ಐಪಿಎಲ್ 2023ರ ಜಿಯೋಸಿನಿಮಾ ರಾಯಭಾರಿಯಾಗಿ ಭಾರತದ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮಾ ಆಯ್ಕೆ!
ಜಿಯೋಸಿನಿಮಾ (JioCinema) ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ನಡೆಯುತ್ತಿರುವ ಆವೃತ್ತಿಗೆ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ.
Published: 21st April 2023 01:36 PM | Last Updated: 21st April 2023 02:11 PM | A+A A-

ಜಿಯೋಸಿನಿಮಾ
ನವದೆಹಲಿ: ಜಿಯೋಸಿನಿಮಾ (JioCinema) ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ನಡೆಯುತ್ತಿರುವ ಆವೃತ್ತಿಗೆ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ.
ಸ್ಟಾರ್ ಕ್ರಿಕೆಟಿಗ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಜಿಯೋಸಿನಿಮಾದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ನಾವು ನಮ್ಮ ಕೊಡುಗೆಗಳನ್ನು ಮುಂದುವರಿಸುತ್ತೇವೆ. ಡಿಜಿಟಲ್ ಸ್ಟ್ರೀಮಿಂಗ್ ನಮ್ಮ ಲಕ್ಷಾಂತರ ವೀಕ್ಷಕರಿಗೆ ನವೀನ ಮತ್ತು ಅನನ್ಯ ಅನುಭವವನ್ನು ನೀಡುತ್ತದೆ ಎಂದು ಭಾವಿಸುತ್ತೇವೆ' ಎಂದು ಜಿಯೋಸಿನಿಮಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಯೋಸಿನಿಮಾ ಶೀಘ್ರದಲ್ಲೇ ರೋಹಿತ್ ಶರ್ಮಾ ಅವರನ್ನೊಳಗೊಂಡ ಪ್ರೋಮೋಗಳು ಮತ್ತು ಜಾಹೀರಾತು ಪ್ರಚಾರಗಳೊಂದಿಗೆ ಹೊರಬರಲಿದೆ. ಜಿಯೋಸಿನಿಮಾ ಮತ್ತು ಮುಂಬೈ ಇಂಡಿಯನ್ಸ್ ಎರಡೂ ರಿಲಯನ್ಸ್ ಗ್ರೂಪ್ ಒಡೆತನದಲ್ಲಿದೆ.
ಇದನ್ನೂ ಓದಿ: ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ನೋಡಲು ಮುಗಿಬಿದ್ದ ಜನ; ಜಿಯೋ ಸಿನಿಮಾದಲ್ಲಿ ದಾಖಲೆಯ ವೀಕ್ಷಣೆ ಕಂಡ CSK-RCB ಪಂದ್ಯ
ಈ ಆವೃತ್ತಿಯ ಐಪಿಎಲ್ ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಜಿಯೋಸಿನಿಮಾ ಹೊಂದಿದ್ದು, ಟೆಲಿವಿಷನ್ ಪ್ರಸಾರ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್ ಹೊಂದಿದೆ. ಹೀಗಾಗಿ, ಈ ಎರಡೂ ವೀಕ್ಷಕರು ಮತ್ತು ಜಾಹೀರಾತುದಾರರಿಂದ ಗರಿಷ್ಠ ಗಮನವನ್ನು ತಮ್ಮತ್ತ ಸೆಳೆಯಲು ಪೈಪೋಟಿ ನಡೆಸುತ್ತಿವೆ. ಐಪಿಎಲ್‌ನ ಸುತ್ತ ಹೆಚ್ಚಿನ ಅಬ್ಬರದ ಪ್ರಚಾರಗಳನ್ನು ನಡೆಸುತ್ತಿವೆ.
ಜಿಯೋಸಿನಿಮಾ ತನ್ನ ರಾಯಭಾರಿಗಳಾಗಿ ಸಚಿನ್ ತೆಂಡೂಲ್ಕರ್, ಸೂರ್ಯಕುಮಾರ್ ಯಾದವ್, ಎಂಎಸ್ ಧೋನಿ ಮತ್ತು ಸ್ಮೃತಿ ಮಂದಾನ ಅವರ ಹೆಸರನ್ನು ಸಹ ಹೊಂದಿದೆ.