ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ಡೈವರ್ಟ್; ಏರ್ ಇಂಡಿಯಾದಿಂದ ಎಲ್ಲಾ ಪ್ರಯಾಣಿಕರಿಗೆ ಪೂರ್ಣ ಹಣ ವಾಪಸ್

ಜೂನ್ 6 ರಂದು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ​​​ಏರ್ ಇಂಡಿಯಾ ವಿಮಾನದ ಎಂಜಿನ್​​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನವನ್ನು ರಷ್ಯಾದ ಮಗದನ್‌ಗೆ ಡೈವರ್ಟ್ ಮಾಡಲಾಗಿತ್ತು. ಇದರಿಂದ ತೊಂದರೆ...
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ

ಮುಂಬೈ: ಜೂನ್ 6 ರಂದು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ​​​ಏರ್ ಇಂಡಿಯಾ ವಿಮಾನದ ಎಂಜಿನ್​​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನವನ್ನು ರಷ್ಯಾದ ಮಗದನ್‌ಗೆ ಡೈವರ್ಟ್ ಮಾಡಲಾಗಿತ್ತು. ಇದರಿಂದ ತೊಂದರೆ ಅನುಭವಿಸಿದ ಎಲ್ಲಾ ಪ್ರಯಾಣಿಕರಿಗೆ ಪೂರ್ಣ ಹಣವನ್ನು ಮರುಪಾವತಿಸುವುದಾಗಿ ಏರ್ ಇಂಡಿಯಾ ಗುರುವಾರ ತಿಳಿಸಿದೆ.

"ನಿಮ್ಮ ಪ್ರಯಾಣದ ಶುಲ್ಕವನ್ನು ನಾವು ಸಂಪೂರ್ಣವಾಗಿ ಮರುಪಾವತಿಸುತ್ತೇವೆ ಮತ್ತು ಹೆಚ್ಚುವರಿಯಾಗಿ, ಏರ್ ಇಂಡಿಯಾದಲ್ಲಿ ಭವಿಷ್ಯದ ಪ್ರಯಾಣಕ್ಕಾಗಿ ನಿಮಗೆ ವೋಚರ್ ನೀಡುತ್ತೇವೆ" ಎಂದು ಏರ್ ಇಂಡಿಯಾದ ಮುಖ್ಯ ಗ್ರಾಹಕ ಅನುಭವ ಮತ್ತು ಗ್ರೌಂಡ್ ಹ್ಯಾಂಡ್ಲಿಂಗ್ ಅಧಿಕಾರಿ ರಾಜೇಶ್ ಡೋಗ್ರಾ ಅವರು ಜೂನ್ 6 ರಂದು ದೆಹಲಿಯಿಂದ ಹೊರಟು ಸುಮಾರು 56 ಗಂಟೆಗಳ ನಂತರ ತಮ್ಮ ಗಮ್ಯಸ್ಥಾನವನ್ನು ತಲುಪಿದ ಪ್ರಯಾಣಿಕರಿಗೆ ತಿಳಿಸಿದ್ದಾರೆ.

216 ಪ್ರಯಾಣಿಕರು ಮತ್ತು 16 ಸಿಬ್ಬಂದಿಯನ್ನು ಹೊತ್ತ ಏರ್ ಇಂಡಿಯಾ ವಿಮಾನ ಮಗದನ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ನಂತರ ದೆಹಲಿಯಿಂದ ತೆರಳಿದ ಎರಡನೇ ವಿಮಾನ ರಷ್ಯಾದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಇಂದು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com