ಸಂಗ್ರಹ ಚಿತ್ರ
ಸಂಗ್ರಹ ಚಿತ್ರTNIE

ಗುಣಮಟ್ಟದ ಬಗ್ಗೆ ಕಳವಳ: MDH ಮತ್ತು Everest ಉತ್ಪನ್ನಗಳ ಪರೀಕ್ಷೆಗೆ FSSAI ಮುಂದು

ಗುಣಮಟ್ಟದ ಉದ್ದೇಶದಿಂದ ದೇಶಾದ್ಯಂತ MDH ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳನ್ನು ಪರೀಕ್ಷಿಸಲು ಆಹಾರ ಸುರಕ್ಷತಾ ನಿಯಂತ್ರಕ (FSSAI) ಮುಂದಾಗಿದೆ.
Published on

ನವದೆಹಲಿ: ಗುಣಮಟ್ಟದ ಉದ್ದೇಶದಿಂದ ದೇಶಾದ್ಯಂತ MDH ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳನ್ನು ಪರೀಕ್ಷಿಸಲು ಆಹಾರ ಸುರಕ್ಷತಾ ನಿಯಂತ್ರಕ (FSSAI) ಮುಂದಾಗಿದೆ. ಸರ್ಕಾರದ ಮೂಲವೊಂದು ಈ ಮಾಹಿತಿ ನೀಡಿದೆ. ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನ ಈ ಎರಡು ಕಂಪನಿಗಳು ಕೆಲವು ಮಸಾಲೆ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಪ್ರಸ್ತುತ ಬೆಳವಣಿಗೆಗಳ ದೃಷ್ಟಿಯಿಂದ MDH ಮತ್ತು Everest ಸೇರಿದಂತೆ ಎಲ್ಲಾ ಬ್ರಾಂಡ್‌ಗಳ ಸಾಂಬಾರ ಪದಾರ್ಥಗಳ ಮಾದರಿಗಳನ್ನು ಎಫ್‌ಎಸ್‌ಎಸ್‌ಎಐ ಮಾರುಕಟ್ಟೆಯಿಂದ ಸಂಗ್ರಹಿಸುತ್ತಿದೆ. ಈ ಕಂಪನಿಗಳು ನಿಗದಿತ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಆಹಾರ ಸುರಕ್ಷತೆ ಮತ್ತು ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ (FSSAI) ರಫ್ತು ಮಾಡುವ ಮಸಾಲೆಗಳ ಗುಣಮಟ್ಟವನ್ನು ನಿಯಂತ್ರಿಸುವುದಿಲ್ಲ.

ಸಂಗ್ರಹ ಚಿತ್ರ
Bournvita ಆಯ್ತು, ಈಗ Nestle ಸಂಸ್ಥೆಯ Cerelac ಮೇಲೂ ತೂಗುಗತ್ತಿ; ಸಕ್ಕರೆ ಪ್ರಮಾಣದ ತನಿಖೆಗೆ ಕೇಂದ್ರ ಸರ್ಕಾರ ಆದೇಶ, ಷೇರು ಮೌಲ್ಯ ಕುಸಿತ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ FSSAI, ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಉತ್ಪನ್ನದ ಗುಣಮಟ್ಟವನ್ನು ಪರಿಶೀಲಿಸಲು ನಿಯಮಿತವಾಗಿ ಮಾರುಕಟ್ಟೆಯಿಂದ ಮಸಾಲೆಗಳ ಮಾದರಿಗಳನ್ನು ಸಂಗ್ರಹಿಸುತ್ತದೆ. ಏತನ್ಮಧ್ಯೆ, ಭಾರತೀಯ ಬ್ರಾಂಡ್‌ಗಳಾದ ಎಂಡಿಹೆಚ್ ಮತ್ತು ಎವರೆಸ್ಟ್‌ನ ನಾಲ್ಕು ಮಸಾಲೆ ಮಿಶ್ರಿತ ಉತ್ಪನ್ನಗಳ ಮಾರಾಟದ ಮೇಲೆ ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ವಿಧಿಸಲಾದ ನಿಷೇಧವನ್ನು ಭಾರತೀಯ ಮಸಾಲೆ ಮಂಡಳಿಯು ಪರಿಶೀಲಿಸುತ್ತಿದೆ. ಈ ಮಸಾಲೆಗಳಲ್ಲಿ ಸ್ವೀಕಾರಾರ್ಹ ಮಿತಿಗಿಂತ ಹೆಚ್ಚಿನ ಕೀಟನಾಶಕ 'ಎಥಿಲೀನ್ ಆಕ್ಸೈಡ್' ಕಂಡುಬಂದಿದೆ ಎಂದು ಹೇಳಲಾಗಿದೆ.

ಭಾರತೀಯ ಮಸಾಲೆ ಮಂಡಳಿಯ ನಿರ್ದೇಶಕಿ ಎ ಬಿ ರೆಮಾ ಶ್ರೀ ಮಾಹಿತಿ ನೀಡಿದ್ದು, ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ಈ ಸಂಬಂಧ ತಕ್ಷಣಕ್ಕೆ ಕಂಪನಿಗಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಹಾಂಗ್ ಕಾಂಗ್‌ನ ಆಹಾರ ಸುರಕ್ಷತೆ ಕೇಂದ್ರ (ಸಿಎಫ್‌ಎಸ್) ಗ್ರಾಹಕರನ್ನು ಈ ಉತ್ಪನ್ನಗಳನ್ನು ಖರೀದಿಸದಂತೆ ಮತ್ತು ವ್ಯಾಪಾರಿಗಳನ್ನು ಮಾರಾಟ ಮಾಡದಂತೆ ಕೇಳಿಕೊಂಡಿದೆ. ಆದರೆ ಸಿಂಗಾಪುರ್ ಫುಡ್ ಏಜೆನ್ಸಿ ಅಂತಹ ಮಸಾಲೆಗಳನ್ನು ಹಿಂಪಡೆಯಲು ನಿರ್ದೇಶಿಸಿದೆ. ಈ ಉತ್ಪನ್ನಗಳಲ್ಲಿ MDHನ ಮದ್ರಾಸ್ ಕರಿ ಪೌಡರ್, ಎವರೆಸ್ಟ್ ನ ಫಿಶ್ ಕರಿ ಮಸಾಲಾ, MDH ಸಾಂಬಾರ್ ಮಸಾಲಾ ಮಿಶ್ರ ಮಸಾಲೆ ಪುಡಿ ಮತ್ತು MDH ಕರಿ ಪುಡಿ ಮಿಶ್ರ ಮಸಾಲೆ ಪುಡಿ ಸೇರಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com