'Health Drinks' ಪಟ್ಟಿಯಿಂದ Bournvita ತೆಗೆದುಹಾಕಿ: ಕೇಂದ್ರ ಸರ್ಕಾರ ಆದೇಶ

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಖ್ಯಾತ ಮಕ್ಕಳ ಪೇಯ Bournvitaವನ್ನು ಕೂಡಲೇ 'Health Drinks' ಪಟ್ಟಿಯಿಂದ ತೆಗೆದುಹಾಕುವಂತೆ ಆದೇಶ ನೀಡಿದೆ.
Bournvita is not a Health Drink
ಬೋರ್ನ್ ವಿಟಾ ಆರೋಗ್ಯ ಪಾನೀಯವಲ್ಲ!
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಖ್ಯಾತ ಮಕ್ಕಳ ಪೇಯ Bournvitaವನ್ನು ಕೂಡಲೇ 'Health Drinks' ಪಟ್ಟಿಯಿಂದ ತೆಗೆದುಹಾಕುವಂತೆ ಆದೇಶ ನೀಡಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಈ ಸೂಚನೆ ನೀಡಿದ್ದು, ಅವರ ಪೋರ್ಟಲ್ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಬೌರ್ನ್‌ವಿಟಾ ಸೇರಿದಂತೆ ಎಲ್ಲಾ ಪಾನೀಯಗಳನ್ನು 'ಹೆಲ್ತ್ ಡ್ರಿಂಕ್ಸ್' ವರ್ಗದಿಂದ ತೆಗೆದುಹಾಕುವಂತೆ ನಿರ್ದೇಶಿಸಿದೆ.

Bournvita is not a Health Drink
ಪೌಷ್ಠಿಕಾಂಶ ಬಗ್ಗೆ ಶಾಲೆಗಳಲ್ಲಿ ಒಂದು ವಿಷಯವಾಗಿ ಮಕ್ಕಳಿಗೆ ಕಲಿಸಬೇಕು: ಆಹಾರ ತಜ್ಞೆ ಶಾಲಿನಿ ಮಂಗ್ಲಾನಿ

ಎನ್‌ಸಿಪಿಸಿಆರ್‌ನ ತನಿಖೆಯಲ್ಲಿ ಬೌರ್ನ್‌ವಿಟಾದಲ್ಲಿ ನಿಯಮಗಳಿಗಿಂತ ಹೆಚ್ಚು ಸಕ್ಕರೆ ಮಟ್ಟವನ್ನು ಹೊಂದಿದೆ, ಇದು ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚು ಎಂದು ಕಂಡುಹಿಡಿದಿದೆ. ಈ ಹಿಂದೆ, ಸುರಕ್ಷತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸಲು ವಿಫಲವಾದ ಮತ್ತು ಪವರ್ ಸಪ್ಲಿಮೆಂಟ್‌ಗಳನ್ನು 'ಆರೋಗ್ಯ ಪಾನೀಯಗಳು' ಎಂದು ಬಿಂಬಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು NCPCR ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಗೆ ಸೂಚಿಸಿತ್ತು.

ಡೈರಿ ಆಧಾರಿತ ಅಥವಾ ಮಾಲ್ಟ್ ಆಧಾರಿತ ಪಾನೀಯಗಳನ್ನು 'ಆರೋಗ್ಯ ಪಾನೀಯಗಳು' ಎಂದು ಲೇಬಲ್ ಮಾಡುವುದರ ವಿರುದ್ಧ ಇ-ಕಾಮರ್ಸ್ ಪೋರ್ಟಲ್‌ಗಳಿಗೆ ಸೂಚನೆ ನೀಡಿತ್ತು.

ಯೂಟ್ಯೂಬ್ ವಿಡಿಯೋದಿಂದ ಬೆಳಕಿಗೆ

ಬೌರ್ನ್ವಿಟಾದ 'ಅನಾರೋಗ್ಯಕರ' ಸ್ವಭಾವದ ಬಗ್ಗೆ ವಿವಾದವು ಮೊದಲು ಹುಟ್ಟಿಕೊಂಡಿದ್ದು ಯೂಟ್ಯೂಬರ್ ಒಬ್ಬ ತನ್ನ ವೀಡಿಯೊದಲ್ಲಿ ಪೌಡರ್ ಸಪ್ಲಿಮೆಂಟ್ ಕುರಿತು ವಿಡಿಯೋ ಮಾಡಿದಾಗ. ಆತ ತನ್ನ ಪರೀಕ್ಷೆಯಲ್ಲಿ ಬೋರ್ನ್ ವಿಟಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಇದೆ ಎಂದು ಹೇಳಿದ್ದ. ಅಲ್ಲದೆ ಅದರಲ್ಲಿರುವ ಅತಿಯಾದ ಸಕ್ಕರೆ, ಕೋಕೋ ಮತ್ತು ಹಾನಿಕಾರಕ ಕೃತಕ ಬಣ್ಣಗಳು ಕ್ಯಾನ್ಸರ್ ಸೇರಿದಂತೆ ಮಕ್ಕಳಲ್ಲಿ ಗಂಭೀರವಾದ ಆರೋಗ್ಯದ ಅಪಾಯಗಳಿಗೆ ಕಾರಣವಾಗಬಹುದು ಎಂದು ತಿಳಿಸಿದ್ದ.

ಈ ವಿಡಿಯೋ ವ್ಯಾಪಕ ವೈರಲ್ ಆಗಿ ಸಂಸ್ಥೆಯ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯ ಹೆಚ್ಚಾಗಿತ್ತು. ಇದೀಗ ಬೋರ್ನ್ ವಿಟಾ ಪೇಯವನ್ನು 'ಆರೋಗ್ಯ ಪಾನೀಯ' ಪಟ್ಟಿಯಿಂದ ಕೈ ಬಿಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಅಂದಹಾಗೆ "ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್ (NCPCR), CRPC ಕಾಯಿದೆ 2005 ರ ಸೆಕ್ಷನ್ 14 ರ ಅಡಿಯಲ್ಲಿ ಅದರ ವಿಚಾರಣೆಯ ನಂತರ, 2005 ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (CPCR) ಕಾಯಿದೆಯ ಸೆಕ್ಷನ್ (3) ಅಡಿಯಲ್ಲಿ ರಚಿತವಾದ ಶಾಸನಬದ್ಧ ಸಂಸ್ಥೆಯಾಗಿದೆ.

ಎಫ್‌ಎಸ್‌ಎಸ್ ಕಾಯಿದೆ 2006 ರ ಅಡಿಯಲ್ಲಿ ವ್ಯಾಖ್ಯಾನಿಸಲಾದ 'ಆರೋಗ್ಯ ಪಾನೀಯ', ಎಫ್‌ಎಸ್‌ಎಸ್‌ಎಐ ಮತ್ತು ಮೊಂಡೆಲೆಜ್ ಇಂಡಿಯಾ ಫುಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ನಿಯಮಗಳು ಮತ್ತು ನಿಬಂಧನೆಗಳ ನಿಯಮಗಳನ್ನು ಪಾಲಿಸಬೇಕು" ಎಂದು ಸಚಿವಾಲಯವು ಏಪ್ರಿಲ್ 10 ರ ಅಧಿಸೂಚನೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com