2023ರಲ್ಲೂ ಮತ್ತೆ ಉದ್ಯೋಗ ಕಡಿತಕ್ಕೆ ಸ್ಟಾರ್ಟ್‌ಅಪ್‌ಗಳು ಮುಂದು; ಲೇಆಫ್ ಮಾಡಿದ ಕಂಪನಿಗಳು ಇವು...

ಆರ್ಥಿಕ ಹಿಂಜರಿತದಿಂದಾಗಿ, ನೂರಾರು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಅನೇಕ ಕಂಪನಿಗಳು ವೆಚ್ಚ ಕಡಿತದ (ಕಾಸ್ಟ್ ಕಟಿಂಗ್) ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಅಮೆಜಾನ್, Dunzo, ಮತ್ತು ShareChat ನಿಂದ Ola ಮತ್ತು ಪಾವತಿ ಸಂಸ್ಥೆಯಾದ ಕ್ಯಾಶ್‌ಫ್ರೀನಿಂದ ಉದ್ಯೋಗ ಕಡಿತವು 2023 ರಲ್ಲಿಯೂ ಮುಂದುವರೆಯುತ್ತವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಆರ್ಥಿಕ ಹಿಂಜರಿತದಿಂದಾಗಿ, ನೂರಾರು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಅನೇಕ ಕಂಪನಿಗಳು ವೆಚ್ಚ ಕಡಿತದ (ಕಾಸ್ಟ್ ಕಟಿಂಗ್) ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಅಮೆಜಾನ್, Dunzo, ಮತ್ತು ShareChat ನಿಂದ Ola ಮತ್ತು ಪಾವತಿ ಸಂಸ್ಥೆಯಾದ ಕ್ಯಾಶ್‌ಫ್ರೀನಿಂದ ಉದ್ಯೋಗ ಕಡಿತವು 2023 ರಲ್ಲಿಯೂ ಮುಂದುವರೆಯುತ್ತವೆ.

ಅಮೆಜಾನ್ ಭಾರತದಲ್ಲಿ 1,000 ಉದ್ಯೋಗಿಗಳನ್ನು ಅಥವಾ ತನ್ನ ಒಟ್ಟು ಉದ್ಯೋಗಿಗಳ ಪೈಕಿ ಶೇ 1 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಎಷ್ಟು ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ ಎಂಬ ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಹೇಳಿಕೆ ಇಲ್ಲವಾದರೂ, ಮೂಲಗಳ ಪ್ರಕಾರ, ಸ್ವಯಂಪ್ರೇರಿತ ಬೇರ್ಪಡಿಕೆ ಕಾರ್ಯಕ್ರಮವನ್ನು (ವಿಎಸ್‌ಪಿ) ಆಯ್ಕೆ ಮಾಡಿದವರು ಸೇರಿದಂತೆ ಕನಿಷ್ಠ 1,500 ಉದ್ಯೋಗಿಗಳನ್ನು ವಜಾಗೊಳಿಸಿದೆ ಎನ್ನಲಾಗಿದೆ. ಅಮೆಜಾನ್ ಭಾರತದಲ್ಲಿ ಸುಮಾರು 1 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

ಕಂಪನಿಯು ಕಳೆದ ವರ್ಷ ನವೆಂಬರ್‌ನಲ್ಲಿ ಘೋಷಿಸಿದ ವಿಎಸ್‌ಪಿಯಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಹೊರನಡೆಯಲಿಲ್ಲ ಮತ್ತು ವಿಎಸ್‌ಪಿಯ ಗಡುವು ನವೆಂಬರ್ 30ರ ವರೆಗೆ ಇತ್ತು. ಅದು ಮುಗಿದ ನಂತರ ಕಂಪನಿಯು ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿತು ಎಂದು ಹೇಳಲಾಗುತ್ತಿದೆ.

ಜನವರಿ ಮೊದಲ ವಾರದಲ್ಲಿ ಅಮೆಜಾನ್ ಸಿಇಒ ಆಂಡಿ ಜಸ್ಸಿ ಮಾತನಾಡಿ, ಈ ಕ್ರಮದಿಂದಾಗಿ 18,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜನವರಿ 18ರಿಂದ ಈ ಪರಿಣಾಮ ಬೀರಿದ ಉದ್ಯೋಗಿಗಳೊಂದಿಗೆ ಮಾತುಕತೆಯನ್ನು ಪ್ರಾರಂಭಿಸಲಾಗುತ್ತದೆ ಎಂದಿದ್ದಾರೆ.

ಮೂಲಗಳ ಪ್ರಕಾರ, ಭಾರತದಲ್ಲಿ ಉದ್ಯೋಗಿಗಳಿಗೆ ಉದ್ಯೋಗ ಕಡಿತದ ಬಗ್ಗೆ ತಿಳಿಸಲಾಗಿದೆ ಮತ್ತು ಸಂಪೂರ್ಣ ಪ್ರಕ್ರಿಯೆಯು ಜನವರಿ 16 ರಂದು ಪೂರ್ಣಗೊಂಡಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ಯೋಗ ಕಡಿತಗಳಿಲ್ಲ.

ಅಮೆಜಾನ್ ಹೊರತುಪಡಿಸಿ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಶೇರ್‌ಚಾಟ್ ತನ್ನ ಒಟ್ಟು ಸಾಮರ್ಥ್ಯದಲ್ಲಿ ಶೇ 20ರಷ್ಟು ಅಥವಾ 500ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿದೆ. 'ನಾವು ಬೆಳೆಯುತ್ತಿದ್ದಂತೆ, ವೆಚ್ಚ ಮತ್ತು ಬಂಡವಾಳದ ಲಭ್ಯತೆಯ ಮೇಲೆ ಪ್ರಭಾವ ಬೀರುವ ಹಲವಾರು ಬಾಹ್ಯ ಸೂಕ್ಷ್ಮ ಅಂಶಗಳು ಕಂಡುಬಂದಿವೆ. ಬಂಡವಾಳವು ದುಬಾರಿಯಾಗುತ್ತಿದ್ದಂತೆ, ಸಂಸ್ಥೆಗಳು ತಮ್ಮ ಗುರಿಗಳಿಗೆ ಆದ್ಯತೆ ನೀಡಬೇಕು ಮತ್ತು ಹೆಚ್ಚಿನ ಪರಿಣಾಮ ಬೀರುವ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ' ಎಂದು ಶೇರ್‌ಚಾಟ್ ಹೇಳಿಕೆಯಲ್ಲಿ ತಿಳಿಸಿದೆ.

ಶೇರ್‌ಚಾಟ್ 2023 ರಲ್ಲಿ ಅನಿಶ್ಚಿತ ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಮೂಲಕ ಸಾಗಲು ಮತ್ತು ಅದರಿಂದ ಬಲವಾಗಿ ಹೊರಬರುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.

ಗೂಗಲ್ ಬೆಂಬಲಿತ ಡುಂಜೊ ತನ್ನ ಕಾರ್ಯಪಡೆಯ ಶೇ 3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಕೂಡ ನಿಖರವಾದ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಆದರೆ, ವಜಾಗೊಂಡ ನೌಕರರು ಸುಮಾರು 80 ಆಗಿರಬಹುದು ಎಂದು ಹೇಳಲಾಗಿದೆ.

ನಮ್ಮ ತಂಡಗಳಲ್ಲಿ ದಕ್ಷತೆಯನ್ನು ರೂಪಿಸಲು ನಮ್ಮ ತಂಡದ ರಚನೆಗಳು ಮತ್ತು ನೆಟ್‌ವರ್ಕ್ ವಿನ್ಯಾಸವನ್ನು ನೋಡುತ್ತಿದ್ದೇವೆ...ಕಳೆದ ವಾರ, ನಮ್ಮ ತಂಡದ ಒಟ್ಟು ಸಾಮರ್ಥ್ಯದ ಪೈಕಿ ಶೇ 3ರಷ್ಟು ಉದ್ಯೋಗಿಗಳನ್ನು ವಜಾ ಮಾಡಬೇಕಾಯಿತು. ಈ ಸಂಖ್ಯೆಗಳು ಎಷ್ಟೇ ಇರಲಿ, ಇವರೆಲ್ಲರೂ ಡುಂಜೊದೊಂದಿಗೆ ತಮ್ಮ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದರು ಮತ್ತು ಪ್ರತಿಭಾವಂತ ಸಹೋದ್ಯೋಗಿಗಳು ನಮ್ಮನ್ನು ತೊರೆದಿರುವುದು ದುಃಖಕರವಾಗಿದೆ ಎಂದು ಡುಂಜೊದ ಸಿಇಒ ಮತ್ತು ಸಹ-ಸಂಸ್ಥಾಪಕ ಕಬೀರ್ ಬಿಸ್ವಾಸ್ ಹೇಳಿದರು.

2023ರಲ್ಲಿಯೂ ಮುಂದುವರಿದ ಉದ್ಯೋಗ ಕಡಿತಗಳು

* ಭಾರತದಲ್ಲಿ ಅಮೆಜಾನ್‌ನಿಂದ 1,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ

* ಶೇರ್‌ಚಾಟ್‌ನಿಂದ 500 ಅಥವಾ ಶೇ 20 ರಷ್ಟು ಉದ್ಯೋಗಿಗಳನ್ನು ಕೈಬಿಡಲಾಯಿತು

* ಶೇ 3ರಷ್ಟು ಅಥವಾ 80 ಜನರನ್ನು ಡುಂಜೋ ವಜಾಗೊಳಿಸಿದೆ

* ಓಲಾ, ಕ್ಯಾಶ್‌ಫ್ರೀ ಪಾವತಿಗಳು ಕೂಡ ಕ್ರಮವಾಗಿ 200 ಮತ್ತು 80 ಉದ್ಯೋಗಿಗಳನ್ನು ವಜಾಗೊಳಿಸಿವೆ

* ವರದಿಗಳ ಪ್ರಕಾರ, ಭಾರತದಲ್ಲಿ 700 ಮಂದಿ ಸೇರಿದಂತೆ ಜಾರತಿಕವಾಗಿ 3 ಸಾವಿರ ಬ್ಯಾಂಕರ್‌ಗಳನ್ನು ಗೋಲ್ಡಮನ್ ಸ್ಯಾಚ್ಸ್ ವಜಾಗೊಳಿಸಿದೆ

* ಲೇಆಫ್ ಟ್ರ್ಯಾಕಿಂಗ್ ಸೈಟ್ Laysoff.fyi ಪ್ರಕಾರ, 91 ಟೆಕ್ ಸಂಸ್ಥೆಗಳು 2023 ರಲ್ಲಿ ಜಾಗತಿಕವಾಗಿ 24,151 ಉದ್ಯೋಗಿಗಳನ್ನು ವಜಾಗೊಳಿಸಿವೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com