1.80 ಲಕ್ಷ ಕೋಟಿ ರೂ. ಮೌಲ್ಯದ 2,000 ರೂ ಮುಖಬೆಲೆಯ ನೋಟುಗಳು ಬ್ಯಾಂಕ್ ಗೆ ವಾಪಸ್: ಶಕ್ತಿಕಾಂತ್ ದಾಸ್

2,000 ರೂಪಾಯಿ ಮುಖಬೆಲೆಯ 1.80 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹಣ ಬ್ಯಾಂಕ್ ಗೆ ಮರಳಿ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಗೌರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.
2000 ರೂಪಾಯಿ ನೋಟ್
2000 ರೂಪಾಯಿ ನೋಟ್

ಮುಂಬೈ: 2,000 ರೂಪಾಯಿ ಮುಖಬೆಲೆಯ 1.80 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹಣ ಬ್ಯಾಂಕ್ ಗೆ ಮರಳಿ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಗೌರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.

ನೋಟು ಹಿಂತೆಗೆತದ ನಿರ್ಧಾರ ಪ್ರಕಟಿಸಿದಾಗಿನಿಂದ ಈವರೆಗೂ ಒಟ್ಟು ಚಲಾವಣೆಯಲ್ಲಿದ್ದ 2,000 ರೂಪಾಯಿ ಮುಖಬೆಲೆಯ ಶೇ.50 ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ವಾಪಸ್ ಬಂದಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

2,000 ರೂಪಾಯಿ ನೋಟುಗಳ ಶೇ.85 ರಷ್ಟು ಹಣ ಬ್ಯಾಂಕ್ ಖಾತೆಗಳಿಗೆ ಠೇವಣಿಯ ರೂಪದಲ್ಲಿ ವಾಪಸ್ ಬರುತ್ತಿದೆ, ಇದು ನೀರೀಕ್ಷಿತ ಮಟ್ಟದಲ್ಲಿದೆ ಎಂದು ಆರ್ ಬಿಐ ಗೌರ್ನರ್ ತಿಳಿಸಿದ್ದಾರೆ. 

ಮೇ.23 ರಿಂದ 2000 ರೂಪಾಯಿ ಮುಖಬೆಲೆಯ ನೋಟುಗಳ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಸೆ.30 ವರೆಗೆ ನೋಟುಗಳ ಬದಲಾವಣೆಗೆ ಅವಕಾಶ ಇದೆ. ಇದೇ ವೇಳೆ 500 ರೂಪಾಯಿ ನೋಟುಗಳನ್ನು ಹಿಂಪಡೆಯುವ ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮರುಪರಿಚಯಿಸುವ ಯೋಜನೆ ಆರ್ ಬಿಐ ಮುಂದಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com