2024ರ ಫೋರ್ಬ್ಸ್‌ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಗೆ ಅಗ್ರಸ್ಥಾನ, ವಿಶ್ವದಲ್ಲಿ 9ನೇ ಸ್ಥಾನ

2024ರ ಫೋರ್ಬ್ಸ್‌ ಅತಿ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅತ್ಯಂತ ಶ್ರೀಮಂತ ಭಾರತೀಯರಾಗಿ ಮುಂದುವರೆದಿದ್ದಾರೆ.
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ

ನವದೆಹಲಿ: 2024ರ ಫೋರ್ಬ್ಸ್‌ ಅತಿ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅತ್ಯಂತ ಶ್ರೀಮಂತ ಭಾರತೀಯರಾಗಿ ಮುಂದುವರೆದಿದ್ದು, ವಿಶ್ವದ ಅಗ್ರ 10 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ಪ್ರಕಾರ, 66 ವರ್ಷದ ಮುಕೇಶ್ ಅಂಬಾನಿ ಅವರ ಸಂಪತ್ತು ಕಳೆದ ವರ್ಷದ 83 ಬಿಲಿಯ ಡಾಲರ್ (6.93 ಲಕ್ಷ ಕೋಟಿ ರೂಪಾಯಿ)ನಿಂದ ಈ ಬಾರಿ 116 ಬಿಲಿಯ ಡಾಲರ್ (9.68 ಲಕ್ಷ ಕೋಟಿ ರೂಪಾಯಿ)ಗೆ ಏರಿಕೆಯಾಗಿದೆ. ಇದರೊಂದಿಗೆ, 100 ಬಿಲಿಯ ಡಾಲರ್ಗಿಂತ ಹೆಚ್ಚಿನ ಸಂಪತ್ತು ಹೊಂದಿದವರ ಗುಂಪಿಗೆ ಸೇರ್ಪಡೆಗೊಂಡ ಮೊದಲ ಏಶ್ಯನ್ ಅವರಾಗಿದ್ದಾರೆ.

ಇನ್ನು ಫೋರ್ಬ್ಸ್‌ ಪಟ್ಟಿಯಲ್ಲಿ ಗೌತಮ್ ಅದಾನಿ ಅವರು ಎರಡನೇ ಅತ್ಯಂತ ಶ್ರೀಮಂತ ಭಾರತೀಯರಾಗಿದ್ದು, ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದಾರೆ.

ಮುಕೇಶ್ ಅಂಬಾನಿ
ಬಿಲಿಯನೇರ್ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾದ ಭಾರತೀಯರು ಯಾರು ಗೊತ್ತೇ?: ಇಲ್ಲಿದೆ ಮಾಹಿತಿ

ಅದಾನಿ ಅವರು 84 ಶತಕೋಟಿ ಡಾಲರ್ ಸಂಪತನ್ನು ಹೊಂದಿದ್ದಾರೆ. ಅದಾನಿ ಅರು ತಮ್ಮ ಕಳೆದ ವರ್ಷದ ಸಂಪತ್ತಿಗೆ ಈ ಬಾರಿ 36.8 ಬಿಲಿಯ ಡಾಲರ್ (3.07 ಲಕ್ಷ ಕೋಟಿ ರೂಪಾಯಿ) ಸೇರಿಸಿದ್ದಾರೆ. 61 ವರ್ಷದ ಅದಾನಿ ಅವರು 2022 ರಲ್ಲಿ 90 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದರು.

ಫೋರ್ಬ್ಸ್ 2024 ರ ಬಿಲಿಯನೇರ್‌ಗಳ ಪಟ್ಟಿಯಲ್ಲಿ 200 ಭಾರತೀಯರು ಸ್ಥಾನ ಪಡೆದಿದ್ದಾರೆ. ಕಳೆದ ವರ್ಷದ 169 ಮಂದಿಗೆ ಹೋಲಿಸಿದರೆ, ಈ ವರ್ಷ ಭಾರತೀಯ ಬಿಲಿಯನೇರ್‌ಗಳ ಮತ್ತಷ್ಟು ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com