ರಂಜಾನ್, ಯುಗಾದಿ: ಈ ವಾರ 4 ದಿನ ಬ್ಯಾಂಕ್ ರಜೆ

ಹೊಸ ಹಣಕಾಸು ವರ್ಷದ ಮೊದಲ ತಿಂಗಳು ಅಂದರೆ, 2024ರ ಏಪ್ರಿಲ್‌ನಲ್ಲಿ ಬ್ಯಾಂಕ್‌ಗಳಿಗೆ 14 ರಜಾದಿನಗಳಿವೆ. ಇದು ಬ್ಯಾಂಕ್‌ಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಲಿದೆ.
4 ದಿನ ಬ್ಯಾಂಕ್ ರಜೆ
4 ದಿನ ಬ್ಯಾಂಕ್ ರಜೆ

ಬೆಂಗಳೂರು: ಸಾಲು-ಸಾಲು ಹಬ್ಬಗಳ ಹಿನ್ನಲೆಯಲ್ಲಿ ಈ ವಾರ ಬ್ಯಾಂಕ್ ಗಳಿಗೆ 4 ದಿನ ರಜೆ ಇರಲಿದೆ.

ಹೌದು.. 2024-25ರ ಆರ್ಥಿಕ ವರ್ಷವು ಪ್ರಾರಂಭವಾಗಿದೆ. ಹೊಸ ಹಣಕಾಸು ವರ್ಷದ ಮೊದಲ ತಿಂಗಳಲ್ಲೇ ಬ್ಯಾಂಕುಗಳಿಗೆ ಸಾಕಷ್ಟು ರಜೆಗಳಿವೆ. ಹೊಸ ಹಣಕಾಸು ವರ್ಷದ ಮೊದಲ ತಿಂಗಳು ಅಂದರೆ, 2024ರ ಏಪ್ರಿಲ್‌ನಲ್ಲಿ ಬ್ಯಾಂಕ್‌ಗಳಿಗೆ 14 ರಜಾದಿನಗಳಿವೆ. ಇದು ಬ್ಯಾಂಕ್‌ಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಲಿದೆ.

ಆರ್‌ಬಿಐ ಬಿಡುಗಡೆ ಮಾಡಿರುವ ಬ್ಯಾಂಕ್ ರಜೆಗಳ ಪಟ್ಟಿಯ ಪ್ರಕಾರ, ಈ ವಾರ ಬ್ಯಾಂಕ್‌ಗಳಿಗೆ ರಜೆಯಿಂದಲೇ ತುಂಬಿದೆ. ಅನೇಕ ರಾಜ್ಯಗಳಲ್ಲಿ, ಈ ವಾರ ಬ್ಯಾಂಕ್ ಶಾಖೆಗಳಲ್ಲಿ ಕೇವಲ ಮೂರು ದಿನಗಳ ಕೆಲಸ ಇರುತ್ತದೆ. ಆದರೆ, ಈ ರಜೆಗಳು ಕೆಲವು ರಾಜ್ಯಗಳಿಗೆ ಮಾತ್ರವೇ ಅನ್ವಯವಾಗುತ್ತದೆ. ಆಯಾ ರಾಜ್ಯಗಳಲ್ಲಿ 3 ದಿನಗಳ ಕಾಲ ಮಾತ್ರವೇ ಬ್ಯಾಂಕ್‌ಗಳು ತೆರೆದಿರುತ್ತವೆ. ವಾರದ ಹೆಚ್ಚಿನ ದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುವುದರಿಂದ ಗ್ರಾಹಕರಿಗೆ ರಜೆ ಪಟ್ಟಿ ನೋಡಿಕೊಂಡು ತನ್ನ ಬ್ಯಾಂಕ್‌ ಕೆಲಸಗಳನ್ನು ಯೋಜಿಸಿಕೊಳ್ಳುವುದು ಉತ್ತಮ.

ಈ ವಾರದಲ್ಲಿ ಭಾರತದಾದ್ಯಂತ ಬ್ಯಾಂಕುಗಳು ಹಲವು ದಿನಗಳವರೆಗೆ ಮುಚ್ಚಲ್ಪಡುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ರಾಷ್ಟ್ರೀಯ ಬ್ಯಾಂಕ್‌ಗಳು ಏಪ್ರಿಲ್ 9 ರಿಂದ ಐದು ದಿನಗಳ ರಜೆಯನ್ನು ಘೋಷಿಸಿವೆ. ಪ್ರಮುಖವಾಗಿ ಗುಡಿ ಪಾಡ್ವಾ, ಯುಗಾದಿ, ತೆಲುಗು ಹೊಸ ವರ್ಷ, ಬೋಹಾಗ್ ಬಿಹು ಮತ್ತು ಈದ್ (ರಂಜಾನ್) ಆಚರಣೆಗಳು ಸೇರಿದಂತೆ ವಿವಿಧ ಹಬ್ಬಗಳು ಮತ್ತು ಸಂದರ್ಭಗಳಿಗೆ ರಜಾದಿನಗಳನ್ನು ನಿಗದಿಪಡಿಸಲಾಗಿದೆ.

ತೆಲುಗು ಹೊಸ ವರ್ಷದ ದಿನದಂದು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಬ್ಯಾಂಕ್ ಗಳಿಗೆ ರಜೆ ಇರಲಿದೆ ಎಂದು ಹೇಳಲಾಗಿದೆ.

4 ದಿನ ಬ್ಯಾಂಕ್ ರಜೆ
ಪ್ರಯಾಣಿಕರಿಗೆ ಗುಡ್ ನ್ಯೂಸ್: ಯುಗಾದಿ, ರಂಜಾನ್ ಸಾಲು ಸಾಲು ರಜೆ; ಹೆಚ್ಚುವರಿ KSRTC ಬಸ್ ವ್ಯವಸ್ಥೆ!

ಮಂಗಳವಾರದಿಂದ ಸರಣಿ ರಜೆ

ವಾರದ ಎರಡನೇ ದಿನವಾದ ಮಂಗಳವಾರ, ಏಪ್ರಿಲ್ 9, 2024 ರಿಂದ ಬ್ಯಾಂಕ್‌ಗಳಿಗೆ ಸರಣಿ ರಜೆ ಆರಂಭವಾಗಲಿದೆ. ಮಂಗಳವಾರ ಗುಡಿ ಪಾಡ್ವಾ, ಯುಗಾದಿ, ತೆಲುಗು ಹೊಸ ವರ್ಷ, ಸಜಿಬು ನೊಗಂಪನಬ (ಚೈರೊಬಾ) ಮತ್ತು ಮೊದಲ ನವರಾತ್ರಿ ಅಂಗವಾಗಿ ಬ್ಯಾಂಕ್ ರಜೆ ಇರುತ್ತದೆ. ವಿವಿಧ ರಾಜ್ಯಗಳ ಪ್ರಕಾರ ವಿವಿಧ ಹಬ್ಬಗಳ ಕಾರಣ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಣಿಪುರ, ಗೋವಾ ಮತ್ತು ಜಮ್ಮು ಮತ್ತು ಕಾಶ್ಮೀರದ ಬ್ಯಾಂಕುಳಿಗೆ ಮಂಗಳವಾರ ರಜೆ ಇರುತ್ತದೆ.

ಏಪ್ರಿಲ್ 10 ಮತ್ತು 11 ರಂದು ಈದ್ ರಜೆ

ರಂಜಾನ್ (ಈದ್-ಉಲ್-ಫಿತರ್) ಸಂದರ್ಭದಲ್ಲಿ ಏಪ್ರಿಲ್ 10 ರ ಬುಧವಾರದಂದು ವಾರದ ಮೂರನೇ ದಿನ ಕೇರಳದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಏಪ್ರಿಲ್ 11ರ ಗುರುವಾರದಂದು ಇಡೀ ದೇಶದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಈ ದಿನ ಚಂಡೀಗಢ, ಸಿಕ್ಕಿಂ, ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾತ್ರ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ. ಗುರುವಾರ ರಂಜಾನ್ (ಇಯು-ಉಲ್-ಫಿತರ್) ಮತ್ತು ಮೊದಲ ಶವ್ವಾಲ್‌ ಅಂಗವಾಗಿ ಬ್ಯಾಂಕ್ ರಜೆ ಇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com