್ಲ.

XBB.1.16 ನ ಹರಡುವಿಕೆಯು ಈ ವರ್ಷದ ಫೆಬ್ರುವರಿಯಲ್ಲಿ ಶೇ 21.6 ರಿಂದ ಮಾರ್ಚ್‌ನಲ್ಲಿ ಶೇ 35.8 ಕ್ಕೆ ಏರಿಕೆಯಾಗಿದೆ. ಆದಾಗ್ಯೂ, ಆಸ್ಪತ್ರೆಗೆ ದಾಖಲಾದ ಅಥವಾ ಮರಣ ಪ್ರಮಾಣ ಹೆಚ್ಚಳದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com