ಭಾರತೀಯ ವಾಹನ ಉದ್ಯಮಕ್ಕೆ ಅನುಪಮ ಕೊಡುಗೆ ನೀಡಿದ್ದ ಕೇಶಬ್ ಮಹೀಂದ್ರಾ ನಿಧನ!

ಭಾರತೀಯ ಆಟೋಮೊಬೈಲ್ ಉದ್ಯಮದ ಅನುಭವಿ ಮತ್ತು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ (M&M) ನ ಅಧ್ಯಕ್ಷರಾದ ಕೇಶಬ್ ಮಹೀಂದ್ರಾ ಅವರು ಇಂದು ಬೆಳಿಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. 99 ವರ್ಷದ ಕೇಶಬ್ ಮಹೀಂದ್ರಾ ಅವರು ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕಂಪನಿ ತಿಳಿಸಿದೆ. 
ಕೇಶಬ್ ಮಹಿಂದ್ರಾ
ಕೇಶಬ್ ಮಹಿಂದ್ರಾ
Updated on

ನವದೆಹಲಿ: ಭಾರತೀಯ ಆಟೋಮೊಬೈಲ್ ಉದ್ಯಮದ ಅನುಭವಿ ಮತ್ತು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ (M&M) ನ ಅಧ್ಯಕ್ಷರಾದ ಕೇಶಬ್ ಮಹೀಂದ್ರಾ ಅವರು ಇಂದು ಬೆಳಿಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. 99 ವರ್ಷದ ಕೇಶಬ್ ಮಹೀಂದ್ರಾ ಅವರು ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕಂಪನಿ ತಿಳಿಸಿದೆ. 

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದು, ಕೇಶಬ್ ಮಹೀಂದ್ರಾ ತತ್ವಬದ್ಧ ವ್ಯಕ್ತಿಯಾಗಿದ್ದರು. ಕೇಶಬ್ ಮಹೀಂದ್ರಾ ಅವರು ತಮ್ಮ ಚಾಣಾಕ್ಷ ವ್ಯವಹಾರ ಕುಶಾಗ್ರಮತಿಗೆ ಹೆಸರುವಾಸಿಯಾಗಿದ್ದರು. ಅವರು ಮಹೀಂದ್ರವನ್ನು ವೈವಿಧ್ಯಮಯ ಸಂಘಟಿತ ಸಂಸ್ಥೆಯಾಗಿ ಪರಿವರ್ತಿಸಲು ಸಹಾಯ ಮಾಡಿದರು. ಅವರ ಜನಕೇಂದ್ರಿತ ವಿಧಾನವು ಅವರನ್ನು ಜಾಗತಿಕ ವ್ಯಾಪಾರದ ಧೀಮಂತರನ್ನಾಗಿ ಮಾಡಿತ್ತು. ಅವರು ವ್ಯಾಪಕವಾಗಿ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು ಎಂದು ಟ್ವೀಟಿಸಿದ್ದಾರೆ.

ಕೇಶಬ್ ಅವರು 1923ರ ಅಕ್ಟೋಬರ್ 9ರಂದು ಶಿಮ್ಲಾದಲ್ಲಿ ಜನಿಸಿದರು. ಯುಎಸ್ಎಯ ಪೆನ್ಸಿಲ್ವೇನಿಯಾದ ವಾರ್ಟನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದ ಅವರು 1947ರಲ್ಲಿ ಕಂಪನಿಯನ್ನು ಸೇರಿದರು. ಅಲ್ಲದೆ 1963ರಲ್ಲಿ ಅದರ ಅಧ್ಯಕ್ಷರಾದರು. ಕೇಶಬ್ ಮಹೀಂದ್ರಾ ಸ್ಟೀಲ್ ಟ್ರೇಡಿಂಗ್ ಕಂಪನಿಯನ್ನು $15.4 ಬಿಲಿಯನ್ ವೈವಿಧ್ಯಮಯ ಸಂಘಟಿತವಾಗಿ ಪರಿವರ್ತಿಸಿದ್ದರು. 2012ರಲ್ಲಿ ಅವರು ತಮ್ಮ ಸೋದರಳಿಯ ಮತ್ತು ಗ್ರೂಪ್ ನ ಅಂದಿನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ್ ಮಹೀಂದ್ರಾ ಅವರಿಗೆ ಗ್ರೂಪ್ ನ ಅಧಿಕಾರವನ್ನು ಹಸ್ತಾಂತರಿಸಿದರು. 

ಕೇಶಬ್ ಅವರು 64 ವರ್ಷಗಳ ಕಾಲ ಮಹೀಂದ್ರಾ ಅಂಡ್ ಮಹೀಂದ್ರಾ ಮಂಡಳಿಯಲ್ಲಿ ನಿರ್ದೇಶಕರಾಗಿದ್ದರು. ಅವರು ಸಾರ್ವಜನಿಕ ಮತ್ತು ಖಾಸಗಿ ವಲಯದ ಹಲವಾರು ಸಂಸ್ಥೆಗಳ ಮಂಡಳಿಯಲ್ಲಿದ್ದಾರೆ. ಅವರು ಹುಡ್ಕೊದ ಸ್ಥಾಪಕ ಅಧ್ಯಕ್ಷರಾಗಿದ್ದರು. ಇದಲ್ಲದೆ, ಅವರು SAIL, ಟಾಟಾ ಸ್ಟೀಲ್, ಟಾಟಾ ಕೆಮಿಕಲ್ಸ್, ಇಂಡಿಯನ್ ಹೋಟೆಲ್ಸ್, IFC, ICICI ಮತ್ತು HDFC ನಂತಹ ಅನೇಕ ಕಂಪನಿಗಳ ಮಂಡಳಿಯಲ್ಲಿದ್ದರು. ಉದ್ಯಮ ಸಂಸ್ಥೆ ಅಸೋಚಾಮ್‌ನ ಅಪೆಕ್ಸ್ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದರು. 

ಕೇಶಬ್ ಅವರು 1987ರಲ್ಲಿ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಗೌರವವಾದ ಚೆವಲಿಯರ್ ಡೆ ಲಾ ಲೆಜಿಯನ್ ಡಿ'ಹಾನರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com