ಹೈದರಾಬಾದ್ ನಲ್ಲಿ ಎ 320 ಪೈಲಟ್‌ಗಳಿಗೆ ಸಿಮ್ಯುಲೇಟರ್ ತರಬೇತಿ ಸ್ಥಗಿತಗೊಳಿಸಿದ DGCA
ಹೈದರಾಬಾದ್‌ನಲ್ಲಿರುವ ಏರ್ ಇಂಡಿಯಾದ ತರಬೇತಿ ಕೇಂದ್ರದಲ್ಲಿ ಎ 320 ಪೈಲಟ್‌ಗಳಿಗೆ ಸಿಮ್ಯುಲೇಟರ್ ತರಬೇತಿ ಚಟುವಟಿಕೆಗಳನ್ನು ಡಿಜಿಸಿಎ ಸ್ಥಗಿತಗೊಳಿಸಿದ್ದು, ಮುಂಬೈನಲ್ಲಿರುವ ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯಲ್ಲಿ...
Published: 30th August 2023 08:49 PM | Last Updated: 30th August 2023 08:49 PM | A+A A-

ಏರ್ ಇಂಡಿಯಾ
ಮುಂಬೈ: ಹೈದರಾಬಾದ್‌ನಲ್ಲಿರುವ ಏರ್ ಇಂಡಿಯಾದ ತರಬೇತಿ ಕೇಂದ್ರದಲ್ಲಿ ಎ 320 ಪೈಲಟ್‌ಗಳಿಗೆ ಸಿಮ್ಯುಲೇಟರ್ ತರಬೇತಿ ಚಟುವಟಿಕೆಗಳನ್ನು ಡಿಜಿಸಿಎ ಸ್ಥಗಿತಗೊಳಿಸಿದ್ದು, ಮುಂಬೈನಲ್ಲಿರುವ ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯಲ್ಲಿ ಬೋಯಿಂಗ್ ಪೈಲಟ್‌ಗಳ ತರಬೇತಿ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ಕೇವಲ ಮೂರು ದಿನಗಳ ಅವಧಿಯಲ್ಲಿ ಕೈಗೊಂಡ ಎರಡು ನಿರ್ಧಾರಗಳು ಏರ್ ಇಂಡಿಯಾ ಕಾರ್ಯಾಚರಣೆಗೆ ಅಡ್ಡಿ ಉಂಟುಮಾಡಬಹುದು. ಏರ್ ಇಂಡಿಯಾ ತನ್ನ ಸ್ವಂತ ತರಬೇತಿ ಕೇಂದ್ರ ಕಿರಿದಾದ ಮತ್ತು ದೊಡ್ಡ ವಿಮಾನಗಳ ಪೈಲಟ್‌ಗಳಿಗೆ ತರಬೇತಿ ನೀಡಲು ಸಾಧ್ಯವಿಲ್ಲ.
ಇದನ್ನು ಓದಿ: ಏರ್ ಇಂಡಿಯಾದ ಆಂತರಿಕ ಸುರಕ್ಷತೆ ಪರಿಶೋಧನೆಯಲ್ಲಿ ಸುಳ್ಳು ವರದಿ ಪತ್ತೆ ಮಾಡಿದ ಡಿಜಿಸಿಎ
"ತಪಾಸಣೆಯ ಸಮಯದಲ್ಲಿ ಕೆಲವು ಲೋಪಗಳನ್ನು ಗಮನಿಸಿದ ನಂತರ A320 ಪೈಲಟ್‌ಗಳಿಗೆ ಏರ್ ಇಂಡಿಯಾ ತರಬೇತಿ ಕೇಂದ್ರದಲ್ಲಿ ಸಿಮ್ಯುಲೇಟರ್ ತರಬೇತಿ ಚಟುವಟಿಕೆಗಳನ್ನು DGCA ಈಗ ಸ್ಥಗಿತಗೊಳಿಸಿದೆ" ಎಂದು ಮೂಲವೊಂದು ಬುಧವಾರ PTI ಗೆ ತಿಳಿಸಿದೆ.
DGCA ನಿರ್ಧಾರದ ಬಗ್ಗೆ ಏರ್ ಇಂಡಿಯಾ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.