ಹಸಿರು ಇಂಧನ ಉತ್ಪಾದನೆಯಲ್ಲಿ ಕರ್ನಾಟಕ, ಹಿಮಾಚಲ ಪ್ರದೇಶ, ರಾಜಸ್ಥಾನ, ಮುಂಚೂಣಿ!

ಹವಾಮಾನ ಬದಲಾವಣೆ ಸಂಬಂಧಿತ ವಿಪತ್ತು ಹೆಚ್ಚಳದ ನಡುವೆ ಮೂರು ರಾಜ್ಯಗಳಾದ ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ಹಸಿರು ಇಂಧನ ಉತ್ಪಾದನೆಯ ಮುಂಚೂಣಿ ರಾಜ್ಯಗಳಾಗಿ ಹೊರಹೊಮ್ಮಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹವಾಮಾನ ಬದಲಾವಣೆ ಸಂಬಂಧಿತ ವಿಪತ್ತು ಹೆಚ್ಚಳದ ನಡುವೆ ಮೂರು ರಾಜ್ಯಗಳಾದ ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ಹಸಿರು ಇಂಧನ ಉತ್ಪಾದನೆಯ ಮುಂಚೂಣಿ ರಾಜ್ಯಗಳಾಗಿ ಹೊರಹೊಮ್ಮಿವೆ. ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿ ಉತ್ಪಾದಿಸಲಾದ ಎಲ್ಲಾ ನವೀಕರಿಸಬಹುದಾದ ಇಂಧನದಲ್ಲಿ ಈ ಮೂರು ರಾಜ್ಯಗಳ ಕೊಡುಗೆ ಸುಮಾರು ಶೇ.35 ರಷ್ಟಿದೆ. ಈ ಮೂರು ರಾಜ್ಯಗಳ ನಡುವೆ ಕಳೆದ ವರ್ಷ ನವೀಕರಿಸಬಹುದಾದ ಮೂಲಗಳಿಂದ 126, 269 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. 

ಒಟ್ಟಾರೆಯಾಗಿ ಕಳೆದ ವರ್ಷ ದೇಶದಲ್ಲಿ ಉತ್ಪಾದಿಸಲಾದ 1.6 ಟ್ರಿಲಿಯನ್ ಯೂನಿಟ್ ವಿದ್ಯುತ್‌ನಲ್ಲಿ ನವೀಕರಿಸಬಹುದಾದ ಮೂಲಗಳ ಕೊಡುಗೆ ಶೇ.22.6 ರಷ್ಟಿದೆ. ಕಳೆದ ವರ್ಷ ನವೀಕರಿಸಬಹುದಾದ ಇಂಧನ ಮೂಲದಿಂದ ಉತ್ಪಾದಿಸಲಾದ 366 ಶತಕೋಟಿ ಯೂನಿಟ್ ವಿದ್ಯುತ್‌ನಲ್ಲಿ  ಜಲವಿದ್ಯುತ್ 162 ಶತಕೋಟಿ ಯೂನಿಟ್ ನಷ್ಟು ದೊಡ್ಡ ಭಾಗವನ್ನು ಹೊಂದಿದೆ. ಅದರ ನಂತರ ಸೌರಶಕ್ತಿಯಿಂದ 102 ಬಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಮೂರನೇ ಸ್ಥಾನದಲ್ಲಿ ಪವನ ಶಕ್ತಿಯಿದ್ದು, ಇದರಿಂದ 72 ಶತಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಆದಾಗ್ಯೂ, ಈ ಸಂಖ್ಯೆಗಳು ಥರ್ಮಲ್ (1.18 ಟ್ರಿಲಿಯನ್  ಯೂನಿಟ್) ನಂತಹ ಸಾಂಪ್ರದಾಯಿಕ ಮೂಲದ ಘಟಕಗಳಿಗಿಂತ ಕಡಿಮೆಯಾಗಿದೆ. 

ಜಲವಿದ್ಯುತ್‌ ಉತ್ಪಾದನೆಯಲ್ಲಿ ಹಿಮಾಚಲ ಪ್ರದೇಶ ಒಟ್ಟಾರೇ 42.73 ಬಿಲಿಯನ್ ಯುನಿಟ್‌ ಅಥವಾ ದೇಶದಲ್ಲಿಯೇ ಜಲವಿದ್ಯುತ್ ಉತ್ಪಾದನೆಯಲ್ಲಿ ಶೇ.24 ರಷ್ಟು ಕೊಡುಗೆಯೊಂದಿಗೆ ಅಗ್ರಸ್ಥಾನದಲ್ಲಿದೆ. 16.8 ಶತಕೋಟಿ ಯೂನಿಟ್ ವಿದ್ಯುತ್ ಉತ್ಪಾದನೆಯೊಂದಿಗೆ ನೆರೆಯ ಜಮ್ಮು ಮತ್ತು ಕಾಶ್ಮೀರವು ನಂತರದ ಸ್ಥಾನದಲ್ಲಿದೆ.

ಸೌರಶಕ್ತಿಯಿಂದ ರಾಜಸ್ಥಾನ 34.47 ಶತಕೋಟಿ ಯೂನಿಟ್ ಉತ್ಪಾದನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ 14.15 ಶತಕೋಟಿ ಯೂನಿಟ್ ಉತ್ಪಾದನೆಯೊಂದಿಗೆ 2ನೇ ಸ್ಥಾನ ಮತ್ತು ತಮಿಳುನಾಡು 9.4 ಶತಕೋಟಿ ಯೂನಿಟ್ ವಿದ್ಯುತ್ ಉತ್ಪಾದನೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನೂ ಪವನ ಶಕ್ತಿ ಉತ್ಪಾದನೆಯಲ್ಲಿ ಗುಜರಾತ್ 19.2 ಶತಕೋಟಿ ಯೂನಿಟ್‌ ಉತ್ಪಾದನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ತಮಿಳುನಾಡು 17 ಶತಕೋಟಿ ಯೂನಿಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ನವೀಕರಿಸಬಹುದಾದ ಶಕ್ತಿಯ ಒಟ್ಟು ಸ್ಥಾಪಿತ  ಸಾಮರ್ಥ್ಯ:

ನವೀಕರಿಸಬಹುದಾದ ಶಕ್ತಿಯ ಒಟ್ಟು ಸ್ಥಾಪಿತ ಸಾಮರ್ಥ್ಯಕ್ಕೆ ಬಂದಾಗ ಈ ಮೇಲಿನ ಅಂಕಿಸಂಖ್ಯೆಗಳು ಸ್ವಲ್ಪ ಭಿನ್ನವಾಗಿರುತ್ತದೆ. ಸರ್ಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ರಾಜಸ್ಥಾನ 25.7 GW ಹಸಿರು ಶಕ್ತಿಯನ್ನು ಉತ್ಪಾದಿಸುವ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.ಗುಜರಾತ್ ಅನುಕ್ರಮವಾಗಿ 22.8 GW ಮತ್ತು ಕರ್ನಾಟಕವು 21.9 GW ಸಾಮರ್ಥ್ಯ ಹೊಂದಿದೆ.

ರಾಜಸ್ಥಾನ ಜಲವಿದ್ಯುತ್ ಹೊರತುಪಡಿಸಿ ಹಸಿರು ಇಂಧನ ಮೂಲಗಳಿಂದ 23.2 GW ಉತ್ಪಾದಿಸುವ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ. 38.7 ಮೆಗಾವ್ಯಾಟ್‌ನೊಂದಿಗೆ ಪಂಜಾಬ್ ಜಲವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯದಲ್ಲಿ ಮುಂಚೂಣಿಯಲ್ಲಿದ್ದರೂ, ಹಿಮಾಚಲ ಪ್ರದೇಶದ 32.49 ಮೆಗಾವ್ಯಾಟ್‌ ಜಲವಿದ್ಯುತ್  ಉತ್ಪಾದನೆಯೊಂದಿಗೆ ದೇಶದಲ್ಲಿ ಗರಿಷ್ಠ ಜಲವಿದ್ಯುತ್ ಉತ್ಪಾದಿಸುವಲ್ಲಿ ಪ್ರಮುಖ ಕೊಡುಗೆ ನೀಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com