ಜಿಎಸ್ ಟಿ ದರ ಏರಿಕೆ: 350 ಮಂದಿ ನೌಕರಿಗೆ ಗೇಮಿಂಗ್ ಸೈಟ್ ಎಂಪಿಎಲ್ ಕತ್ತರಿ!

ಆನ್ ಲೈನ್ ಕ್ರೀಡಾ ವೇದಿಕೆಯಾಗಿದ್ದ ಮೊಬೈಲ್ ಪ್ರೀಮಿಯರ್ ಲೀಗ್ ತನ್ನ ಸಿಬ್ಬಂದಿಗಳ ಪೈಕಿ 350 ಮಂದಿ ಉದ್ಯೋಗಕ್ಕೆ ಕತ್ತರಿ ಹಾಕಿದೆ.
ಎಂಪಿಎಲ್
ಎಂಪಿಎಲ್

ನವದೆಹಲಿ: ಆನ್ ಲೈನ್ ಕ್ರೀಡಾ ವೇದಿಕೆಯಾಗಿದ್ದ ಮೊಬೈಲ್ ಪ್ರೀಮಿಯರ್ ಲೀಗ್ ತನ್ನ ಸಿಬ್ಬಂದಿಗಳ ಪೈಕಿ 350 ಮಂದಿ ಉದ್ಯೋಗಕ್ಕೆ ಕತ್ತರಿ ಹಾಕಿದೆ.

ಖರ್ಚು ಕಡಿಮೆ ಮಾಡುವುದಕ್ಕೆ ಹಾಗೂ ಜಿಎಸ್ ಟಿ ಶೇ.28 ರಷ್ಟು ಹೆಚ್ಚಾದ ಪರಿಣಾಮ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಆಂತರಿಕ ಮೇಲ್ ಮೂಲಕ ತಿಳಿದುಬಂದಿದೆ. 

ಜಿಎಸ್ ಟಿ ಕೌನ್ಸಿಲ್ ಆನ್ ಲೈನ್ ಗೇಮಿಂಗ್ ಹಾಗೂ ಕ್ಯಾಸಿನೊಗಳ  ಮೇಲೆ ಶೇ.28 ರಷ್ಟು ಜಿಎಸ್ ಟಿಯನ್ನು ವಿಧಿಸಿದೆ. ಅಕ್ಟೋಬರ್ 1 ರಿಂದ ನಿಯಮಗಳನ್ನು ಜಾರಿಗೊಳಿಸಲು, ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸೆಂಟ್ರಲ್ ಜಿಎಸ್ ಟಿ ಕಾನೂನಿಗೆ ತಿದ್ದುಪಡಿ ತರಲಿದೆ.

ಗೇಮಿಂಗ್ ನ ನಿವ್ವಳ ಲಾಭದ ಬದಲಾಗಿ ಪೂರ್ಣ ಡೆಪಾಸಿಟ್ ಮೌಲ್ಯದ ಮೇಲೆ ಶೇ.28 ರಷ್ಟು ಜಿಎಸ್ ಟಿ ವಿಧಿಸುವುದು ಕಳೆದವಾರವಷ್ಟೇ ದೃಢಪಟ್ಟಿತ್ತು ಎಂದು ಎಂಪಿಎಲ್ ಸಹ ಸಂಸ್ಥಾಪಕ ಸಾಯಿ ಶ್ರೀನಿವಾಸ್ ಉದ್ಯೋಗಿಗಳಿಗೆ ಕಳಿಸಿರುವ ಮೇಲ್ ನಲ್ಲಿ ತಿಳಿಸಿದ್ದಾರೆ. 

ಹೊಸ ನಿಯಮದಿಂದಾಗಿ ನಮ್ಮ ತೆರಿಗೆ ಭಾರ ಶೇ.350-400 ರಷ್ಟು ಏರಿಕೆಯಾಗಲಿದೆ. ಒಂದು ಉದ್ಯಮವಾಗಿ ಶೇ.50-100 ರಷ್ಟು ಏರಿಕೆಯಾಗಿದ್ದರೆ ತಡೆದುಕೊಳ್ಳಬಹುದಾಗಿತ್ತು. ಆದರೆ ಈ ಪರಿಪ್ರಮಾಣದಲ್ಲಿ ದಿಢೀರ್ ಏರಿಕೆಯಾದರೆ, ನಾವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com