Pepperfry ಸಹಸಂಸ್ಥಾಪಕ ಅಂಬರೀಷ್‌ ಮೂರ್ತಿ ಹೃದಯಾಘಾತದಿಂದ ಸಾವು!

ಆನ್‌ ಲೈನ್ ಪೀಠೋಪಕರಣ ಮಳಿಗೆ ಪೆಪ್ಪರ್‌ ಫ್ರೈ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ಸೋಮವಾರ ರಾತ್ರಿ ಲೇಹ್‌ ನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ಅಂಬರೀಷ್ ಮೂರ್ತಿ
ಅಂಬರೀಷ್ ಮೂರ್ತಿ

ನವದೆಹಲಿ: ಆನ್‌ ಲೈನ್ ಪೀಠೋಪಕರಣ ಮಳಿಗೆ ಪೆಪ್ಪರ್‌ ಫ್ರೈ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ಸೋಮವಾರ ರಾತ್ರಿ ಲೇಹ್‌ ನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.

ಲೇಹ್‌ನಲ್ಲಿ ಸೋಮವಾರ ರಾತ್ರಿ 49 ವರ್ಷದ ಅಂಬರೀಷ್‌ ಮೂರ್ತಿ ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ಕಂಪನಿಯ ಇನ್ನೊಬ್ಬ ಸಹಸಂಸ್ಥಾಪಕ ಅಶಿಶ್‌ ಶಾ ಮಂಗಳವಾರ ಬೆಳಗ್ಗೆ ಟ್ವಿಟರ್‌ ಪೋಸ್ಟ್‌ ಮೂಲಕ ಖಚಿತಪಡಿಸಿದ್ದಾರೆ.

ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರ, ಆತ್ಮದ ಗೆಳೆಯ ಅಂಬರೀಶ್ ಮೂರ್ತಿ ಅವರು ಇನ್ನಿಲ್ಲ ಎಂದು ತಿಳಿಸಲು ತುಂಬಾ ದುಃಖವಾಯಿತು. ನಿನ್ನೆ ರಾತ್ರಿ ಲೇಹ್‌ ನಲ್ಲಿ ಹೃದಯ ಸ್ತಂಭನದಿಂದ ಅವರು ನಿಧನ ಹೊಂದಿದ್ದಾರೆ ಎಂದಿದ್ದಾರೆ.

ಆಪ್ತ ಮೂಲಗಳ ಪ್ರಕಾರ, ಲಡಾಕ್‌ ಪ್ರವಾಸಕ್ಕೆ ತೆರಳಿದ್ದ ಅವರಿಗೆ ಲೇಹ್‌ನಲ್ಲಿ ಸೋಮವಾರ ರಾತ್ರಿ ಹೃದಯಾಘಾತವಾಗಿದೆ. 2012ರಲ್ಲಿ ಆಶೀಶ್‌ ಶಾ ಜೊತೆಗೂಡಿ ಮುಂಬೈನಲ್ಲಿ ಆನ್‌ಲೈನ್‌ ಫರ್ನಿಚರ್‌ ಸ್ಟೋರ್‌ ಹಾಗೂ ಹೋಮ್‌ ಡೆಕೋರ್‌ ಕಂಪನಿ ಪೆಪ್ಪರ್‌ ಫ್ರೈ ಸ್ಥಾಪನೆ ಮಾಡಿದ್ದರು. ಇಂದು ಇವರ ಕಂಪನಿ 500 ಮಿಲಿಯನ್‌ ಡಾಲರ್‌ ಮೌಲ್ಯದ ಬೃಹತ್‌ ಕಂಪನಿಯಾಗಿ ಬೆಳೆದಿದೆ.

ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಕಲ್ಕತ್ತಾದ ಮಾಜಿ ವಿದ್ಯಾರ್ಥಿಯಾಗಿದ್ದ ಅಂಬರೀಷ್‌ ಮೂರ್ತಿ, ಟ್ರಕ್ಕಿಂಗ್‌ ಉತ್ಸಾಹಿಯಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಈಗಾಗಲೇ ಅವರು ಎರಡು ಕ್ರಾಸ್‌ ಕಂಟ್ರಿ ಬೈಕಿಂಗ್‌ ಟ್ರಿಪ್‌ಗಳನ್ನೂ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com