ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶೇ.88 ರಷ್ಟು 2000 ರೂಪಾಯಿ ನೋಟುಗಳು ಬ್ಯಾಂಕ್ ಗಳಿಗೆ ವಾಪಸ್: ಆರ್ ಬಿಐ

ಮೇ ತಿಂಗಳಲ್ಲಿ ಹೆಚ್ಚಿನ ಮೌಲ್ಯದ ರೂ. 2,000 ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ರೂ 3.14 ಲಕ್ಷ ಕೋಟಿ ಮೌಲ್ಯದ ಶೇ. 88 ರಷ್ಟು ರೂ. 2,000 ನೋಟುಗಳು ಬ್ಯಾಂಕ್ ಗಳಿಗೆ ವಾಪಸ್ಸಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ತಿಳಿಸಿದೆ. 

ನವದೆಹಲಿ: ಮೇ ತಿಂಗಳಲ್ಲಿ ಹೆಚ್ಚಿನ ಮೌಲ್ಯದ ರೂ. 2,000 ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ರೂ 3.14 ಲಕ್ಷ ಕೋಟಿ ಮೌಲ್ಯದ ಶೇ. 88 ರಷ್ಟು ರೂ. 2,000 ನೋಟುಗಳು ಬ್ಯಾಂಕ್ ಗಳಿಗೆ ವಾಪಸ್ಸಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ತಿಳಿಸಿದೆ. 

ನಿನ್ನೆಯವರೆಗೂ ಚಲಾವಣೆಯಿಂದ ಮರಳಿ ಪಡೆದ 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯ 3.14 ಲಕ್ಷ ಕೋಟಿ ರೂಪಾಯಿ ಎಂದು ಆರ್‌ಬಿಐ ಹೇಳಿದೆ. ಮೇ 19 ರಿಂದ ಈ ನೋಟುಗಳನ್ನು ಹಿಂಪಡೆಯಲಾಗುತ್ತಿದ್ದು, ನಿನ್ನೆ ಬ್ಯಾಂಕ್ ವ್ಯವಹಾರ ಮುಕ್ತಾಯದ ವೇಳೆ ಶೇ. 88 ರಷ್ಟು ನೋಟುಗಳನ್ನು ಹಿಂಪಡೆಯಲಾಗಿದೆ.

ಈ ನೋಟುಗಳ ಪೈಕಿ ಶೇ. 87ರಷ್ಟು ಠೇವಣಿ ರೂಪದಲ್ಲಿ ಬಂದಿದ್ದು, ಉಳಿದ ಶೇ 13ರಷ್ಟು ಹಣವನ್ನು ಇತರೆ ಮುಖಬೆಲೆಯ ನೋಟುಗಳಿಗೆ ಬದಲಾಯಿಸಲಾಗಿದೆ.

ಈ ನೋಟುಗಳ ವಿನಿಮಯ ಅಥವಾ ಠೇವಣಿ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಅದಕ್ಕೂ ಮುಂಚಿತವಾಗಿ ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ರಿಸರ್ವ್ ಬ್ಯಾಂಕ್ ಹೇಳಿದೆ. 

Related Stories

No stories found.

Advertisement

X
Kannada Prabha
www.kannadaprabha.com