ಪೈಲಟ್‌ಗಳ ಸಂಬಳವನ್ನು ತಿಂಗಳಿಗೆ ₹7.5 ಲಕ್ಷಕ್ಕೆ ಹೆಚ್ಚಿಸಿದ ಸ್ಪೈಸ್‌ಜೆಟ್

ಸ್ಪೈಸ್‌ಜೆಟ್ ಮಂಗಳವಾರ ತನ್ನ ಕ್ಯಾಪ್ಟನ್‌ಗಳ ವೇತನವನ್ನು 75 ಗಂಟೆಗಳ ಹಾರಾಟಕ್ಕೆ ತಿಂಗಳಿಗೆ ₹ 7.5 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ನವದೆಹಲಿ: ಸ್ಪೈಸ್‌ಜೆಟ್ ಮಂಗಳವಾರ ತನ್ನ ಕ್ಯಾಪ್ಟನ್‌ಗಳ ವೇತನವನ್ನು 75 ಗಂಟೆಗಳ ಹಾರಾಟಕ್ಕೆ ತಿಂಗಳಿಗೆ ₹ 7.5 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ.

ತನ್ನ 18ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಗುರುಗ್ರಾಮ ಮೂಲದ ವಿಮಾನಯಾನ ಸಂಸ್ಥೆಯು ಈ ಹೆಚ್ಚಳವು 2023ರ ಮೇ 16 ರಿಂದ ಅನ್ವಯವಾಗಲಿದೆ ಎಂದು ಹೇಳಿದೆ.

ಈಮಧ್ಯೆ, ತರಬೇತುದಾರರು (ಡಿಇ, ಟಿಆರ್‌ಐ) ಮತ್ತು ಮೊದಲ ಹಂತದ ಅಧಿಕಾರಿಗಳ ವೇತನವನ್ನು ಸಹ ಅನುಗುಣವಾಗಿ ಹೆಚ್ಚಿಸಲಾಗಿದೆ.

ಈ ಹಿಂದೆ ನವೆಂಬರ್‌ನಲ್ಲಿ ವಿಮಾನಯಾನ ಸಂಸ್ಥೆಯು ತನ್ನ ಪೈಲಟ್‌ಗಳಿಗೆ ವೇತನವನ್ನು ಪರಿಷ್ಕರಿಸಿತ್ತು. ಇದರಲ್ಲಿ ಕ್ಯಾಪ್ಟನ್‌ಗಳ ವೇತನವನ್ನು 80 ಗಂಟೆಗಳ ಹಾರಾಟಕ್ಕಾಗಿ ತಿಂಗಳಿಗೆ ₹7 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

ಹೆಚ್ಚುವರಿಯಾಗಿ, ಏರ್‌ಲೈನ್ ತನ್ನ ಕ್ಯಾಪ್ಟನ್‌ಗಳಿಗೆ ತಿಂಗಳಿಗೆ ₹ 1,00,000 ವರೆಗಿನ ಅವಧಿ ಸಂಬಂಧಿತ ಮಾಸಿಕ ಲಾಯಲ್ಟಿ ಬಹುಮಾನವನ್ನು ಘೋಷಿಸಿದ್ದು, ಅದು ಅವರ ಮಾಸಿಕ ಸಂಭಾವನೆಗಿಂತ ಹೆಚ್ಚಾಗಿರುತ್ತದೆ.

ಇಸಿಎಲ್‌ಜಿಎಸ್ ಯೋಜನೆಯಿಂದ ಮತ್ತು ಅದರ ಆಂತರಿಕ ನಗದು ಸಂಚಯದಿಂದ ಪಡೆದ 50 ಮಿಲಿಯನ್ ಡಾಲರ್ ನಿಧಿಯಿಂದ ಸ್ಪೈಸ್‌ಜೆಟ್ ತನ್ನ ಗ್ರೌಂಡ್ಡ್ ವಿಮಾನಗಳನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಅಧ್ಯಕ್ಷ ಅಜಯ್ ಸಿಂಗ್ ಈ ಹಿಂದೆ ಉದ್ಯೋಗಿಗಳಿಗೆ ತಿಳಿಸಿದ್ದರು.

ಮುಂಬರುವ ಹೆಚ್ಚು ಉತ್ತೇಜಕ ವರ್ಷಗಳನ್ನು ಎದುರು ನೋಡುತ್ತಿರುವುದರಿಂದ ಅತ್ಯುನ್ನತ ಗುಣಮಟ್ಟದ ಸೇವೆಗಳನ್ನು ಕಾಯ್ದುಕೊಳ್ಳಲು ಬದ್ಧರಾಗಿರಲು ಸಿಂಗ್ ಅವರು ಉದ್ಯೋಗಿಗಳಿಗೆ ತಿಳಿಸಿದರು.

ಸ್ಪೈಸ್‌ಜೆಟ್ ಭಾರತದೊಳಗಿನ ಮತ್ತು ಅಂತರರಾಷ್ಟ್ರೀಯ 48 ಸ್ಥಳಗಳಿಗೆ ಸುಮಾರು 250 ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತದೆ. ಇದರ ಫ್ಲೀಟ್ ಬೋಯಿಂಗ್ 737 ಮ್ಯಾಕ್ಸ್, ಬೋಯಿಂಗ್ 700 ಮತ್ತು ಕ್ಯೂ400 ಸೇರಿದಂತೆ ವಿಮಾನಗಳನ್ನು ಕಾರ್ಯಾಚರಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com