ಹಿನ್ನೋಟ 2023: ಹಳೆ v/s ಹೊಸ ಪಿಂಚಣಿ ವ್ಯವಸ್ಥೆ; ಬಗೆಹರಿಯದ ಗೊಂದಲ!

2023ನೇ ಕ್ಯಾಲೆಂಡರ್ ವರ್ಷ ಮುಗಿದು 2024ನೇ ವರ್ಷ ಕಾಲಿಡಲು ಇನ್ನು ಕೆಲವೇ ದಿನಗಳು ಬಾಕಿ. ಈ ವರ್ಷ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ದೇಶದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿತ್ತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 2023ನೇ ಕ್ಯಾಲೆಂಡರ್ ವರ್ಷ ಮುಗಿದು 2024ನೇ ವರ್ಷ ಕಾಲಿಡಲು ಇನ್ನು ಕೆಲವೇ ದಿನಗಳು ಬಾಕಿ. ಈ ವರ್ಷ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ದೇಶದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿತ್ತು. 

2004ರಲ್ಲಿ ಆರಂಭವಾದ ರಾಷ್ಟ್ರೀಯ ಪಂಚಣಿ ವ್ಯವಸ್ಥೆಯ ಸಮಸ್ಯೆಗಳ ನಿವಾರಣೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಿದರು.ಇದು ರಾಜಕೀಯ ಚರ್ಚೆ, ವಾಗ್ವಾದಗಳಿಗೆ ಕಾರಣವಾಯಿತು. ಈಗ ನಡೆಯುತ್ತಿರುವ ಚರ್ಚೆಗಳ ಮಧ್ಯೆ, ಹಣಕಾಸು ಸಚಿವಾಲಯವು ವರ್ಷ ಪೂರ್ಣಗೊಳ್ಳುವ ಮೊದಲು ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ಗೆ ಬದಲಾವಣೆಗಳನ್ನು ಪರಿಚಯಿಸುವ ಯೋಜನೆಯನ್ನು ಪ್ರಕಟಿಸುವ ಸಾಧ್ಯತೆಯಿದೆ.

ಪ್ರಸ್ತಾವಿತ ಯೋಜನೆಯು ಆಂಧ್ರಪ್ರದೇಶದ ಪಿಂಚಣಿ ವ್ಯವಸ್ಥೆಯ ಮಾದರಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಉದ್ಯೋಗಿ ಕೊನೆಯದಾಗಿ ಪಡೆದ ಮೂಲ ವೇತನದ ಶೇಕಡಾ 40ರಿಂದ 50ರ ಆಧಾರದ ಮೇಲೆ ಪಿಂಚಣಿ ಖಾತರಿಪಡಿಸುತ್ತದೆ. ಪಿಂಚಣಿ ಕಾರ್ಪಸ್‌ನಲ್ಲಿ ಯಾವುದೇ ಕೊರತೆಯನ್ನು ತುಂಬಲು ಸರ್ಕಾರವು ಹೆಜ್ಜೆ ಇಡುವುದರೊಂದಿಗೆ, ಈ ಹೊಸ ಪಿಂಚಣಿ ವ್ಯವಸ್ಥೆಯು ಮಾರುಕಟ್ಟೆಗೆ ಸಂಬಂಧಿಸಿರುತ್ತದೆ, ನೌಕರರು ಮೊದಲಿನಂತೆ ಕೊಡುಗೆ ನೀಡುವುದನ್ನು ಮುಂದುವರಿಸಿದರೆ, ಸರ್ಕಾರದ ಕೊಡುಗೆ ಹೆಚ್ಚಾಗುವ ನಿರೀಕ್ಷೆಯಿದೆ.

ಹಣಕಾಸು ಕಾರ್ಯದರ್ಶಿ ಟಿ ವಿ ಸೋಮನಾಥನ್ ನೇತೃತ್ವದ ಸಮಿತಿಯು ಯೋಜನೆಯ ವಿಧಾನಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಪಿಂಚಣಿದಾರರು ಹಣದುಬ್ಬರ-ಸಂಬಂಧಿತ ತುಟ್ಟಿಭತ್ಯೆ (DA) ಜೊತೆಗೆ ತಮ್ಮ ಇತ್ತೀಚಿನ ಕೊನೆಯ ಮೂಲ ವೇತನದ ಶೇಕಡಾ 50ನ್ನು ಪಡೆಯುವುದನ್ನು ಖಾತ್ರಿಪಡಿಸುವ ಆಂಧ್ರಪ್ರದೇಶ ಮಾದರಿಯು ಪ್ರಸ್ತಾವಿತ ಬದಲಾವಣೆಗಳ ಮೇಲೆ ಪ್ರಭಾವ ಬೀರಿದೆ.

ಮಾರ್ಚ್ 31, 2023 ರಂತೆ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ದ ಅಂಕಿಅಂಶಗಳ ಪ್ರಕಾರ, ಪಿಂಚಣಿ ವ್ಯವಸ್ಥೆಯ ನಿರ್ವಹಣೆಯ ಅಡಿಯಲ್ಲಿ 9 ಲಕ್ಷ ಕೋಟಿ ರೂಪಾಯಿ ಆಸ್ತಿಯಲ್ಲಿ ಶೇಕಡಾ 79ರಷ್ಟು ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಾಗಿದ್ದಾರೆ. ಎನ್‌ಪಿಎಸ್ ಒಟ್ಟು 6.3 ಕೋಟಿ ಚಂದಾದಾರರನ್ನು ಹೊಂದಿದ್ದು, ರಾಜ್ಯ ಸರ್ಕಾರಿ ನೌಕರರಿಂದ 60.72 ಲಕ್ಷ ಮತ್ತು ಕೇಂದ್ರ ಸರ್ಕಾರಿ ನೌಕರರಿಂದ 23.86 ಲಕ್ಷ ಚಂದಾದಾರರನ್ನು ಹೊಂದಿದೆ.

ಆದಾಗ್ಯೂ, ಈ ಉದ್ದೇಶಿತ ಸುಧಾರಣೆಗಳು ರಾಜಕೀಯ ಒತ್ತಡಗಳನ್ನು ಎದುರಿಸುತ್ತಿವೆ, ಬಿಜೆಪಿ ಆಡಳಿತದ ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆಯನ್ನು ಪರಿಚಯಿಸಲು ಎನ್‌ಪಿಎಸ್‌ಗೆ ತಿದ್ದುಪಡಿಗಳನ್ನು ತರಲು ಮುಂದಾಗಿವೆ, ಹಿಮಾಚಲ ಪ್ರದೇಶ, ರಾಜಸ್ತಾನ, ಛತ್ತೀಸ್‌ಗಢ, ಪಂಜಾಬ್ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳು ಈಗಾಗಲೇ ಹಳೆಯ ಪಿಂಚಣಿ ವ್ಯವಸ್ಥೆಗೆ ಹಿಂತಿರುಗಿವೆ, ಇದು ಉದ್ಯೋಗಿ ಪಿಂಚಣಿಗಳಿಗೆ ಹಣವನ್ನು ನೀಡಲು ರಾಜ್ಯ ಸರ್ಕಾರಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. 

ಈಗ ನಡೆಯುತ್ತಿರುವ ಚರ್ಚೆಗಳು ಹಳೆಯ ಪಿಂಚಣಿ ವ್ಯವಸ್ಥೆಯ ಸುಸ್ಥಿರತೆಯ ಬಗ್ಗೆ ವಿಶಾಲವಾದ ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್, ಜನಸಂಖ್ಯೆ ಬದಲಾವಣೆಗಳು ಮತ್ತು ಜನನ ಪ್ರಮಾಣ ಕಡಿಮೆಯಾಗುತ್ತಿರುವುದು ಹಳೆಯ ಯೋಜನೆಯನ್ನು ಉಳಿಸಿಕೊಳ್ಳುವ ಸವಾಲುಗಳನ್ನು ಒಡ್ಡುತ್ತವೆ. 

ರಾಷ್ಟ್ರೀಯ ಪಿಂಚಣಿ ಯೋಜನೆ: ರಾಷ್ಟ್ರೀಯ ಪಿಂಚಣಿ ಯೋಜನೆ (NPS), ಸರ್ಕಾರಿ-ಪ್ರಾಯೋಜಿತ ಪಿಂಚಣಿ ಯೋಜನೆಯಾಗಿದ್ದು, ಸರ್ಕಾರಿ ನೌಕರರಿಗೆ 2004ರ ಜನವರಿ ತಿಂಗಳಲ್ಲಿ ಪ್ರಾರಂಭಿಸಲಾಯಿತು. ಇದನ್ನು 2009 ರಲ್ಲಿ ಎಲ್ಲಾ ವಿಭಾಗಗಳಿಗೆ ತೆರೆಯಲಾಯಿತು. ಒಬ್ಬ ಚಂದಾದಾರನು ತನ್ನ ಕೆಲಸದ ಅವಧಿಯಲ್ಲಿ ಪಿಂಚಣಿ ಖಾತೆಗೆ ನಿಯಮಿತವಾಗಿ ಕೊಡುಗೆ ನೀಡಬಹುದು, ಕಾರ್ಪಸ್‌ನ ಒಂದು ಭಾಗವನ್ನು ಒಂದು ದೊಡ್ಡ ಮೊತ್ತದಲ್ಲಿ ಹಿಂಪಡೆಯಬಹುದು ಮತ್ತು ನಿವೃತ್ತಿಯ ನಂತರ ನಿಯಮಿತ ಆದಾಯವನ್ನು ಪಡೆಯಲು ವರ್ಷಾಶನವನ್ನು ಖರೀದಿಸಲು ಉಳಿದ ಕಾರ್ಪಸ್ ನ್ನು ಬಳಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com