ನವದೆಹಲಿ: ಶಿಶುಗಳ ಆಹಾರ ಎಂದೇ ಹೇಳಿಕೊಳ್ಳುತ್ತಿರುವ ನೆಸ್ಲೆ ಸಂಸ್ಥೆಯ ಸೆರೆಲ್ಯಾಕ್ ನಲ್ಲಿ ಮಿತಿ ಮೀರಿ ಸಕ್ಕರೆ ಬಳಸಲಾಗಿದೆ ಎಂಬ ಗಂಭೀರ ಆರೋಪದ ಮೇರೆಗೆ ಕೇಂದ್ರ ಸರ್ಕಾರ ಇದರ ವಿರುದ್ಧ ತನಿಖೆಗೆ ಆದೇಶ ನೀಡಿದೆ.
ಇತ್ತೀಚೆಗಷ್ಟೇ ಅಗತ್ಯಕ್ಕಿಂತ ಯಥೇಚ್ಛ ಪ್ರಮಾಣದಲ್ಲಿ ಸಕ್ಕರೆ ಅಂಶ ಹೊಂದಿದೆ ಎಂಬ ಆರೋಪದ ಮೇರೆಗೆ ಕ್ಯಾಡ್ಬರಿ ಸಂಸ್ಥೆ ಬೋರ್ನ್ ವೀಟಾವನ್ನು 'Health Drinks' ಪಟ್ಟಿಯಿಂದ ಕೈ ಬಿಡಲಾಗಿತ್ತು. ಇದೀಗ ಈ ಪಟ್ಟಿಗೆ ಅದೇ ಆರೋಪದ ಮೇರೆಗೆ ನೆಸ್ಲೆ ಸಂಸ್ಥೆಯ ಪುಟ್ಟ ಶಿಶುಗಳಿಗೆ ನೀಡುವ ಸೆರೆಲಾಕ್ ಕೂಡ ಸೇರ್ಪಡೆಯಾಗುವ ಭೀತಿ ಎದುರಿಸುತ್ತಿದೆ.
ಶಿಶುಗಳ ಆಹಾರ ಎಂದೇ ಹೇಳಿಕೊಳ್ಳುತ್ತಿರುವ ನೆಸ್ಲೆ ಸಂಸ್ಥೆಯ ಸೆರೆಲ್ಯಾಕ್ ನಲ್ಲಿ ಮಿತಿ ಮೀರಿ ಸಕ್ಕರೆ ಬಳಸಲಾಗಿದೆ ಎಂಬ ಗಂಭೀರ ಆರೋಪದ ಮೇರೆಗೆ ಕೇಂದ್ರ ಸರ್ಕಾರ ಇದರ ವಿರುದ್ಧ ತನಿಖೆಗೆ ಆದೇಶ ನೀಡಿದೆ.
ವಿಶ್ವದ ಅತಿದೊಡ್ಡ ಗ್ರಾಹಕರ ಸರಕುಗಳ ಪೂರೈಕೆಯ ಕಂಪೆನಿ ನೆಸ್ಲೆ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಗ್ರಾಹಕರ ಮತ್ತು ಶಿಶುಗಳ ಆಹಾರದಲ್ಲಿ ಅತಿ ಹೆಚ್ಚು ಸಕ್ಕರೆಯನ್ನು ಬಳಸುತ್ತಿದೆ ಎಂಬುದಾಗಿ ಅಧ್ಯಯನವೊಂದರಿಂದ ತಿಳಿದುಬಂದಿದೆಯಂತೆ.
ಯುನೈಟೆಡ್ ಕಿಂಗ್ ಡಮ್ (ಬ್ರಿಟನ್), ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನೆಸ್ಲೆ ಸಕ್ಕರೆ ಮುಕ್ತ ಆಹಾರವನ್ನು ಮಾರಾಟ ಮಾಡುತ್ತಿದ್ದರೆ ಏಷ್ಯಾ, ಆಫ್ರಿಕ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ನೆಸ್ಲೆ ಮಗುವಿನ ಆಹಾರ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇರಿಸುತ್ತಿದೆ ಎಂದು ಅಧ್ಯಯನದಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಹೆಚ್ಚಿನ ಸಕ್ಕರೆ ಅಂಶವಿರುವ ಸೆರೆಲ್ಯಾಕ್ ಅನ್ನು ಶಿಶುಗಳಿಗೆ ನೀಡಿದರೆ ಮಕ್ಕಳಲ್ಲಿ ಬೊಜ್ಜು ಮತ್ತು ಇತರೆ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಲಾಗಿದೆ. ಸೆರೆಲ್ಯಾಕ್ ನಲ್ಲಿ ಹೆಚ್ಚಿನ ಸಕ್ಕರೆ ಅಂಶ ಸೇರಿಸುವ ಮೂಲಕ ನೆಸ್ಲೆ ಸಂಸ್ಥೆ ಬೊಜ್ಜು ಮತ್ತು ದೀರ್ಘಕಾಲದ ಕಾಯಿಲೆಗಳನ್ನು ನಿಗ್ರಹಿಸುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಹೇಳಲಾಗಿದೆ.
ಲೇಬಲ್ ಗಳಲ್ಲಿ ಸಕ್ಕರೆ ಮಾಹಿತಿ ಕೈ ಬಿಟ್ಟ ನೆಸ್ಲೆ
ಇನ್ನು ಈ ಹಿಂದೆ ಬೋರ್ನ್ ವೀಟಾ ಕುರಿತ ವರದಿ ವ್ಯಾಪಕ ವೈರಲ್ ಆಗುತ್ತಲೇ ನೆಸ್ಲೆ ಕಂಪೆನಿ ಆಹಾರ ಉತ್ಪನ್ನಗಳ ಲೇಬಲ್ ಗಳಲ್ಲಿ ಪ್ಯಾಕೇಜಿಂಗ್, ವಿಟಮಿನ್ ಗಳು, ಖನಿಜಗಳು ಮತ್ತು ಉತ್ಪನ್ನಗಳಲ್ಲಿರುವ ಪೋಷಕಾಂಶಗಳ ವಿವರವನ್ನು ನೀಡುತ್ತಿದೆ ಆದರೆ ಉತ್ಪನ್ನಗಳಿಗೆ ಸೇರಿಸಿದ ಸಕ್ಕರೆ ಮಾಹಿತಿಯನ್ನು ಕೈ ಬಿಟ್ಟಿದೆ. ಇದರಿಂದಾಗಿ ನೆಸ್ಲೆ ಕಂಪೆನಿಯ ಮೇಲೆ ಅನುಮಾನ ಹುಟ್ಟಿಕೊಂಡಿದೆ.
ಸತ್ಯ ಒಪ್ಪಿಕೊಂಡ ನೆಸ್ಲೆ
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ನೆಸ್ಲೆ ಕಂಪೆನಿ ಉತ್ಪನ್ನಗಳಲ್ಲಿ ಸೇರಿಸಲಾದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದಾಗಿ ತಿಳಿಸಿದೆ. ಆದರೆ ಈ ಅಧ್ಯಯನದಿಂದ ಹೊರಬಿದ್ದ ಮಾಹಿತಿಯಿಂದಾಗಿ ನೆಸ್ಲೆ ಆಹಾರ ಉತ್ಪನ್ನಗಳ ಮಾರಾಟದಲ್ಲಿ ಹಿನ್ನೆಡೆಯನ್ನು ಎದುರಿಸುವುದು ಖಂಡಿತ ಎನ್ನಲಾಗಿದೆ. ಒಟ್ಟಾರೆ ಮಕ್ಕಳ ಜೀವದ ಜೊತೆ ಆಟವಾಡುವಂತಹ ಆಹಾರ ಉತ್ಪನ್ನಗಳ ಕಂಪನಿಯನ್ನು ಬುಡಸಹಿತ ಕಿತ್ತು ಹಾಕುವುದು ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ.
ನೆಸ್ಲೆ ಇಂಡಿಯಾ ಷೇರು ಮೌಲ್ಯ ಕುಸಿತ
ಅತ್ತ ನೆಸ್ಲೆ ಸಂಸ್ಥೆಯ ಸೆರೆಲ್ಯಾಕ್ ನ ಕುರಿತ ವರದಿ ಬಹಿರಂಗವಾಗುತ್ತಲೇ ಇತ್ತ ಷೇರುಮಾರುಕಟ್ಟೆಯಲ್ಲಿ ಸಂಸ್ಥೆಯ ಷೇರುಗಳು ತಲ್ಲಣಿಸಿದೆ. ಮಧ್ಯಾಹ್ನ 2.45 ರ ಹೊತ್ತಿಗೆ, ನೆಸ್ಲೆ ಇಂಡಿಯಾದ ಷೇರುಗಳು ಶೇಕಡಾ 3.6 ರಷ್ಟು ಕುಸಿತಕಂಡು ಪ್ರತೀ ಷೇರಿನ ಮೌಲ್ಯ 2,454 ರೂಯಿಂದ 2,410 ರೂ.ಗೆ ಕುಸಿದಿದೆ.
Advertisement