ಪ್ರಧಾನಿ ಮೋದಿಯವರಿಂದ ಶ್ರೀಮಂತನಾದೆ ಎಂಬ ಮಾತುಗಳು ಸುಳ್ಳು, ಸುಲಭವಾಗಿ ನನ್ನನ್ನು ಗುರಿ ಮಾಡಲಾಗುತ್ತಿದೆ: ಗೌತಮ್ ಅದಾನಿ

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂಬ ಟೀಕೆಗಳನ್ನು ಇತ್ತೀಚೆಗೆ ತೀವ್ರ ಸಂಕಷ್ಟದಲ್ಲಿರುವ ಅದಾನಿ ಗ್ರೂಪ್ ನ ಗೌತಮ್ ಅದಾನಿ ನಿರಾಕರಿಸಿದ್ದಾರೆ.  ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿರುವ ಅವರ ಕಂಪೆನಿ ಮೊನ್ನೆ ಷೇರು ವ್ಯವಹಾರದಿಂದ ಹಿಂದೆ ಸರಿದಿತ್ತು. 
ಅಹಮದಾಬಾದ್ ನಲ್ಲಿರುವ ಅದಾನಿ ಕಂಪೆನಿ
ಅಹಮದಾಬಾದ್ ನಲ್ಲಿರುವ ಅದಾನಿ ಕಂಪೆನಿ

ಮುಂಬೈ: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂಬ ಟೀಕೆಗಳನ್ನು ಇತ್ತೀಚೆಗೆ ತೀವ್ರ ಸಂಕಷ್ಟದಲ್ಲಿರುವ ಅದಾನಿ ಗ್ರೂಪ್ ನ ಗೌತಮ್ ಅದಾನಿ ನಿರಾಕರಿಸಿದ್ದಾರೆ.  ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿರುವ ಅವರ ಕಂಪೆನಿ ಮೊನ್ನೆ ಷೇರು ವ್ಯವಹಾರದಿಂದ ಹಿಂದೆ ಸರಿದಿತ್ತು. 

ಅದಾನಿ ಗ್ರೂಪ್ ನ ಪಟ್ಟಿ ಮಾಡಲಾದ ಘಟಕಗಳ ಸಂಯೋಜಿತ ಮಾರುಕಟ್ಟೆ ಬಂಡವಾಳೀಕರಣವು ಸುಮಾರು 120 ಶತಕೋಟಿ ಡಾಲರ್ ನಷ್ಟು ಕುಸಿದಿದೆ. ಷೇರುಗಳ ಮೇಲೆ ಬೆಟ್ಟಿಂಗ್ ಮಾಡುವ ಮೂಲಕ ಹಣವನ್ನು ಗಳಿಸುವ ಅಮೆರಿಕಾದ ಕಿರು-ಮಾರಾಟಗಾರ ಹಿಂಡೆನ್‌ಬರ್ಗ್ ರಿಸರ್ಚ್ ಕಳೆದ ವಾರ ಸ್ಫೋಟಕ ವರದಿಯನ್ನು ಬಿಡುಗಡೆ ಮಾಡಿತ್ತು.

ಅದಾನಿ ಲೆಕ್ಕಪತ್ರ ವಂಚನೆ ಮತ್ತು ಕೃತಕವಾಗಿ ಷೇರು ಬೆಲೆಗಳನ್ನು ಹೆಚ್ಚಿಸಿದ್ದಾರೆ ಎಂಬುದು ಹಿಂಡೆನ್ ಬರ್ಗ್ ಆರೋಪವಾಗಿದೆ, ಇದನ್ನು "ಬ್ರೇಜನ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಅಕೌಂಟಿಂಗ್ ವಂಚನೆ ಯೋಜನೆ" ಮತ್ತು "ಕಾರ್ಪೊರೇಟ್ ಇತಿಹಾಸದಲ್ಲಿ ಅತಿದೊಡ್ಡ ಹಗರಣ ಎಂದು ಕರೆದಿದ್ದಾರೆ. 

ಮೂಲತಃ ಗುಜರಾತ್ ನವರಾಗಿರುವ ಪ್ರಧಾನಿ ಮೋದಿ ಮತ್ತು ಗೌತಮ್ ಅದಾನಿ ನಡುವೆ ಉತ್ತಮ ಬಾಂಧವ್ಯವಿತ್ತು.  ಈ ಬಾಂಧವ್ಯದಿಂದ ಅವರು ಉದ್ಯಮದಲ್ಲಿ ಸಾಕಷ್ಟು ಎತ್ತರಕ್ಕೆ ಏರಿ ಏಷ್ಯಾದ ಅತಿ ಶ್ರೀಮಂತ ಉದ್ಯಮಿ ಎಂದೆನಿಸಿಕೊಂಡಿದ್ದರು, ಅವರು ವ್ಯವಹಾರದಲ್ಲಿ ಮಾಡುತ್ತಿದ್ದ ಕೆಲವು ತಪ್ಪುಗಳು ಕಣ್ತಪ್ಪಿ ಹೋಗುತ್ತಿದ್ದವು ಎಂದು ವಿಮರ್ಶಕರು ಕಳೆದೊಂದು ವಾರದಿಂದ ಟೀಕಿಸುತ್ತಿದ್ದರು. 

"ಈ ಆರೋಪಗಳು ಆಧಾರರಹಿತವಾಗಿವೆ" ಎಂದು ನಿನ್ನೆ ಸುದ್ದಿವಾಹಿನಿಯೊಂದಕ್ಕೆ ಗೌತಮ್ ಅದಾನಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮೇಲೆ ಸುಲಭವಾಗಿ ಗುರಿಯಾಗಿಟ್ಟುಕೊಂಡು ಟೀಕೆ ಮಾಡಲಾಗುತ್ತಿದೆ ಎಂದರು. ವಾಸ್ತವವೆಂದರೆ ನನ್ನ ವೃತ್ತಿಪರ ಯಶಸ್ಸು ಯಾವುದೇ ವೈಯಕ್ತಿಕ ನಾಯಕರಿಂದಾಗಿದ್ದಲ್ಲ ಎಂದು ಹೇಳಿದ್ದಾರೆ. 

ಅವರ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರಪ್ರೈಸಸ್‌ನಲ್ಲಿನ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ತೀವ್ರ ಏರಿಳಿತ ಕಂಡಿದ್ದು, ಬಹು ವಹಿವಾಟು ಸ್ಥಗಿತಗೊಂಡು ಷೇರುಗಳು ಶೇಕಡಾ 30ರಷ್ಟು ಕುಸಿದಿದ್ದವು.

ಇನ್ನು ನಿನ್ನೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಭಾರತೀಯ ಮಾರುಕಟ್ಟೆಗಳು ಉತ್ತಮವಾಗಿ ನಿಯಂತ್ರಿಸಲ್ಪಟ್ಟಿವೆ. ಅದಾನಿ ವಿವಾದವು ಹೂಡಿಕೆದಾರರ ವಿಶ್ವಾಸದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದರು. 

ಅದಾನಿ ಅವರ ಸಂಪತ್ತು ಹತ್ತಾರು ಶತಕೋಟಿ ಡಾಲರ್‌ಗಳ ಕುಸಿತವನ್ನು ಕಂಡಿದೆ, ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಅವರು 17 ನೇ ಸ್ಥಾನಕ್ಕೆ ಇಳಿದಿದ್ದಾರೆ. 

ಅದಾನಿ ಶುಕ್ರವಾರ ತಮ್ಮ ಸಂದರ್ಶನದಲ್ಲಿ ತಮ್ಮ ಸಂಸ್ಥೆಗಳ ಸಾಲಗಳಲ್ಲಿ ಕೇವಲ 32 ಪ್ರತಿಶತದಷ್ಟು ಮಾತ್ರ ಭಾರತೀಯ ಬ್ಯಾಂಕ್‌ಗಳಿಗೆ ನೀಡಬೇಕಿದೆ, ಅರ್ಧದಷ್ಟು ಸಾಲವನ್ನು ಅಂತಾರಾಷ್ಟ್ರೀಯ ಬಾಂಡ್‌ಗಳ ಮೂಲಕ ಪಡೆಯಲಾಗಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com