ಜಿಎಸ್ ಟಿ ಆದಾಯ ಶೇ.15 ರಷ್ಟು ಹೆಚ್ಚಳ, ಡಿಸೆಂಬರ್ ನಲ್ಲಿ 1.49 ಲಕ್ಷ ಕೋಟಿ ರೂ. ಸಂಗ್ರಹ

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಿದ್ದು, 1.49 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ.
ಜಿಎಸ್ ಟಿ ಸಾಂದರ್ಭಿಕ ಚಿತ್ರ
ಜಿಎಸ್ ಟಿ ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಿದ್ದು, 1.49 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ.

ತೆರಿಗೆ ಸಂಗ್ರಹ ಹೆಚ್ಚಳ ಪ್ರವೃತ್ತಿ ಮುಂದುವರೆದಿದ್ದು, ಸತತ 10ನೇ ತಿಂಗಳು ಜಿಎಸ್ ಟಿ ಸಂಗ್ರಹ 1.40 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ.

ಕಳೆದ ಡಿಸೆಂಬರ್ ನಲ್ಲಿ ಒಟ್ಟು 1,49,507 ಕೋಟಿ ರೂ ಜಿಎಸ್ ಟಿ ಸಂಗ್ರಹವಾಗಿದ್ದು, ಈ ಪೈಕಿ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) 26,711 ಕೋಟಿ, ರಾಜ್ಯ ಜಿಎಸ್‌ಟಿ ಅಡಿಯಲ್ಲಿ 33,357 ಕೋಟಿ ರೂ. ಮತ್ತು ಇಂಟಿಗ್ರೇಟೆಡ್ ಜಿಎಸ್‌ಟಿ ಅಡಿಯಲ್ಲಿ 78,434 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಡಿಸೆಂಬರ್ 2022 ರಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್​​ಟಿ ಆದಾಯ ಕಳೆದ ವರ್ಷದ ಡಿಸೆಂಬರ್ ಗಿಂತ ಶೇ. 11 ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಈ ಹಿಂದೆ ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 1.68 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು. ಅದು ಬಿಟ್ಟರೆ ಕಳೆದ ಅಕ್ಟೋಬರ್​ನಲ್ಲಿ ಆಗಿರುವ 1.51 ಲಕ್ಷ ಕೋಟಿ ರೂ. ಸಂಗ್ರಹ ಎರಡನೇ ಅತಿಹೆಚ್ಚಿನ ಸಂಗ್ರಹವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com