ಮೊದಲ ಬಾರಿ 64,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಸಾರ್ವಕಾಲಿಕ ದಾಖಲೆ

ಭಾರತೀಯ ಷೇರು ಮಾರುಕಟ್ಟೆ ಬುಧವಾರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ದಾಖಲೆಯ 64,000 ಅಂಕಗಳ ಗಡಿ ದಾಟಿದೆ ಮತ್ತುನಿಫ್ಟಿ 19,000 ಮಟ್ಟವನ್ನು ದಾಟಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಬುಧವಾರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ದಾಖಲೆಯ 64,000 ಅಂಕಗಳ ಗಡಿ ದಾಟಿದೆ ಮತ್ತುನಿಫ್ಟಿ 19,000 ಮಟ್ಟವನ್ನು ದಾಟಿದೆ. 

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ಮಾರುಕಟ್ಟೆಯ ದೈತ್ಯ ಷೇರುಗಳಲ್ಲಿ ಕಂಡು ಬಂದ ಖರೀದಿಯ ಆಸಕ್ತಿ ಕೂಡ ಈ ದಾಖಲೆಗೆ ನೆರವಾಯಿತು.

ಹಿಂದಿನ ದಿನದ ಆವೇಗವನ್ನು ವಿಸ್ತರಿಸಿದ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 621.07 ಅಂಕ ಜಿಗಿದು ಮಧ್ಯಾಹ್ನದ ವಹಿವಾಟಿನ ಸಮಯದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ 64,037.10 ಅನ್ನು ತಲುಪಿತ್ತು. ಎನ್‌ಎಸ್‌ಇ ನಿಫ್ಟಿ 50ಯು 193.85 ಅಂಕಗಳ ಏರಿಕೆಯೊಂದಿಗೆ ತನ್ನ ಜೀವಿತಾವಧಿಯ ಗರಿಷ್ಠ ಮಟ್ಟ 19,011.25 ಅನ್ನು ಮುಟ್ಟಿತ್ತು.

ಇಂದು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ(ಬಿಎಸ್​ಇ) ಒಂದೇ ದಿನ 1.84 ಲಕ್ಷ ಕೋಟಿ ರೂ. ನಷ್ಟು ಬಂಡವಾಳ ಸಂಗ್ರಹ ಹೆಚ್ಚಾಗಿದೆ. ಇದರೊಂದಿಗೆ ಬಿಎಸ್​ಇ ಮಾರ್ಕೆಟ್ ಕ್ಯಾಪ್(ಮಾರುಕಟ್ಟೆ ಬಂಡವಾಳ) 293.97 ಲಕ್ಷಕೋಟಿ ರೂ. ಆಗಿದೆ.

ಟಾಟಾ ಮೋಟಾರ್ಸ್, ಸನ್ ಫಾರ್ಮಾ, ಟೈಟಾನ್, ಲಾರ್ಸೆನ್ ಮತ್ತು ಟೂಬ್ರೊ, ಇಂಡಸ್‌ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎನ್‌ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಮಾರುತಿ ಷೇರುಗಳು ಹೆಚ್ಚು ಲಾಭ ಗಳಿಸಿವೆ. ಅಲ್ಲದೆ ಅದಾನಿ ಗ್ರೂಪ್​ನ ಬಹುತೇಕ ಷೇರುಗಳು ಸಹ ಬೆಲೆ ಹೆಚ್ಚಿಸಿಕೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com