• Tag results for dies

ಚಾಮರಾಜನಗರ: ವಿಷ ತೆಗೆಯುವ ಪವಾಡಕ್ಕೆ ಹೆಸರಾಗಿದ್ದ ದೇಗುಲದಲ್ಲೇ ಹಾವು ಕಚ್ಚಿ ಮಗು ಸಾವು!

ಹಾವಿನ ವಿಷ ತೆಗೆದು ಹಲವರನ್ನು ಬದುಕಿಸಿದ ಪವಾಡಕ್ಕೆ ಖ್ಯಾತಿಯಾಗಿದ್ದ ನಾಗಪ್ಪ ದೇಗುಲದಲ್ಲೇ ಹಾವು ಕಚ್ಚಿ ಮಗುವೊಂದು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ತೆಳ್ಳನೂರಿನಲ್ಲಿ ನಡೆದಿದೆ.

published on : 2nd June 2020

ಆಂಧ್ರ ಪ್ರದೇಶ: ಸಾನಿಟೈಸರ್ ಸೇವಿಸಿ ತಾಯಿ, ಮಗ ಸಾವು

ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ಸಾನಿಟೈಸರ್ ಕುಡಿದು 24 ವರ್ಷದ ಯುವಕ ಹಾಗೂ 52 ವರ್ಷದ ಆತನ ತಾಯಿ ಇಬ್ಬರು ಮೃತಪಟ್ಟಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.

published on : 1st June 2020

ಶ್ರಮಿಕ್ ರೈಲಿನಲ್ಲಿ ವಲಸೆ ಕಾರ್ಮಿಕ ಸಾವು: ಶವದೊಂದಿಗೆ ಬಂಗಾಳಕ್ಕೆ ಪ್ರಯಾಣಿಸಿದ ಸಹ ಪ್ರಯಾಣಿಕರು!

ರಾಜಸ್ಥಾನದಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ಶ್ರಮಿಕ್ ವಿಶೇಷ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದ  50 ವರ್ಷದ ವಲಸೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಆತನ ಶವದೊಂದಿಗೆ ಸುಮಾರು 8 ಗಂಟೆಗಳ ಕಾಲ ಪ್ರಯಾಣಿಸಿದ ಸಹ ಪ್ರಯಾಣಿಕರು ಇದೀಗ ಭೀತಿಗೊಂಡಿರುವುದಾಗಿ  ಪೊಲೀಸರು ಹೇಳಿದ್ದಾರೆ.

published on : 1st June 2020

ದೆಹಲಿ ಏಮ್ಸ್ ಆಸ್ಪತ್ರೆಯ ನೈರ್ಮಲ್ಯ ಮೇಲ್ವಿಚಾರಕ ಕೊರೋನಾ ವೈರಸ್ ಗೆ ಬಲಿ

ಅಖಿಲ ಭಾರತ ವೈದಕ್ಯೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯ 58 ವರ್ಷದ ನೈರ್ಮಲ್ಯ ಮೇಲ್ವಿಚಾರಕ ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

published on : 25th May 2020

ದೆಹಲಿ ಏಮ್ಸ್ ಆಸ್ಪತ್ರೆಯ ಮೆಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊರೋನಾದಿಂದ ಸಾವು

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯ ಮೆಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ರೆಸಿಡೆಂಟ್ ವೈದ್ಯರ ಸಂಘ(ಆರ್ ಡಿಎ) ತಿಳಿಸಿದೆ.

published on : 22nd May 2020

ಮೃತದೇಹಗಳಲ್ಲಿ ಕೊರೋನಾ ವೈರಸ್ ಎಷ್ಟು ದಿನಗಳ ಕಾಲ ಬದುಕಬಲ್ಲದು?: ಅಧ್ಯಯನ ನಡೆಸಲು ಏಮ್ಸ್ ವೈದ್ಯರ ಚಿಂತನೆ

ಇಡೀ ಮನುಕುಲಕ್ಕೆ ಕೊರೋನಾ ವೈರಸ್ ಮಾರಕವಾಗಿ ಪರಿಣಮಿಸಿದ್ದು, ಮಹಾಮಾರಿ ವೈರಸ್'ಗೆ ಈವರೆಗೂ ಯಾವುದೇ ಔಷಧಿಗಳೂ ಲಭ್ಯವಾಗಿಲ್ಲ. ಈ ನಡುವಲ್ಲೇ ಹೆಮ್ಮಾರಿ ವೈರಸ್ ಕೊರೋನಾ ವ್ಯಕ್ತಿಯ ಮೃತದೇಹದಲ್ಲಿ ಎಷ್ಟು ದಿನಗಳ ಕಾಲ ಬದುಕಬಲ್ಲದು ಎಂಬುದರ ಕುರಿತು ಅಧ್ಯಯನ ನಡೆಸಲು ಏಮ್ಸ್ ವೈದ್ಯರು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

published on : 22nd May 2020

ಪಾಕಿಸ್ತಾನದ ಮಹಿಳಾ ರಾಜಕಾರಣಿ ಕೊರೋನಾ ವೈರಸ್‌ಗೆ ಬಲಿ

ಪಾಕಿಸ್ತಾನದ ಆಡಳಿತಾರೂಢ ತಹ್ರೀಕ್‌ ಇ-ಇನ್ಸಾಫ್ (ಪಿಟಿಐ) ಪಕ್ಷದ ಮಹಿಳಾ ರಾಜಕಾರಣಿಯೊಬ್ಬರು ಬುಧವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

published on : 20th May 2020

ಸಿಪಿಎಲ್: ನನ್ನ ಹೇಳಿಕೆಗೆ ಬದ್ಧ ಆದರೆ, ಕ್ರಿಕೆಟ್ ಗೆ ಕೆಟ್ಟ ಹೆಸರು ಬರಬಾರದು; ಸರವಣ್ ಗೆ ಕ್ಷಮೆ ಯಾಚಿಸಿದ ಕ್ರಿಸ್ ಗೇಯ್ಲ್

ಮಾಜಿ ಕ್ರೆಕೆಟಿಗ ರಾಮ್ ನರೇಶ್ ಸರವಣ್ ರನ್ನು ಕೊರೋನಾ ಗಿಂತಲೂ ಅಪಾಯಕಾರಿ ಎಂದು ಕರೆದಿದ್ದ ವಿಂಡೀಸ್ ದೈತ್ಯ ಬ್ಯಾಟ್ಸ್ ಮನ್ ಇದೀಗ ಕ್ಷಮೆ ಯಾಚಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

published on : 16th May 2020

ತೆಲಂಗಾಣ: ಲಾಕ್ ಡೌನ್ ನಿಂದಾಗಿ 300 ಕಿ.ಮೀ ನಡೆದು ಸುಸ್ತಾಗಿದ್ದ ವಲಸೆ ಕಾರ್ಮಿಕ ಬಿಸಿಲಿನ ತಾಪದಿಂದ ಸಾವು

ಕೊವಿಡ್-19 ಲಾಕ್ ಡೌನ್ ಪರಿಣಾಮ 21 ವರ್ಷದ ವಲಸೆ ಕಾರ್ಮಿಕನೊಬ್ಬ ಒಡಿಶಾವನ್ನು ತಲುಪಲು ಮೂವರು ಸ್ನೇಹಿತರೊಂದಿಗೆ ಹೈದರಾಬಾದ್ ನಿಂದ 300 ಕಿ.ಮೀ ನಡೆದು, ಭದ್ರಾಚಲಂನಲ್ಲಿ ನಡೆದ ಬಿಸಿಲಿನ ತಾಪದಿಂದ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

published on : 13th May 2020

ಶ್ರಮಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 34 ವರ್ಷದ ವಲಸೆ ಕಾರ್ಮಿಕ ಸಾವು

ಪುಣೆಯಿಂದ ಪ್ರಯಾಗ್ ರಾಜ್ ಗೆ ಶ್ರಮಿಕ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 34 ವರ್ಷದ ವಲಸೆ ಕಾರ್ಮಿಕರೊಬ್ಬರು ಸೋಮವಾರ ಮೃತಪಟ್ಟಿದ್ದು, ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.

published on : 12th May 2020

ದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ: ಅನುಕ್ರಮವಾಗಿ ಪ್ರತಿ ಲೀಟರ್ ಗೆ 1.67, 7.10 ರೂಪಾಯಿ ಹೆಚ್ಚಳ

ದೆಹಲಿಯಲ್ಲಿ ಪೆಟ್ರೋಲ್, ಡಿಸೆಲ್ ದರ ಏರಿಕೆಯಾಗಿದ್ದು, ಪ್ರತಿ ಲೀಟರ್ ಗೆ 1.67, 7.10 ರೂಪಾಯಿ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಲ್ಲಿನ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಸ್ಥಳೀಯ ಮಾರಾಟ ತೆರಿಗೆಯನ್ನು ಏರಿಕೆ ಮಾಡಲಾಗಿದೆ. 

published on : 5th May 2020

ಲೋಕಪಾಲ್ ಸದಸ್ಯ ಅಜಯ್ ಕೆ ತ್ರಿಪಾಠಿ ಕೊರೋನಾಗೆ ಬಲಿ

ದೇಶದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಶನಿವಾರ ಲೋಕಪಾಲ್ ಸದಸ್ಯ, ನಿವೃತ್ತ ನ್ಯಾಯಮೂರ್ತಿ ಅಜಯ್ ಕುಮಾರ್ ತ್ರಿಪಾಠಿ ಅವರು ಕೊವಿಡ್-19ಗೆ ಬಲಿಯಾಗಿದ್ದಾರೆ.

published on : 3rd May 2020

ಸರವಣ್ ವಿಷ ಸರ್ಪ: ಗೇಯ್ಲ್ ಆರೋಪಕ್ಕೆ ಮೌನ ಮುರಿದ ರಾಮ್ ನರೇಶ್ ಸರವಣ್

ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಮಾಡಿದ್ದ ಆರೋಪಗಳ ಕುರಿತು ಕೊನೆಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಮ್ ನರೇಶ್ ಸರವಣ್ ಮೌನ ಮುರಿದಿದ್ದಾರೆ.

published on : 1st May 2020

ನೀನು ಕೊರೊನಾ ವೈರಸ್‌ಗಿಂತಲೂ ಅಪಾಯಕಾರಿ: ಸರವಣ್ ವಿರುದ್ಧ ಕ್ರಿಸ್ ಗೇಲ್ ಟೀಕೆ

ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಾಮ್‌ನರೇಶ್ ಸರವಣ್‌ ವಿರುದ್ಧ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಹಿಗ್ಗಾಮಗ್ಗ ಜರಿದಿದ್ದಾರೆ.

published on : 28th April 2020

ಬಾಲಿವುಡ್ ನಟ ಇರ್ಫಾನ್ ಖಾನ್ ತಾಯಿ ನಿಧನ, ವಿಡಿಯೋ ಕಾನ್ಫೆರೆನ್ಸ್ ಮೂಲಕ ಅಂತಿಮ ದರ್ಶನ

ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ(95) ಅವರು ಶನಿವಾರ ಜೈಪುರದಲ್ಲಿ ನಿಧನರಾಗಿದ್ದಾರೆ. ಆದರೆ ಲಾಕ್ ಡೌನ್ ನಿಂದಾಗಿ ಮುಂಬೈನಲ್ಲಿರುವ ಪುತ್ರ ಇರ್ಫಾನ್ ಖಾನ್ ಅವರು ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಆಗದೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಅಂತಿಮ ದರ್ಶನ ಪಡೆದಿದ್ದಾರೆ.

published on : 26th April 2020
1 2 3 4 5 6 >