ರಷ್ಯಾದಲ್ಲಿ ಸಿಕ್ಕಿಬಿದ್ದ ಅಮೆರಿಕಾ ಪ್ರಯಾಣಿಕರು: ಸುರಕ್ಷಿತವಾಗಿ ಕರೆತರಲು ಹೊರಟ ಏರ್ ಇಂಡಿಯಾ ವಿಮಾನ!

ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಏರ್ ಇಂಡಿಯಾದ ಪ್ರಯಾಣಿಕರನ್ನು ಅವರ ಗಮ್ಯಸ್ಥಾನವಾದ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋಗೆ ಕರೆದೊಯ್ಯಲು ಏರ್‌ಲೈನ್‌ನ ಎರಡನೇ ವಿಮಾನವು ರಷ್ಯಾಗೆ ತಲುಪಿದೆ.
ಪ್ರಯಾಣಿಕರು
ಪ್ರಯಾಣಿಕರು

ನವದೆಹಲಿ: ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಏರ್ ಇಂಡಿಯಾದ ಪ್ರಯಾಣಿಕರನ್ನು ಅವರ ಗಮ್ಯಸ್ಥಾನವಾದ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋಗೆ ಕರೆದೊಯ್ಯಲು ಏರ್‌ಲೈನ್‌ನ ಎರಡನೇ ವಿಮಾನವು ರಷ್ಯಾಗೆ ತಲುಪಿದೆ. 

ಬುಧವಾರ ಮಧ್ಯಾಹ್ನ 3:21ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಏರ್ ಇಂಡಿಯಾ ವಿಮಾನ ಗುರುವಾರ ಬೆಳಗ್ಗೆ 6:14ಕ್ಕೆ ಮುಂಬೈನಿಂದ ಮಗದನ್‌ಗೆ ರಷ್ಯಾ ತಲುಪಿತು. ಏರ್ ಇಂಡಿಯಾ ವಿಮಾನ AI195 216 ಪ್ರಯಾಣಿಕರು ಮತ್ತು 16 ಸಿಬ್ಬಂದಿಯನ್ನು ಹೊತ್ತು ಮಗದನ್‌ ನಿಂದ ಹೊರಟಿದೆ ಎಂಬ ಸುದ್ದಿ ಬಂದಿದೆ. 

ವಿಮಾನವು ಸ್ಥಳೀಯ ಸಮಯ ಬೆಳಿಗ್ಗೆ 6:14 ಕ್ಕೆ ಆಗಮಿಸಿತು. 10:27ಕ್ಕೆ ಹೊರಟಿದೆ. ಅಲ್ಲದೆ 00:15ಕ್ಕೆ ಸ್ಯಾನ್ ಫ್ರಾನ್ಸಿಸ್ಕೋ ತಲುಪುವ ನಿರೀಕ್ಷೆಯಿದೆ. ಸ್ಯಾನ್ ಫ್ರಾನ್ಸಿಸ್ಕೋಗೆ ಆಗಮಿಸಿದ ನಂತರ, ಏರ್ ಇಂಡಿಯಾ ಪ್ರಯಾಣಿಕರಿಗೆ ವೈದ್ಯಕೀಯ ಆರೈಕೆ, ನೆಲದ ಸಾರಿಗೆ ಮತ್ತು ಮುಂದಿನ ಗಮ್ಯಸ್ಥಾನ ಸೇರಿದಂತೆ ಅಗತ್ಯ ಸಹಾಯವನ್ನು ಒದಗಿಸಲಾಗುತ್ತದೆ.

ಏರ್ ಇಂಡಿಯಾ ವಿಮಾನ ಸಂಖ್ಯೆ AI-173 ಜೂನ್ 6ರಂದು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿತ್ತು. ಆದರೆ ಮಧ್ಯದಲ್ಲಿ, ಬೋಯಿಂಗ್ -777 ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾಗಿತ್ತು. ಹೀಗಾಗಿ ವಿಮಾನ ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಈ ವಿಮಾನದಲ್ಲಿ 216 ಪ್ರಯಾಣಿಕರು ಮತ್ತು 16 ಸಿಬ್ಬಂದಿ ಇದ್ದರು. ಅದೇ ಸಮಯದಲ್ಲಿ, ರಷ್ಯಾದಲ್ಲಿ ಸಿಲುಕಿರುವ ಏರ್ ಇಂಡಿಯಾ ವಿಮಾನದ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಆಹಾರ ಮತ್ತು ಇತರ ಸೌಲಭ್ಯಗಳನ್ನು ಕಳುಹಿಸಲಾಗಿದೆ ಎಂದು ಕಂಪನಿಯು ಹೇಳಿಕೆಯನ್ನು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com