Sam Altman ಗೆ ಬೆಂಬಲ: ಆಡಳಿತ ಮಂಡಳಿ ವಿರುದ್ಧವೇ ತಿರುಗಿಬಿದ್ದ ChatGPT ಮಾತೃಸಂಸ್ಥೆ OpenAI ಸಿಬ್ಬಂದಿ!

ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯ (ChatGPT) ಮಾತೃಸಂಸ್ಥೆ ಓಪನ್‌ಎಐ (OpenAI) ಸಿಇಒ ಸ್ಥಾನದಿಂದ ವಜಾಗೊಂಡ ಸ್ಯಾಮ್‌ ಆಲ್ಟ್‌ಮನ್‌ (Sam Altman)ಗೆ ಭಾರಿ ಬೆಂಬಲ ವ್ಯಕ್ತಪಡಿಸಿರುವ OpenAI ಸಿಬ್ಬಂದಿಗಳು ಇದೀಗ ಆಡಳಿತ ಮಂಡಳಿ ವಿರುದ್ಧವೇ ತಿರುಗಿಬಿದಿದ್ದಾರೆ.
ChatGPT ಮಾತೃಸಂಸ್ಥೆ OpenAI
ChatGPT ಮಾತೃಸಂಸ್ಥೆ OpenAI

ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯ (ChatGPT) ಮಾತೃಸಂಸ್ಥೆ ಓಪನ್‌ಎಐ (OpenAI) ಸಿಇಒ ಸ್ಥಾನದಿಂದ ವಜಾಗೊಂಡ ಸ್ಯಾಮ್‌ ಆಲ್ಟ್‌ಮನ್‌ (Sam Altman)ಗೆ ಭಾರಿ ಬೆಂಬಲ ವ್ಯಕ್ತಪಡಿಸಿರುವ OpenAI ಸಿಬ್ಬಂದಿಗಳು ಇದೀಗ ಆಡಳಿತ ಮಂಡಳಿ ವಿರುದ್ಧವೇ ತಿರುಗಿಬಿದಿದ್ದಾರೆ.

ಹೌದು.. ಸ್ಯಾಮ್‌ ಆಲ್ಟ್‌ಮನ್‌ (Sam Altman) ವಜಾ ಬೆನ್ನಲ್ಲೇ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯ (ChatGPT) ಮಾತೃಸಂಸ್ಥೆ ಓಪನ್‌ಎಐ (OpenAI)  ಆಡಳಿತ ಮಂಡಳಿ ವಿರುದ್ಧ ಅಲ್ಲಿನ ಸಿಬ್ಬಂದಿ ತಿರುಗಿಬಿದ್ದಿದ್ದು, ಸಾಮೂಹಿಕವಾಗಿ ಸಂಸ್ಥೆಯನ್ನು ತೊರೆಯುವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿಗೆ ಪತ್ರ ಬರೆದಿರುವ ಸಿಬ್ಬಂದಿ, ಆಡಳಿತ ಮಂಡಳಿ (Mangement Board) ರಾಜೀನಾಮೆ ನೀಡದಿದ್ದಲ್ಲೇ ಸಾಮೂಹಿಕ ರಾಜೀನಾಮೆ ನೀಡುತ್ತೇವೆ. ಅಲ್ಲದೆ ಸ್ಯಾಮ್ ಆಲ್ಟ್‌ಮ್ಯಾನ್ ಜತೆ ಕೈಜೋಡಿಸುವುದಾಗಿ ಸಿಬ್ಬಂದಿಯು ಮ್ಯಾನೇಜ್ಮೆಂಟ್‌ಗೆ ಹೇಳಿದ್ದಾರೆ. 

ಮುಖ್ಯ ತಂತ್ರಜ್ಞಾನ ಅಧಿಕಾರಿ ಮೀರಾ ಮುರಾತಿ, ಮುಖ್ಯ ದತ್ತಾಂಶ ವಿಜ್ಞಾನಿ ಇಲ್ಯಾ ಸುಟ್‌ಸ್ಕೇವರ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬ್ರಾಡ್ ಲೈಟ್‌ಕ್ಯಾಪ್ ಹೊರತುಪಡಿಸಿ, ಸುಮಾರು 500 ಓಪನ್‌ಎಐ ಸಿಬ್ಬಂದಿ ಸದಸ್ಯರು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಎಂದು ಈ ವಿಷಯದ ಪರಿಚಯವಿರುವ ವ್ಯಕ್ತಿಯೊಬ್ಬರು ರಾಯಿಟರ್ಸ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಕುರಿತು ಓಪನ್ಎಐ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೈಕ್ರೋಸಾಫ್ಟ್‌ ಮುಖ ಮಾಡಿದ ಸ್ಯಾಮ್‌ ಆಲ್ಟ್‌ಮನ್‌
ಇನ್ನು  ಓಪನ್‌ಎಐ (OpenAI) ಸಿಇಒ ಸ್ಥಾನದಿಂದ ವಜಾಗೊಂಡ ಬಳಿಕ ಸ್ಯಾಮ್‌ ಆಲ್ಟ್‌ಮನ್‌ (Sam Altman) ಟೆಕ್ ದೈತ್ಯ ಮೈಕ್ರೋಸಾಫ್ಟ್‌ ನತ್ತ ಮುಖ ಮಾಡಿದ್ದಾರೆ. ಚಾಟ್‌ಜಿಪಿಟಿಯ (ChatGPT) ಮಾತೃಸಂಸ್ಥೆ ಓಪನ್‌ಎಐ ಸಿಇಒ ಸ್ಥಾನದಿಂದ ವಜಾಗೊಂಡ ಬೆನ್ನಲ್ಲೇ ಸ್ಯಾಮ್‌ ಆಲ್ಟ್‌ಮ್ಯಾನ್‌ (Sam Altman) ಅವರಿಗೆ ಭರ್ಜರಿ ಆಫರ್‌ ಬಂದಿದ್ದು, ಜಾಗತಿಕ ಐಟಿ ಕಂಪನಿಯಾದ ಮೈಕ್ರೋಸಾಫ್ಟ್‌ನಿಂದ ಸ್ಯಾಮ್‌ ಆಲ್ಟ್‌ಮ್ಯಾನ್‌ ಅವರಿಗೆ ಆಫರ್‌ ಬಂದಿದೆ. ಹಾಗೆಯೇ, ಶೀಘ್ರದಲ್ಲೇ ಸ್ಯಾಮ್‌ ಆಲ್ಟ್‌ಮ್ಯಾನ್‌ ಅವರು ಮೈಕ್ರೋಸಾಫ್ಟ್‌ ಸೇರಲಿದ್ದಾರೆ ಎಂದು ಸಿಇಒ ಸತ್ಯ ನಾಡೆಲ್ಲಾ (Satya Nadella) ಘೋಷಿಸಿದ್ದಾರೆ.

“ನಾವು ಓಪನ್‌ಎಐ ಜತೆ ಸಹಭಾಗಿತ್ವ ಮುಂದುವರಿಯಲು ಬಯಸುತ್ತೇವೆ. ಮೈಕ್ರೋಸಾಫ್ಟ್‌ ಕಂಪನಿಯು ನಾವೀನ್ಯತೆಯನ್ನು ಅಳವಡಿಸಿಕೊಳ್ಳಲು ಉತ್ಸುಕವಾಗಿರುತ್ತದೆ. ಅಷ್ಟೇ ಅಲ್ಲ. ಸ್ಯಾಮ್‌ ಆಲ್ಟ್‌ಮ್ಯಾನ್‌ ಹಾಗೂ ಗ್ರೆಗ್‌ ಬ್ರಾಕ್‌ಮ್ಯಾನ್‌ ಅವರು ಮೈಕ್ರೋಸಾಫ್ಟ್‌ ಕಂಪನಿ ಸೇರಲಿದ್ದಾರೆ. ಕೃತಕ ಬುದ್ಧಿಮತ್ತೆ ಸಂಶೋಧನಾ ತಂಡದಲ್ಲಿ ಅವರು ಭಾಗಿಯಾಗಲಿದ್ದಾರೆ. ಇದರೊಂದಿಗೆ ನಮ್ಮ ತಂಡ, ಸಂಪನ್ಮೂಲವು ವಿಸ್ತಾರವಾಗುತ್ತಿದೆ” ಎಂದು ಸತ್ಯ ನಾಡೆಲ್ಲಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com