ನಿವೃತ್ತ ಜನರಿಗೆ ಹೂಡಿಕೆ ಆಯ್ಕೆಗಳು ಏನು? ಇಲ್ಲಿದೆ ಮಾಹಿತಿ...

ಇಂದಿನ ದಿನಗಳಲ್ಲಿ ನಿವೃತ್ತಿಯ ವಾಖ್ಯೆ ಬದಲಾಗಿದೆ. ಕೆಲವರು ಸ್ವ ಇಚ್ಛೆಯಿಂದ ನಿವೃತ್ತರಾಗುತ್ತಿದ್ದಾರೆ. ಹೀಗೆ ನಿವೃತ್ತಿ ಹೊಂದಿದ ಮಂದಿಗೆ ಉತ್ತಮ ಹೂಡಿಕೆಗಳಾವುವು ಎಂಬ ಬಗ್ಗೆ ಗೊಂದಲಗಳಿರುವುದು ಸಹಜ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಇಂದಿನ ದಿನಗಳಲ್ಲಿ ನಿವೃತ್ತಿಯ ವಾಖ್ಯೆ ಬದಲಾಗಿದೆ. ಕೆಲವರು ಸ್ವ ಇಚ್ಛೆಯಿಂದ ನಿವೃತ್ತರಾಗುತ್ತಿದ್ದಾರೆ. ಹೀಗೆ ನಿವೃತ್ತಿ ಹೊಂದಿದ ಮಂದಿಗೆ ಉತ್ತಮ ಹೂಡಿಕೆಗಳಾವುವು ಎಂಬ ಬಗ್ಗೆ ಗೊಂದಲಗಳಿರುವುದು ಸಹಜ. 

ನಿವೃತ್ತಿ ಹೊಂದಿರುವ ಮಂದಿಗೆ ಹೂಡಿಕೆಯ ಆಯ್ಕೆಗಳು ಯಾವುವು? ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.. 

  • ಸರ್ಕಾರದ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್): ನಿವೃತ್ತಿ ನಂತರದ ಯೋಜನೆಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಈ ವಿಭಾಗದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಎನ್ ಪಿಎಸ್ ನಲ್ಲಿ ಇನ್ನೂ ಕೆಲವು ಬದಲಾವಣೆಗಳಾಗಬಹುದಾಗಿದೆ. ಹೆಚ್ಚುವರಿ ತೆರಿಗೆ ವಿನಾಯಿತಿ ಒದಗಿಸುವುದಕ್ಕೆ ಮಿತಿ ವಿಧಿಸಲಾಗಿದೆ.    
  • ಮ್ಯೂಚ್ಯುಯಲ್ ಫಂಡ್ಸ್ ಸಹ ನಿವೃತ್ತಿ ನಂತರದ ಹೂಡಿಕೆ ಯೋಜನೆಗೆ ಉತ್ತಮವಾದ ಆಯ್ಕೆಯಾಗಿದ್ದು, ಹೈಬ್ರಿಡ್ ಅಗ್ರೆಸಿವ್ ನಿವೃತ್ತಿ ಫಂಡ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಫಂಡ್‌ಗಳು ಯಾವುದು ಬೇಗ ಬರಲಿದೆ ಅದರ ಆಧಾರದಲ್ಲಿ 5 ವರ್ಷಗಳು ಅಥವಾ 58 ವಯಸ್ಸಿನ ಲಾಕ್-ಇನ್ ಅವಧಿಯನ್ನು ಹೊಂದಿರುತ್ತವೆ. ನಾವೀಗ ಈ ವರ್ಗದಿಂದ ಕೆಲವು ಫಂಡ್ ಗಳತ್ತ ಗಮನ ಹರಿಸೋಣ.
  • ಹೆಚ್ ಡಿಎಫ್ ಸಿ ನಿವೃತ್ತಿ ಉಳಿತಾಯ ಫಂಡ್ ಹೈಬ್ರಿಡ್ ಈಕ್ವಿಟಿ ಯೋಜನೆ 1,140 ಕೋಟಿ ರೂಪಾಯಿ ಎಯುಎಂ (assets under management) ನ್ನು ಹೊಂದಿದೆ. ಈಕ್ವಿಟಿಯಲ್ಲಿ ಪ್ರಸ್ತುತ ಆಸ್ತಿ ಹಂಚಿಕೆ ಶೇ.71 ರಷ್ಟಿದ್ದು, ಸಾಲದಲ್ಲಿ ಶೇ.17 ರಷ್ಟು ಹಾಗೂ ನಗದು ಹಾಗೂ ಅದಕ್ಕೆ ಸಮವಾದ ಮೌಲ್ಯದ ರೂಪದಲ್ಲಿ ಶೇ.12ರಷ್ಟಿದೆ. ಈಕ್ವಿಟಿ ಹೂಡಿಕೆಗಳು ಬ್ಯಾಂಕ್ ಮತ್ತು ಬಂಡವಾಳ ಸರಕುಗಳಂತಹ ವಲಯಗಳಲ್ಲಿ ಹರಡಿವೆ. ಸಾಲದ ಹೂಡಿಕೆಗಳು ಸರ್ಕಾರಿ ಭದ್ರತೆಗಳು ಮತ್ತು ಕಾರ್ಪೊರೇಟ್ ಭದ್ರತೆಗಳಲ್ಲಿವೆ. ಈ ಮ್ಯುಚ್ಯುಯಲ್ ಫಂಡ್ ಮೂರು ವರ್ಷಗಳ ನಂತರ ಶೇ.20 ರಷ್ಟು ಹಾಗೂ 5 ವರ್ಶಗಳ ಬಳಿಕ ಶೇ.16 ರಷ್ಟು ಆದಾಯವನ್ನು ದಾಖಲಿಸಿದೆ.
  • ಐಸಿಐಸಿಐ ಪ್ರುಡೆನ್ಶಿಯಲ್ ರಿಟೈರ್‌ಮೆಂಟ್ ಫಂಡ್ ಹೈಬ್ರಿಡ್ ಅಗ್ರೆಸೀವ್ ಯೋಜನೆ ರೂ.218 ಕೋಟಿ AUM ನ್ನು ಹೊಂದಿದೆ. ಈಕ್ವಿಟಿಯಲ್ಲಿನ ಶೇ.84 ರಷ್ಟು ಅಸೆಟ್ ಹಂಚಿಕೆಯಲ್ಲಿದ್ದರೆ, ಶೇ.16 ರಷ್ಟು ಸಾಲದಲ್ಲಿದೆ. ಈಕ್ವಿಟಿ ಹೂಡಿಕೆಗಳು ಪ್ರಾಥಮಿಕವಾಗಿ ಲೋಹ ಮತ್ತು ಆಟೋಮೊಬೈಲ್ಸ್ ಉದ್ಯಮದಲ್ಲಿವೆ. ಸಾಲ ಹಂಚಿಕೆಯು ಸರ್ಕಾರಿ ಭದ್ರತೆಗಳು, ಕಾರ್ಪೊರೇಟ್ ಭದ್ರತೆಗಳು ಮತ್ತು ಠೇವಣಿಗಳನ್ನು ಒಳಗೊಂಡಿರುತ್ತದೆ. ಈ ಫಂಡ್ಸ್ ಮೂರು ವರ್ಷಗಳಲ್ಲಿ 19.4% ಆದಾಯವನ್ನು ದಾಖಲಿಸಿದೆ.
  • ನಿಪ್ಪಾನ್ ಇಂಡಿಯಾ ರಿಟೈರ್ಮೆಂಟ್ ಫಂಡ್ ವೆಲ್ತ್ ಕ್ರಿಯೇಶನ್ ಸ್ಕೀಮ್ ರೂ. 2,554 ಕೋಟಿ AUM ಅನ್ನು ಹೊಂದಿದೆ. ಇದರ ಪ್ರಸ್ತುತ ಆಸ್ತಿ ಹಂಚಿಕೆ ಈಕ್ವಿಟಿಯಲ್ಲಿ 98% ಮತ್ತು ನಗದು ಮತ್ತು ನಗದು ಸಮಾನ ಮೌಲ್ಯದಲ್ಲಿ 2% ರಷ್ಟಿದೆ. ಈಕ್ವಿಟಿ ಭಾಗವು ಪ್ರಾಥಮಿಕವಾಗಿ ಬ್ಯಾಂಕ್‌ಗಳು ಮತ್ತು ಸಾಫ್ಟ್‌ವೇರ್‌ನಲ್ಲಿ ಹೂಡಿಕೆಗಳನ್ನು ಒಳಗೊಂಡಿದೆ. ಈ ಫಂಡ್ ಮೂರು ವರ್ಷಗಳಲ್ಲಿ 20.5% ಮತ್ತು ಐದು ವರ್ಷಗಳಲ್ಲಿ 11.5% ನಷ್ಟು ಆದಾಯವನ್ನು ದಾಖಲಿಸಿದೆ.
  • ರಿವರ್ಸ್ ಮಾರ್ಟ್ ಗೇಜ್ ನಿವೃತ್ತಿ ಹೊಂದುವವರಿಗೆ ಮತ್ತೊಂದು ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿದೆ. ಮನೆ ಅಥವಾ ಆಸ್ತಿಯ ಮಾಲೀಕತ್ವ ಇರುವ ಹಿರಿಯ ನಾಗರಿಕರಿಗೆ ಬ್ಯಾಂಕುಗಳು ನೀಡುವ ಒಂದು ಆಯ್ಕೆ. ಇದು ಗೃಹಸಾಲದ ರೀತಿಯದ್ದೇ ಆಗಿದ್ದರೂ ಇಲ್ಲಿ ನಿವೃತ್ತಿಯಾಗಿರುವವರು ಬ್ಯಾಂಕ್ ನಿಂದ ಪಡೆದ ಹಣವನ್ನು ವಾಪಸ್ ಕಟ್ಟಲೇಬೇಕಿಲ್ಲ. ರಿವರ್ಸ್ ಮಾರ್ಟ್ ಗೇಜ್ ನಲ್ಲಿ ಒಬ್ಬ ವ್ಯಕ್ತಿಯ ಆಸ್ತಿ ಪತ್ರವನ್ನು ಅಡಮಾನ ಇಡಿಸಿಕೊಳ್ಳುವ ಬ್ಯಾಂಕ್, ಆ ವ್ಯಕ್ತಿಗೆ ಒಮ್ಮೆಲೇ ಹಣವನ್ನು ನೀಡದೇ ತಿಂಗಳಿಗೆ ನಿಗದಿತ ಮೊತ್ತವನ್ನು ನೀಡುತ್ತದೆ. ಮನೆಯ ಮಾಲಿಕ ಹಾಗೂ ಆತ/ ಆಕೆಯ ಸಂಗಾತಿಯ ಜೀವಿತ ಅವಧಿಯವರೆಗೂ ಅಡಮಾನ ಇಟ್ಟಿರುವ ಆಸ್ತಿ ಅವರದ್ದೇ ಆಗಿರುತ್ತದೆ. ಅವರ ಜೀವಿತಾವಧಿ ಮುಕ್ತಾಯಗೊಂಡ ಬಳಿಕ ಅವರ ಉತ್ತರಾಧಿಕಾರಿಗಳು ಬ್ಯಾಂಕ್ ನೀಡಿದ್ದ ಮೊತ್ತವನ್ನು ಬಡ್ಡಿ ಸಮೇತ ತೀರಿಸಿದರೆ ಆಸ್ತಿಯ ಮಾಲಿಕತ್ವವನ್ನು ಮರಳಿ ಪಡೆಯಬಹುದಾಗಿದೆ. ಇಲ್ಲದಿದ್ದರೆ ಬ್ಯಾಂಕು ನಿಮ್ಮ ಮನೆಯನ್ನು ಹರಾಜಿಗೆ ಹಾಕಿ ಅದರಿಂದ ಬಂದ ಹಣದಲ್ಲಿ ತನ್ನ ಸಾಲದ ಮೊತ್ತವನ್ನು ವಾಪಸ್ ಪಡೆಯಲಿದೆ. 
  • ತಮ್ಮ ನಲವತ್ತರ ಕೊನೆಯಲ್ಲಿ ಹೂಡಿಕೆ ಮಾಡಿ ಲಾಕ್ ಇನ್ ಅವಧಿಯು ಸಾಮಾನ್ಯವಾಗಿ 5 ವರ್ಷಗಳಾಗಿದ್ದರೂ ಸಹ, ಹಣ ಮೆಚ್ಯೂರ್ ಆಗಲು ಕನಿಷ್ಠ 12 ವರ್ಷಗಳು ಬಿಡುವ ಯುನಿಟ್ ಲಿಂಕ್ಡ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ (ಯುಲಿಪ್) ಹೂಡಿಕೆ ಮತ್ತೊಂದು ಜನಪ್ರಿಯ ಆಯ್ಕೆಯಾಗಿದೆ. ನಿಮ್ಮ ಹಣಕಾಸು ಸಲಹೆಗಾರರು ಸಾಲ ಮತ್ತು ಈಕ್ವಿಟಿಯ ನಡುವಿನ ಸಮತೋಲನ ಕ್ರಿಯೆಯನ್ನು ಚಾಣಾಕ್ಷತೆಯಿಂದ ನಿರ್ವಹಿಸಿದರೆ ಇದು ಉತ್ತಮ ನಿವೃತ್ತಿ ಆಯ್ಕೆಯಾಗಿ ಉಳಿಯುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com