ಭಾರತದ ಮಸಾಲೆ ಪದಾರ್ಥಗಳಿಗೆ ಹಾಂಕಾಂಗ್, ಸಿಂಗಾಪುರ ನಿಷೇಧ!

ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಭಾರತೀಯ ಆಹಾರ ನಿಯಂತ್ರಕಗಳ ಬಗ್ಗೆ ಜನರಿಗೆ ವಿಶ್ವಾಸ ಕಡಿಮೆಯಾಗಿದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳುತ್ತದೆ.
ಭಾರತದ ಮಸಾಲೆ ಪದಾರ್ಥಗಳು
ಭಾರತದ ಮಸಾಲೆ ಪದಾರ್ಥಗಳು

ನವದೆಹಲಿ: ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ನಂತರ ಹಾಂಗ್ ಕಾಂಗ್ ಮತ್ತು ಸಿಂಗಾಪುರ ದೇಶಗಳು ಎರಡು ಜನಪ್ರಿಯ ಭಾರತದ ಮಸಾಲೆ ಬ್ರಾಂಡ್‌ಗಳ ನಾಲ್ಕು ಉತ್ಪನ್ನಗಳನ್ನು ನಿಷೇಧಿಸಿದ ನಂತರ, ಭಾರತೀಯರಲ್ಲಿ ಅವುಗಳ ಸುರಕ್ಷತೆಯ ಬಗ್ಗೆ ಚಿಂತೆಗೀಡುಮಾಡಿದೆ.

ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಭಾರತೀಯ ಆಹಾರ ನಿಯಂತ್ರಕಗಳ ಬಗ್ಗೆ ಜನರಿಗೆ ವಿಶ್ವಾಸ ಕಡಿಮೆಯಾಗಿದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳುತ್ತದೆ.

ಸ್ತನ ಕ್ಯಾನ್ಸರ್ ಮತ್ತು ಲಿಂಫೋಮಾದ ಅಪಾಯವನ್ನು ಹೆಚ್ಚಿಸುವ ಕ್ಯಾನ್ಸರ್-ಉಂಟುಮಾಡುವ ಏಜೆಂಟ್ ಎಥಿಲೀನ್ ಆಕ್ಸೈಡ್ ಇರುವಿಕೆಯನ್ನು ಉಲ್ಲೇಖಿಸಿ ಹಾಂಗ್ ಕಾಂಗ್ ಮತ್ತು ಸಿಂಗಾಪುರ ದೇಶಗಳು MDH ಮತ್ತು ಎವರೆಸ್ಟ್ ಜಾತಿಯ ನಾಲ್ಕು ಮಸಾಲೆ ಉತ್ಪನ್ನಗಳನ್ನು ನಿಷೇಧಿಸಿವೆ.

ಈ ಎರಡು ದೇಶಗಳು ಉತ್ಪನ್ನಗಳನ್ನು ನಿಷೇಧಿಸಿದ ನಂತರ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಈ ಬಗ್ಗೆ ತನಿಖೆ ನಡೆಸುತ್ತಿದೆ.

ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಈ ಎರಡು ಬ್ರಾಂಡ್‌ಗಳ ಪ್ಯಾಕೇಜ್ಡ್ ಮಸಾಲೆಗಳನ್ನು ದೀರ್ಘಕಾಲದವರೆಗೆ ಸೇವಿಸುತ್ತಿದ್ದ ಶೇಕಡಾ 72ರಷ್ಟು ಗ್ರಾಹಕರು ಅವುಗಳಲ್ಲಿ ಕಾರ್ಸಿನೋಜೆನಿಕ್ ಅಂಶಗಳು ಕಂಡುಬಂದ ನಂತರ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದ ಮಸಾಲೆ ಪದಾರ್ಥಗಳು
ಗುಣಮಟ್ಟದ ಬಗ್ಗೆ ಕಳವಳ: MDH ಮತ್ತು Everest ಉತ್ಪನ್ನಗಳ ಪರೀಕ್ಷೆಗೆ FSSAI ಮುಂದು

ಸಮೀಕ್ಷೆಗೆ ಒಳಪಟ್ಟ 293 ಜಿಲ್ಲೆಗಳಲ್ಲಿ ನೆಲೆಸಿರುವ 12,361 ಜನರಲ್ಲಿ ಶೇಕಡಾ 62 ಜನರು ಈ ಬ್ರಾಂಡ್‌ಗಳ ಮಸಾಲೆಗಳನ್ನು ಸೇವಿಸುತ್ತಿದ್ದಾರೆ. ಕೇವಲ ಶೇಕಡಾ 10ರಷ್ಟು ಜನರು ಈ ಬ್ರಾಂಡ್‌ಗಳನ್ನು ಸೇವಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಲೋಕಲ್ ಸರ್ಕಲ್ಸ್ ಸಂಸ್ಥಾಪಕ ಸಚಿನ್ ತಪಾರಿಯಾ ಪ್ರಕಾರ, ಕೇಂದ್ರ ಮತ್ತು ರಾಜ್ಯಗಳೆರಡೂ - ಸಾರ್ವಜನಿಕ ಕಾಳಜಿಗಳನ್ನು ಗಮನಿಸಿ ಗುಣಮಟ್ಟವನ್ನು ಬಲಪಡಿಸುವ ಅಗತ್ಯವಿದೆ, ಅವುಗಳ ಅನುಷ್ಠಾನ, ನೀತಿ ಮತ್ತು ಆಡಳಿತವು ಕಲುಷಿತ ಆಹಾರ ಉತ್ಪನ್ನಗಳಾಗಿ ಜನಸಮುದಾಯ ಮೇಲೆ ದೀರ್ಘಾವಧಿಯ ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com