ಮುಂಬೈ: ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಕೆಟ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಅವರನ್ನು ನೇಮಿಸಿಕೊಂಡಿರುವುದಾಗಿ ಭಾನುವಾರ ತಿಳಿಸಿದೆ. ಎಸ್‌ಬಿಐನ ಬ್ರಾಂಡ್ ಅಂಬಾಸಿಡರ್ ಆಗಿ ಧೋನಿ ವಿವಿಧ ಮಾರ್ಕೆಟಿಂಗ್ ಮತ್ತು ಪ್ರಚಾರ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಬ್ಯಾಂಕ್ ಹೇಳಿದೆ.
ಒತ್ತಡದ ಸಂದರ್ಭಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳುವ, ಸ್ಪಷ್ಟ ಆಲೋಚನೆ ಮತ್ತು ತ್ವರಿತ ನಿರ್ಧಾರ ಕೈಗೊಳ್ಳುವ ಅವರ ಸಾಮರ್ಥ್ಯ ದೇಶಾದ್ಯಂತ ತನ್ನ ಗ್ರಾಹಕರು ಮತ್ತು ಪಾಲುದಾರರೊಂದಿಗೆ ಸಂಪರ್ಕ ಸಾಧಿಸಲು ಸೂಕ್ತ ಆಯ್ಕೆಯಾಗಿದೆ. ಇದು ವಿಶ್ವಾಸಾರ್ಹತೆ ಮತ್ತು ನಾಯಕತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುವ, ತನ್ನ ಗ್ರಾಹಕರೊಂದಿಗೆ ಆಳವಾದ ಸಂಪರ್ಕಗಳನ್ನು ಬೆಸೆಯುವ ಬ್ಯಾಂಕಿನ ಬದ್ಧತೆಯ ಸಂಕೇತವಾಗಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
ಒಬ್ಬ ಸಂತೃಪ್ತ ಗ್ರಾಹಕರಾಗಿ ಎಸ್‌ಬಿಐ ಜೊತೆಗಿನ ಒಡನಾಟ ಅವರನ್ನು ನಮ್ಮ ಬ್ರ್ಯಾಂಡ್‌ನ ಪರಿಪೂರ್ಣ ಆದರ್ಶವನ್ನು ಪರಿಪೂರ್ಣ ಸಾಕಾರಗೊಳಿಸಿದೆ. ಈ ಪಾಲುದಾರಿಕೆಯೊಂದಿಗೆ, ದೇಶ ಮತ್ತು ನಮ್ಮ ಗ್ರಾಹಕರಿಗೆ ನಂಬಿಕೆ, ಸಮಗ್ರತೆ ಮತ್ತು ಅಚಲವಾದ ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುವ ನಮ್ಮ ಬದ್ಧತೆಯನ್ನು ಬಲಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ತಿಳಿಸಿದ್ದಾರೆ.
Advertisement